ಐಸಿಐಸಿಐ ಸಾಲ ಅವ್ಯವಹಾರ
Team Udayavani, Mar 30, 2018, 10:30 AM IST
ಹೊಸದಿಲ್ಲಿ: ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಅವ್ಯವಹಾರ ಪ್ರಕರಣಗಳ ಸಾಲಿಗೆ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಕೂಡ ಸೇರಿಕೊಂಡಿದೆ. ಬ್ಯಾಂಕ್ನ ಸಿಇಒ ಚಂದಾ ಕೊಚ್ಚಾರ್ ಪತಿಯ ಮೂಲಕ ವಿಡಿಯೋಕಾನ್ ಸಂಸ್ಥೆಯು 3,250 ಕೋಟಿ ರೂ. ಸಾಲ ಪಡೆದಿರುವ ಅಕ್ರಮ ಇದೀಗ ಬಹಿರಂಗವಾಗಿದೆ. ಈ ಮಧ್ಯೆ ಸಿಇಒ ಚಂದಾರನ್ನು ಬ್ಯಾಂಕ್ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದ್ದು, ದೊಡ್ಡ ಮೊತ್ತದ ಸಾಲವನ್ನು ಮಂಡಳಿಯ ಸಾಲ ಸಮಿತಿಯು ನಿರ್ಧರಿಸುತ್ತದೆ. ಸಮಿತಿಗೆ ಚಂದಾ ಮುಖ್ಯಸ್ಥೆಯಲ್ಲ ಎಂದಿದೆ. ಮತ್ತೂಂದು ಪ್ರಕರಣದಲ್ಲಿ, ಷೇರು ಮಾರಾಟ ನಿಯಮ ಮೀರಿದ್ದಕ್ಕಾಗಿ ಬ್ಯಾಂಕ್ಗೆ ಆರ್ಬಿಐ 58.9 ಕೋಟಿ ದಂಡ ವಿಧಿಸಿದೆ.
ಏನಿದು ಅವ್ಯವಹಾರ?: ಡಿಸೆಂಬರ್ 2008ರಲ್ಲಿ ವಿಡಿಯೋಕಾನ್ ಗ್ರೂಪ್ನ ವೇಣುಗೋಪಾಲ ಧೂತ್, ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಸಹಭಾಗಿತ್ವದಲ್ಲಿ ನುಪವರ್ ರಿನ್ಯೂವೆಬಲ್ಸ್ ಪ್ರೈ ಲಿ ಎಂಬ ಕಂಪನಿ ಸ್ಥಾಪಿಸಿದ್ದರು. ನಂತರ 64 ಕೋಟಿ ಸಾಲವನ್ನು ಧೂತ್ ನೇತೃತ್ವದ ಕಂಪನಿಯಿಂದ ನುಪವರ್ಗೆ ನೀಡಲಾಯಿತು. ಆದರೆ ಕೆಲವೇ ದಿನಗಳಲ್ಲಿ ದೀಪಕ್ ನೇತೃತ್ವದ ಟ್ರಸ್ಟ್ಗೆ ಕೇವಲ 9 ಲಕ್ಷ ರೂ.ಗೆ ನುಪವರ್ ಕಂಪನಿ ಮಾರಲಾಗಿತ್ತು. ಮಾರುವುದಕ್ಕೆ 6 ತಿಂಗಳ ಮೊದಲು ಐಸಿಐಸಿಐ ಬ್ಯಾಂಕ್ನಿಂದ ವಿಡಿಯೋಕಾನ್ ಗ್ರೂಪ್ಗೆ 3250 ಕೋಟಿ ರೂ. ಸಾಲ ನೀಡಲಾಗಿತ್ತು. ಇದರ ಶೇ.86ರಷ್ಟು ಮೊತ್ತ ಮರುಪಾವತಿ ಆಗಿಲ್ಲ. 2017ರಲ್ಲಿ ವಿಡಿಯೋಕಾನ್ ಸಾಲವನ್ನು ಮರುಪಾವತಿ ಆಗದ ಸಾಲ ಎಂದು ದಾಖಲಿಸಲಾಗಿತ್ತು ಎಂದು ‘ದಿ ಇಂಡಿಯನ್
ಎಕ್ಸ್ಪ್ರೆಸ್’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.