ಕಾನ್ಸ್‌ಟೇಬಲ್ ಹುದ್ದೆ ಸಿಕ್ಕ ಬಳಿಕ ಪತಿಯಿಂದ ದೂರವಾದ ಪತ್ನಿ: ಕಲಿಕೆಗೆ ಆಸರೆಯಾಗಿದ್ದ ಪತಿ
Team Udayavani, Jul 10, 2023, 10:59 AM IST
ಲಕ್ನೋ: ಪತ್ನಿಯನ್ನು ಓದಿಸಿ ಆಕೆಯನ್ನು ಸರ್ಕಾರಿ ಅಧಿಕಾರಿಯನ್ನಾಗಿ ಮಾಡಿದ ಪತಿಗೆ, ಪತ್ನಿ ಅಕ್ರಮ ಸಂಬಂಧವೆಸಗಿ ಮೋಸ ಮಾಡಿದ ಅಲೋಕ್ ಮೌರ್ಯ ಹಾಗೂ ಜ್ಯೋತಿ ಮೌರ್ಯ ಅವರ ಪ್ರಕರಣ ಸಂಚಲವನ್ನು ಸೃಷ್ಟಿಸಿದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಂಥದ್ದೇ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನ ಮೇಜಾದಲ್ಲಿ ಈ ಘಟನೆ ನಡೆದಿದೆ. ತನ್ನ ಪತ್ನಿ ರೇಷ್ಮಾ ಯುಪಿ ಪೊಲೀಸ್ ನಲ್ಲಿ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾದ ಬಳಿಕ ತನ್ನನು ತೊರೆದಿದ್ದಾಳೆ ಪತಿ ರವೀಂದ್ರ ಆರೋಪಿಸಿದ್ದಾರೆ.
ನನ್ನ ಪತ್ನಿ ರೇಷ್ಮಾಳಿಗೆ ಯುಪಿ ಪೊಲೀಸ್ ನಲ್ಲಿ ಕಾನ್ಸ್‌ಟೇಬಲ್ ಆಗುವ ಕನಸು ಇತ್ತು. ಅದಕ್ಕಾಗಿ ನಾನು ಆಕೆಯ ಶಿಕ್ಷಣಕ್ಕಾಗಿ ನನ್ನ ಒಂದು ಜಮೀನು ಮಾರಿದೆ. ಪದವಿ ಶುಲ್ಕ ಪಾವತಿಸಿ ಆಕೆಯ ಶಿಕ್ಷಣಕ್ಕೆ ಬೆಂಬಲ ನೀಡಿದ್ದೇನೆ ಎಂದು ರವೀಂದ್ರ ಹೇಳುತ್ತಾರೆ.
ಪತಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರೇಷ್ಮಾ “ರವೀಂದ್ರ ನನ್ನ ಮೇಲೆ ಅನೇಕ ಬಾರಿ ದೈಹಿಕವಾಗಿ ಹಲ್ಲೆಗೈದಿದ್ದಾರೆ. ಅವಮಾನ ಮಾಡಿದ್ದಾರೆ. ಎಲ್ಲರ ಮುಂದೆ ಮಾತನಾಡುವುದು ಬೇಡ ಎಂದು ಮೌನವಾಗಿದ್ದೆ. ಅವರು ಮಾಡಿರುವ ಆರೋಪಗಳೆಲ್ಲ ನಿರಾಧಾರವಾಗಿದೆ” ಎಂದು “ಇಂಡಿಯಾ ಟುಡೇ”ಗೆ ಹೇಳಿದ್ದಾರೆ.
ಇದನ್ನೂ ಓದಿ: ಕಳ್ಳತನ ಆರೋಪ: ಬೆತ್ತಲೆ ಮಾಡಿ ಪೈಪ್‌ಗಳಿಂದ ಥಳಿತ; ಮಧ್ಯಪ್ರದೇಶದಲ್ಲಿ ಮತ್ತೊಂದು ಹೇಯ ಘಟನೆ
2017 ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ರವೀಂದ್ರ – ರೇಷ್ಮಾ ಅವರ ಸಂಬಂಧ ಒಂದು ವರ್ಷದವರೆಗೂ ಚೆನ್ನಾಗಿಯೇ ಇತ್ತು. ಈ ಸಂದರ್ಭದಲ್ಲಿ ರವೀಂದ್ರ ಉತ್ತರ ಪ್ರದೇಶದ ಹೊರಗಿರುವ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ರೇಷ್ಮಾ ಮನೆಯಲ್ಲಿಯೇ ಇದ್ದು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ರೇಷ್ಮಾ ಯುಪಿ ಪೊಲೀಸ್ ನಲಿ ಆಯ್ಕೆಯಾದ ಬಳಿಕ ಆಕೆ ನನ್ನಿಂದ ಅಂತರ ಕಾಯ್ದುಕೊಂಡಳು ಎಂದು ರವೀಂದ್ರ ಹೇಳುತ್ತಾರೆ.
ರವೀಂದ್ರ ಮತ್ತು ರೇಷ್ಮಾ ಗಾಜಿಪುರಕ್ಕೆ ಹೋಗಿದ್ದರು. ರವೀಂದ್ರ ರೇಷ್ಮಾ ಅವರೊಂದಿಗೆ ವಾಪಾಸ್ ಬಂದಿರಲಿಲ್ಲ. ರವೀಂದ್ರ ಅವರ ಕುಟುಂಬ ಅಹಿತಕರ ಘಟನೆ ನಡೆದಿರಬಹುದು ಎಂದು ಶಂಕಿಸಿ ಈ ಬಗ್ಗೆ ಮೇಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದೀಗ ಪತ್ನಿಯನ್ನು ನಾನು ಕ್ಷಮಿಸಲು ಸಿದ್ದನಾಗಿದ್ದೇನೆ. ಆಕೆ ನಾನೊಂದಿಗೆ ಮತ್ತೆ ಬರಲಿ ಎಂದು ಹೇಳುತ್ತಿದ್ದಾರೆ.
ಅವಳನ್ನು ಮಗಳಂತೆ ನೋಡಿಕೊಂಡೆವು. ಆಕೆಗೆ ಶಿಕ್ಷಣ ಕೊಡಿಸಿದೆವು. ರೇಷ್ಮಾ ಹಿಂತಿರುಗಲು ನಿರ್ಧರಿಸಿದರೆ ಭವಿಷ್ಯದ ಯಾವುದೇ ಕೌಟುಂಬಿಕ ಸಮಸ್ಯೆಗಳನ್ನು ತಪ್ಪಿಸಲು ನಾವು ಇನ್ನೂ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದು ರವೀಂದ್ರಾವರ ತಾಯಿ ಹೇಳುತ್ತಾರೆ.
ತನ್ನ ಪತಿಯೊಂದಿಗೆ ಮತ್ತೆ ಒಂದಾಗಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ, ರವೀಂದ್ರ ತನಗೆ ಮಾಡಿದ ಅವಮಾನಕ್ಕೆ ಕ್ಷಮೆ ಕೇಳಿ ಗೌರವದಿಂದ ನಡೆದುಕೊಂಡರೆ ಆತನೊಂದಿಗೆ ಹೋಗಲು ಸಿದ್ದನೆಂದು ರೇಷ್ಮಾ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.