ಸಾಧಕನ ಕನಸಿಗೆ 34000 ಕೋಟಿ ಬಂಡವಾಳ

Team Udayavani, Feb 21, 2018, 9:45 AM IST

2255.jpg

ಮುಂಬಯಿ: ಸ್ಪಷ್ಟ ಗುರಿ, ದೃಢ ನಿರ್ಧಾರ, ಗುರಿಯನ್ನು ಬಿಡದೇ ಸಾಧಿಸುವ ಛಲ. ಇಷ್ಟಿದ್ದರೆ ಸಾಕು, ಎಂಥ ಅಡೆ ತಡೆಗಳನ್ನಾದರೂ ದಾಟಿ ನಮ್ಮ ಗುರಿಯನ್ನು ಮುಟ್ಟಬಹುದೆಂದು ಸಾಧಿಸಿ ತೋರಿಸಿರುವ ಹಲವಾರು ಸಾಧಕರ ಪಟ್ಟಿಗೆ ಈಗ ಹೊಸ ಸೇರ್ಪಡೆ ಮಹಾರಾಷ್ಟ್ರ ಕಂಡಿವಿಲಿಯ, ಅಮೋಲ್‌ ಯಾದವ್‌. 

ಆರು ವರ್ಷಗಳ ಹಿಂದೆ ಆರು ಸೀಟರ್‌ಗಳ ಮಿನಿ ವಿಮಾನವನ್ನು ತನ್ನ ಮನೆಯ ಚಾವಣಿಯ ಮೇಲೆಯೇ ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ 34 ವರ್ಷದ ಈ  ಮಾಜಿ ಪೈಲಟ್‌ನ ಸಾಧನೆ ಮೆಚ್ಚಿರುವ ಮಹಾರಾಷ್ಟ್ರ ಸರಕಾರ, “ಮ್ಯಾಗ್ನೆಟಿಕ್‌ ಮಹಾರಾಷ್ಟ್ರ’ ಹೂಡಿಕೆದಾರರ ಸಮಾವೇಶದಲ್ಲಿ ಅಮೋಲ್‌ ಸ್ಥಾಪಿಸಿರುವ “ಥ್ರ್‌ಸ್ಟ್‌ ಏರ್‌ಕ್ರಾಫ್ಟ್ ಪ್ರೈವೇಟ್‌ ಲಿಮಿಟೆಡ್‌’ ಸಂಸ್ಥೆ ಜತೆ  34 ಸಾವಿರ ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಇಷ್ಟೇ ಅಲ್ಲ, ಪಲ್ಗಾರ್‌ ಜಿಲ್ಲೆಯ ಕೆಳ್ವೆ ಪ್ರಾಂತ್ಯದಲ್ಲಿ 157 ಎಕರೆ ಭೂಮಿಯನ್ನು ಅಮೋಲ್‌ ಅವರ ಸಂಸ್ಥೆಗಾಗಿ ಮಂಜೂರು ಮಾಡಿದೆ. 

ಸದ್ಯಕ್ಕೆ, ಅಮೆರಿಕದ ಪ್ರಾಟ್‌ ಆ್ಯಂಡ್‌ ವ್ಹಿಟ್ನಿ ಸಂಸ್ಥೆಯಿಂದ ವಿಮಾನದ ಎಂಜಿನ್‌ ಹಾಗೂ ಇನ್ನಿತರ ತಾಂತ್ರಿಕ ಪರಿಕರಗಳನ್ನು ಆಮದು ಮಾಡಿಕೊಳ್ಳಲಿರುವ ಥÅಸ್ಟ್‌ ಏರ್‌ಕ್ರಾಫ್ಟ್ ಸಂಸ್ಥೆ, ಇನ್ನಾರು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ದೇಶದ ಮೊಟ್ಟ ಮೊದಲ ಖಾಸಗಿ ವಿಮಾನ ತಯಾರಿಕಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 

ಇದೆಲ್ಲ ಸಾಧ್ಯವಾಗಿದ್ದು, ತಜ್ಞರೂ ತಲೆದೂಗಬಲ್ಲ ವಿಮಾನ ತಯಾರಿಸಿದ ಈತನ ಛಾತಿಯಿಂದ ಹಾಗೂ ಪ್ರಧಾನಿ ಕಚೇರಿಯ ಪ್ರೋತ್ಸಾಹದಿಂದ. ಹಾಗಾಗಿಯೇ, ತಾವು ತಯಾರಿಸಿದ ಮೊದಲ ವಿಮಾನಕ್ಕೆ “ವಿಟಿ-ಎನ್‌ಎಂಡಿ’ (ಎನ್‌ಎಂಡಿ- ನರೇಂದ್ರ ಮೋದಿ ದೇವೇಂದ್ರ) ಎಂದು ಹೆಸರಿಟ್ಟಿದ್ದಾರೆ ಅಮೋಲ್‌.

ಅಮೋಲ್‌ ಸಾಹಸಗಾಥೆ
ಜೆಟ್‌ ಏರ್‌ವೆàಸ್‌ನಲ್ಲಿ ಉಪ ಮುಖ್ಯ ಪೈಲಟ್‌ ಆಗಿ ಸೇವೆ ಸಲ್ಲಿಸುತ್ತಿದ್ದರೂ ಸ್ವಂತವಾಗಿ ವಿಮಾನ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ಅಮೋಲ್‌ ಅವರು, ಈ ಪ್ರತಿಭೆ ಸಾಬೀತುಪಡಿಸಲು ತಾವಿದ್ದ ಮನೆಯನ್ನೇ ಮಾರಿದರು. ಅದರಿಂದ ಬಂದ ಹಣವನ್ನು ವಿಮಾನ ತಯಾರಿಕೆಗೆ ಬಳಸಿದ ಅವರು, ಕಂಡಿವಾಲಿ ಉಪನಗರದ ಅಪಾರ್ಟ್‌ಮೆಂಟ್‌ನಲ್ಲಿ ತಾವಿದ್ದ ಫ್ಲ್ಯಾಟ್‌ ಮೇಲಿನ ಸುಮಾರು 1,600 ಚದರಡಿ ಚಾವಣಿಯಲ್ಲಿ ತಮ್ಮ ಕನಸಿನ ವಿಮಾನ ನಿರ್ಮಿ ಸಿದರು. ಸುಮಾರು 4 ಕೋಟಿ ರೂ. ವೆಚ್ಚ ಮಾಡಿ, 6 ವರ್ಷಗಳಲ್ಲಿ ಏಕಾಂಗಿಯಾಗಿ, 6 ಸೀಟರ್‌ಗಳ, ಸುಮಾರು 13 ಸಾವಿರ ಕಿ.ಮೀ. ಎತ್ತರಕ್ಕೆ ಹಾರಬಲ್ಲ ಲಘು ವಿಮಾನ ನಿರ್ಮಿಸಿದರು. 

ಆದರೆ, ಇದರ ನೋಂದಣಿಗೆ ಸರಕಾರಿ ಅಧಿಕಾರಿಗಳಿಂದ ಅಡೆ ತಡೆಗಳು ಬಂದವು. ಆಗಲೇ, ಇವರು ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ರನ್ನು ಸಂಪರ್ಕಿಸಿದ್ದು. ಇವರ ಮಧ್ಯಪ್ರವೇಶದಿಂದಾಗಿ, ಅಮೋಲ್‌ ವಿಮಾನ ನೋಂದಣಿ ಸುಗಮವಾಯಿತಲ್ಲದೆ, ನಾಗರಿಕ ವಿಮಾನಯಾನ ಮಹಾ ನಿರ್ದೇ ಕರ ಕಚೇರಿ (ಡಿಜಿಸಿಎ) ಅಧಿಕಾರಿಗಳ ಮುಂದೆ ವಿಮಾನದ ಪ್ರಾತ್ಯ ಕ್ಷಿಕೆ ನೀಡಿದರು. ಇದಕ್ಕೆ ಡಿಜಿಸಿಎ ಒಪ್ಪಿಗೆಯೂ ದೊರೆಯಿತು.

ಟಾಪ್ ನ್ಯೂಸ್

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.