![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 4:04 PM IST
ಪ್ರಯಾಗ್ ರಾಜ್: ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ಸಂಭವಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕೋಟ್ಯಂತರ ಜನರು ಪುಣ್ಯಸ್ನಾನ ಮಾಡುತ್ತಿದ್ದಾರೆ.
ಅತ್ಯಂತ ಪವಿತ್ರ ಎಂದು ಪರಿಗಣಿಸಲಾದ ದಿನ ಇದಾಗಿದ್ದು, ಎರಡನೇ ‘ಶಾಹಿ ಸ್ನಾನ ಇದನ್ನು ‘ಅಮೃತ ಸ್ನಾನ’ ಎಂದೂ ಕರೆಯುತ್ತಾರೆ. ಜನವರಿ 14 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಮೊದಲ ‘ಅಮೃತ ಸ್ನಾನ’ ಸಾಂಗವಾಗಿ ನಡೆದಿತ್ತು.
ಸಾಧು ಸಂತರು ಬಿಗಿ ಭದ್ರತೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವಾಗ ಹೂವಿನ ದಳಗಳನ್ನು ಹೆಲಿಕ್ಯಾಪ್ಟರ್ ಗಳ ಮೂಲಕ ಸಾಧುಗಳ ಮೇಲೆ ಸುರಿಯಲಾಯಿತು. ಸಾಧು ಸಂತರ ಸ್ನಾನದ ವೇಳೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಶೃಂಗೇರಿ ಕಿರಿಯ ಶ್ರೀಗಳು ಸೇರಿ ಶಂಕಾರಾಚಾರ್ಯ ಪೀಠದ ಮೂವರು ಶ್ರೀಗಳು ಇಂದು ತೀರ್ಥಸ್ನಾನ ಮಾಡಿದ್ದಾರೆ.
ಬುಧವಾರ ಮಧ್ಯಾಹ್ನದವರೆಗೆ 10 ಲಕ್ಷ ಮಂದಿ ಸಾಧು ಸಂತರು ಸೇರಿದಂತೆ 4.24 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಇದುವರೆಗೆ ಒಟ್ಟು 19.94 ಕೋಟಿ ಜನರು ಮಹಾಕುಂಭದಲ್ಲಿ ಸ್ನಾನ ಮಾಡಿದ್ದಾರೆ ಎಂದು ಸರಕಾರದ ಅಂಕಿ ಅಂಶಗಳು ಸೂಚಿಸಿವೆ.
#WATCH | #KumbhOfTogetherness | Prayagraj: Flower petals showered on saints and seers taking a holy dip at Triveni Sangam on the occasion of Mauni Amavasya. pic.twitter.com/cMospSyvVj
— ANI (@ANI) January 29, 2025
ನಸುಕಿನ 2 ಗಂಟೆಯ ವೇಳೆ ಕಾಲ್ತುಳಿತ ಸಂಭವಿಸಿ ಕನಿಷ್ಠ 10 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಸಂಪೂರ್ಣ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ.
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.