ವಿಮೋಚನೆ Vs ಏಕೀಕರಣ; ತೆಲಂಗಾಣದಲ್ಲಿ ಒಂದೇ ಕಾರ್ಯಕ್ರಮ, ಭಿನ್ನ ಹೆಸರು
ಪ್ರತ್ಯೇಕ ಸ್ಥಳಗಳಲಿ ಅಮಿತ್ ಶಾ, ಸಿಎಂ ಕೆಸಿಆರ್ ಧ್ವಜಾರೋಹಣ
Team Udayavani, Sep 18, 2022, 5:45 AM IST
ಹೈದರಾಬಾದ್: ಶನಿವಾರ ತೆಲಂಗಾಣದಲ್ಲಿ ಬಿಜೆಪಿ ಮತ್ತು ಟಿಆರ್‌ಎಸ್ ಪಕ್ಷಗಳು ಒಂದೇ ಕಾರ್ಯಕ್ರಮವನ್ನು ಭಿನ್ನ ಹೆಸರಲ್ಲಿ ಆಚರಿಸಿಕೊಂಡಿವೆ. ನಿಜಾಮರ ಆಡಳಿತದಿಂದ ಹೈದರಾಬಾದ್ ಸ್ವತಂತ್ರಗೊಂಡ ನೆನಪಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ನಲ್ಲಿ ಧ್ವಜಾರೋಹಣಗೈದು “ಹೈದರಾಬಾದ್ ವಿಮೋಚನಾ ದಿನ’ವನ್ನು ಆಚರಿಸಿದ್ದಾರೆ. ಅಲ್ಲಿಂದ ಸ್ವಲ್ಪ ದೂರದಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ಭಾರತದ ಒಕ್ಕೂಟಕ್ಕೆ ಹೈದರಾಬಾದ್ ಸೇರ್ಪಡೆಗೊಂಡ ನೆನಪಿನಲ್ಲಿ ಧ್ವಜಾರೋಹಣ ನೆರವೇರಿಸಿ, “ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನ’ವನ್ನು ಆಚರಿಸಿದ್ದಾರೆ. ಬಳಿಕ ಇಬ್ಬರು ನಾಯಕರೂ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ರಜಾಕಾರರ ಭಯ ಮಾಸಿಲ್ಲ: ಶಾ
– 75 ವರ್ಷಗಳೇ ಕಳೆದರೂ ಇಲ್ಲಿ ಆಡಳಿತದಲ್ಲಿದ್ದ ಸರಕಾರಗಳು ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುವ ಧೈರ್ಯ ಮಾಡಲಿಲ್ಲ.
-ಚುನಾವಣೆ, ಪ್ರತಿಭಟನೆಗಳ ವೇಳೆ ಅನೇಕರು(ಕೆಸಿಆರ್) ವಿಮೋಚನಾ ದಿನ ಆಚರಿಸುವುದಾಗಿ ವಾಗ್ಧಾನ ಮಾಡಿದ್ದರು. ಆದರೆ, ಗೆದ್ದ ಬಳಿಕ ರಜಾಕಾರರ
(ನಿಜಾಮರ ಸಶಸ್ತ್ರ ಬೆಂಬಲಿಗರು)ಗಳ ಭಯದಿಂದ ಹಿಂದೇಟು ಹಾಕಿದರು.
– ಈಗ ಅಧಿಕೃತವಾಗಿ “ಹೈದರಾಬಾದ್ ವಿಮೋಚನಾ ದಿನ’ ಆಚರಣೆಯ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ.
– ಇನ್ನಾದರೂ ರಜಾಕಾರರ ಬಗ್ಗೆ ಭಯ ಬಿಡಿ. ಅವರು ಈ ದೇಶದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನಾವು ಸ್ವಾತಂತ್ರ್ಯ ಪಡೆದು 75 ವರ್ಷಗಳೇ ಕಳೆದವು.
– ಸರ್ದಾರ್ ಪಟೇಲರು ಇಲ್ಲದೇ ಇರುತ್ತಿದ್ದರೆ ಹೈದರಾಬಾದ್ ವಿಮೋಚನೆಗೊಳ್ಳಲು ಇನ್ನೂ ಅನೇಕ ವರ್ಷಗಳೇ ಹಿಡಿಯುತ್ತಿದ್ದವು. ರಜಾಕಾರರನ್ನು ಸೋಲಿಸುವವರೆಗೂ ಅಖಂಡ ಭಾರತದ ಕನಸು ನನಸಾಗಲಾರದು ಎಂಬುದು ಅವರಿಗೆ ಗೊತ್ತಿತ್ತು.
ದ್ವೇಷ ಹುಟ್ಟಿಸಲು ಬಿಡಲ್ಲ: ಕೆಸಿಆರ್
– ಸೆ.17ರ ಐತಿಹಾಸಿಕ ಘಟನೆಯೊಂದಿಗೆ ಸಂಬಂಧವೇ ಇಲ್ಲದವರು ಈಗ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲೆಂದು ತೆಲಂಗಾಣದ ಉಜ್ವಲ ಇತಿಹಾಸವನ್ನು ಮಲಿನಗೊಳಿಸುತ್ತಿದ್ದಾರೆ
– ದೇಶ ಮತ್ತು ತೆಲಂಗಾಣದಲ್ಲಿರುವ ಕೋಮುಶಕ್ತಿಗಳು ಸಮಾಜವನ್ನು ವಿಭಜಿಸಿ, ಜನರ ನಡುವೆ ದ್ವೇಷ ಹುಟ್ಟುಹಾಕಲು ಪ್ರಯತ್ನಿಸುತ್ತಿವೆ.
– ಧಾರ್ಮಿಕ ಮತಾಂಧತೆ ಹೆಚ್ಚಿದರೆ, ಅದು ದೇಶದ ಜೀವನಾಡಿಯನ್ನೇ ನಾಶ ಮಾಡುತ್ತದೆ. ಅದರಿಂದ ಮಾನವ ಸಂಬಂಧವೂ ಹದಗೆಡುತ್ತದೆ.
– ಕೆಲವರು ತಮ್ಮ ವಿಷಕಾರಿ ಹೇಳಿಕೆಗಳ ಮೂಲಕ ದ್ವೇಷ ಹುಟ್ಟಿಸುತ್ತಿದ್ದಾರೆ. ಮತಾಂಧತೆಯು ದೇಶಕ್ಕೆ ಅತ್ಯಂತ ಅಪಾಯಕಾರಿ
– ಈ ಭ್ರಷ್ಟ ಹಾಗೂ ದುಷ್ಟಶಕ್ತಿಗಳ ಪ್ರಯತ್ನವನ್ನು ತೆಲಂಗಾಣದ ಜನತೆ ವಿಫಲಗೊಳಿಸಬೇಕು. ಇದನ್ನು ನೀವು ಮರೆತರೆ ಕಣ್ಣು ಮಿಟುಕಿಸುವಷ್ಟರಲ್ಲಿ ನಮ್ಮ ಇಡೀ ಸಮಾಜವು ಪ್ರಕ್ಷುಬ್ಧತೆಯ ಬೆಂಕಿಗೆ ಬೀಳುವ ಎಲ್ಲ ಅಪಾಯವೂ ಇದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.