ಪಿಒಕೆಗೆ ಐಎಸ್‌-ಕೆಪಿ?: ಕೇರಳದ 25 ಉಗ್ರರ ಕುಮ್ಮಕ್ಕು: ಗುಪ್ತಚರ ವರದಿ ಎಚ್ಚರಿಕೆ

Team Udayavani, Sep 10, 2021, 10:25 AM IST

ಪಿಒಕೆಗೆ ಐಎಸ್‌-ಕೆಪಿ?: ಕೇರಳದ 25 ಉಗ್ರರ ಕುಮ್ಮಕ್ಕು: ಗುಪ್ತಚರ ವರದಿ ಎಚ್ಚರಿಕೆ

ಹೊಸದಿಲ್ಲಿ: ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಇಸ್ಲಾಮಿಕ್‌ ಸ್ಟೇಟ್‌- ಖೊರೊಸಾನ್‌ ಪ್ರಾವಿನ್ಸ್‌ (ಐಎಸ್‌-ಕೆಪಿ) ಜತೆಗೂಡಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ವನ್ನು ನೆಲೆಯಾಗಿಸಿಕೊಂಡು ದೇಶದಲ್ಲಿ ದಾಳಿ ಎಸಗಲು ಸಂಚು ರೂಪಿಸುತ್ತಿವೆ. ಅದಕ್ಕಾಗಿ ಕೇರಳದಿಂದ ಐಎಸ್‌ಗೆ ಸೇರ್ಪಡೆಗೊಂಡ 25 ಮಂದಿಯನ್ನು ಬಳಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಗುರುವಾರ ಮುನ್ನೆಚ್ಚರಿಕೆ ನೀಡಿವೆ.

ಅಫ್ಘಾನ್‌ ಜೈಲುಗಳಲ್ಲಿ ಬಂಧಿತರಾಗಿದ್ದ ಐಎಸ್‌-ಕೆಪಿಯ ಉಗ್ರರು ಬಂಧಮುಕ್ತರಾಗಿದ್ದಾರೆ. ಇವರಲ್ಲಿ ಕೆಲವರು ಪಾಕ್‌ ಪ್ರವೇಶಿಸಿದ್ದಾರೆ. ಐಎಸ್‌ಐಯು ಅವರನ್ನು ಪಿಒಕೆಗೆ ಕಳುಹಿಸಲು ಸಂಚು ರೂಪಿಸುತ್ತಿದ್ದು, ಜಮ್ಮು- ಕಾಶ್ಮೀರದಲ್ಲಿ ತನ್ನ ಕುತ್ಸಿತ ಕಾರ್ಯಸೂಚಿ ಜಾರಿಗೆ ಮುಂದಾಗಿದೆ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಐಎಸ್‌-ಕೆಪಿಯ ಕಮಾಂಡರ್‌ ಮುನ್ಸಿಬ್‌ ಎಂಬಾತ ಇತ್ತೀಚೆಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದು, ಅನೇಕ ಉಗ್ರ ಸಂಘಟನೆಗಳ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದಾನೆ ಎಂಬ ಅಂಶವನ್ನೂ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ.

ಅಫ್ಘಾನ್‌ನಲ್ಲಿ ತಾಲಿಬಾನ್‌ ಪ್ರಬಲಗೊಳ್ಳುತ್ತಲೇ ಪಾಕಿಸ್ಥಾನದ ಐಎಸ್‌ಐ ತನ್ನ ಭಾರತ ವಿರೋಧಿ ಚಟುವಟಿಕೆ ಹೆಚ್ಚಿಸಿದೆ. ಅಫ್ಘಾನ್‌ನ ಹೊಸ ಹಂಗಾಮಿ ಸರಕಾರದಲ್ಲಿ ಹಕ್ಕಾನಿ ನೆಟ್‌ವರ್ಕ್‌ನ ಪ್ರಮುಖರು ಮತ್ತು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿರುವ 17 ಮಂದಿ ಆಯಕಟ್ಟಿನ ಹುದ್ದೆ ಪಡೆಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಿಒಕೆಯಲ್ಲಿರುವ ಉಗ್ರರ ತರಬೇತಿ  ಶಿಬಿರಗಳಲ್ಲಿ ಚಟುವಟಿಕೆ ಬಿರುಸುಗೊಂಡಿವೆ.

ಪಶ್ತೂನ್‌ ಭಾಷಿಕರೂ ಇದ್ದಾರೆ :

ಗುಪ್ತಚರ ಸಂಸ್ಥೆಗಳ ವರದಿಯ ಪ್ರಕಾರ ಅಫ್ಘಾನ್‌ನ ಪಶ್ತೂನ್‌ ಭಾಷೆ ಮಾತನಾಡುವ ಕೆಲವು ಉಗ್ರರು ಕೂಡ ಪಿಒಕೆಯ ವಿವಿಧ ಭಾಗಗಳಲ್ಲಿ ಗೋಚರಿಸಿದ್ದಾರೆ. ಇದುವರೆಗೆ ಪಾಕ್‌ ಪ್ರೇರಿತ ಉಗ್ರರು ಪಿಒಕೆಯ ತರಬೇತಿ ಶಿಬಿರಗಳನ್ನು ಬಳಕೆ ಮಾಡುತ್ತಿದ್ದರು. ಈಗ ಐಎಸ್‌-ಕೆಪಿ ಉಗ್ರರು ಕೂಡ ಅವುಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆಯಲ್ಲಿ ಪ್ರಸ್ತಾವಿಸಲಾಗಿದೆ.

ಗೃಹ ಸಚಿವ ಷಾ ಸಭೆ :

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಪರಿ ಶೀಲನೆ ನಡೆಸಲಾಗಿದೆ. ಅಫ್ಘಾನಿಸ್ಥಾನ ವನ್ನು ತಾಲಿಬಾನ್‌ ವಶಪಡಿಸಿಕೊಂಡ ಬಳಿಕ ಮತ್ತು ಐಎಸ್‌-ಕೆಪಿ ಉಗ್ರರು ಪಿಒಕೆಗೆ ಲಗ್ಗೆ ಹಾಕಲಿದ್ದಾರೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.

ಅಫ್ಘಾನ್‌ನತ್ತ ಲಷ್ಕರ್‌, ಜೈಶ್‌ ಗಮನ ಹರಿಸಿರುವ ಬಗ್ಗೆ ಚರ್ಚೆ ನಡೆಸ ಲಾಗಿದೆ. ಉಗ್ರರ ನುಸುಳುವಿಕೆ ತಡೆ ಯಲು ಅನುಸರಿಸಬೇಕಾದ ಮುನ್ನೆ ಚ್ಚರಿಕೆ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್‌ ದೋವಲ್‌, ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ, ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ, ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ ಮುಖ್ಯಸ್ಥ ಸಮಂತ್‌ ಗೋಯಲ್‌ ಹಾಜರಿದ್ದರು.

ಉಗ್ರರಿಗೆ ಬೆಂಬಲ ಬೇಡ :

ಅಫ್ಘಾನ್‌ ನೆಲದಲ್ಲಿ ಇತರ ರಾಷ್ಟ್ರಗಳ ವಿರುದ್ಧ ಉಗ್ರ ಕೃತ್ಯಗಳನ್ನು ಎಸಗಲು ಅವಕಾಶ ನೀಡ ಬಾರದು ಎಂದು ಬ್ರಿಕ್ಸ್‌ ರಾಷ್ಟ್ರಗಳ ಒಕ್ಕೂಟ ಗುರು ವಾರ ಪ್ರತಿಪಾದಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತ, ಬ್ರೆಜಿಲ್‌, ರಷ್ಯಾ, ಚೀನ, ದಕ್ಷಿಣ ಆಫ್ರಿಕಗಳನ್ನು ಒಳಗೊಂಡ ಬ್ರಿಕ್ಸ್‌  ಒಕ್ಕೂಟ ಈ ಸಲಹೆ ನೀಡಿದೆ.

ಅಫ್ಘಾನ್‌ನ ಸದ್ಯದ ಪರಿ ಸ್ಥಿತಿ ಯನ್ನು ಶಾಂತಿ ಯುತ ದಾರಿ ಗಳಿಂದಲೇ ಬಗೆ ಹರಿಸಬೇಕು ಎಂದು ಅಭಿಪ್ರಾಯಪಡ ಲಾಗಿದೆ.

ಪ್ರಧಾನಿ ಮೋದಿ ಹೇಳಿದ್ದೇನು?:

  • ಬ್ರಿಕ್ಸ್‌ ರಾಷ್ಟ್ರಗಳು ಉಗ್ರ ನಿಗ್ರಹ ಯೋಜನೆ ಯನ್ನು ಅಳವಡಿಸಿಕೊಳ್ಳಬೇಕು.
  • ಬ್ರಿಕ್ಸ್‌ ಒಕ್ಕೂಟ ಮುಂದುವರಿಯಲು ಸಹಕಾರ, ಒಗ್ಗೂಡು ವಿಕೆ, ಸಹಮತದ ನಿರ್ಧಾರಗಳು ರೂಪುಗೊಳ್ಳಬೇಕು.
  • ಸದ್ಯದ ಪರಿಸ್ಥಿತಿಯಲ್ಲಿ ಒಕ್ಕೂಟ ಜಗತ್ತಿನ ಪರಿ ಸ್ಥಿತಿಯ ಬಗ್ಗೆ ಅಧಿಕಾರಯುತವಾಗಿ ಮಾತ ನಾಡುವ ಅವಕಾಶ ಬ್ರಿಕ್ಸ್‌ಗೆ ಇದೆ.
  • ಹೊಸ ಅಭಿವೃದ್ಧಿ ಬ್ಯಾಂಕ್‌, ಇಂಧನ ಸಂಶೋ ಧನೆ, ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಲಾಗಿದೆ.

ಟಾಪ್ ನ್ಯೂಸ್

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

1-sulakshana

AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ

ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ

ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

8-ckm

Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

7

Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.