ಹೊಸ ಕೆಲಸವನ್ನು ಬಿಟ್ಟು ಭಾರತ್ ಜೋಡೋ ಗೆ ಬಂದ ಎಂಜಿನಿಯರಿಂಗ್ ಪದವೀಧರೆ
ಉದ್ಯೋಗಗಳು ಸಿಗುತ್ತವೆ ಮತ್ತು ಹೋಗುತ್ತವೆ ಆದರೆ ಈ ಅವಕಾಶವು ಬರುವುದಿಲ್ಲ...
Team Udayavani, Oct 10, 2022, 7:18 PM IST
ತುಮಕೂರು/ಚಿತ್ರದುರ್ಗ : ತನಗೆ ಸಿಕ್ಕಿದ ಹೊಸ ಕೆಲಸವನ್ನು ತೊರೆದ ಮಹಾರಾಷ್ಟ್ರದ ನಾಸಿಕ್‌ನ 27 ವರ್ಷದ ಆತಿಶಾ ಅವರು ‘ನಾನು ಭಾರತದ ಮುಖವನ್ನು ಬದಲಾಯಿಸಲು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ನೇತೃತ್ವದ ”ಭಾರತ್ ಜೋಡೋ” ಯಾತ್ರೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಆತಿಶಾ ಅವರು ಏರ್ ಇಂಡಿಯಾದಿಂದ ಉದ್ಯೋಗದ ಪ್ರಸ್ತಾಪವನ್ನು ಪಡೆದರಾದರೂ, ಅದನ್ನು ಬಿಟ್ಟು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಆದ್ಯತೆ ನೀಡಿದರು.
“ಉದ್ಯೋಗಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ಈ ಅವಕಾಶವು ಬರುವುದಿಲ್ಲ” ಎಂದು ಅವರು ಕರ್ನಾಟಕದಲ್ಲಿ ಯಾತ್ರೆಯಲ್ಲಿ ಭಾಗವಹಿಸಿ ಪಿಟಿಐಗೆ ಹೇಳಿಕೆ ನೀಡಿದ್ದಾರೆ.
”ನನ್ನ ಕುಟುಂಬದವರು ನನ್ನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ನನ್ನ ತಂದೆ ನನ್ನನ್ನು ಯಾತ್ರೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ ಎಂದು ಆತಿಶಾ ಹೇಳಿದ್ದು, ‘ನಾನು ಭಾರತದ ಮುಖವನ್ನು ಬದಲಾಯಿಸಲು ಬಯಸುತ್ತೇನೆ, ಜಗತ್ತಿನಲ್ಲಿ ನೀವು ನೋಡಲು ಬಯಸುವ ಬದಲಾವಣೆಯಾಗಲಿ” ಎಂದರು.
ಆತಿಶ ಅವರಂತೆಯೇ ನಾಗ್ಪುರದ ವೈಷ್ಣವಿ ಭಾರದ್ವಾಜ್ (24) ರಾಹುಲ್ ಗಾಂಧಿ ಜತೆಗಿರುವ ಯಾತ್ರಿಗಳಲ್ಲಿ ಕಿರಿಯವರಾಗಿದ್ದಾರೆ.
ಸೋಮವಾರ ತುಮಕೂರಿನ ಪೋಚಕಟ್ಟೆಯಿಂದ ಆರಂಭವಾದ ಪಾದಯಾತ್ರೆ ಚಿತ್ರದುರ್ಗದ ಹಿರಿಯೂರಿನ ಹರ್ತಿಕೋಟೆಯವರೆಗೆ ನಡೆಯಿತು. ರಾಹುಲ್ ಅವರು ಮಳೆಯನ್ನೂ ಲೆಕ್ಕಿಸದೆ ಭಾಗಿಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಧ್ವಜ ಹಿಡಿದು ರಾಹುಲ್ ಅವರೊಂದಿಗೆ ಓಡಿ ಗಮನ ಸೆಳೆದರು.
ರಾಹುಲ್ ಅವರನ್ನು ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಮಾದರಿಯಲ್ಲಿ ಸ್ವಾಗತಿಸಿದರು. ಹಿರಿಯೂರಿನಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ದಕ್ಕಲಿಗರು, ಸುಡುಗಾಡು ಸಿದ್ದರು, ದೊಂಬಿದಾಸರು,ಕೊರಮರು, ಹಂದಿಜೋಗಿ ಮುಂತಾದ ಸಮುದಾಯಗಳ ಪ್ರಮುಖರೊಂದಿಗೆ ಸಂವಾದ ನಡೆಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಎಂಬ ಅವಾಂತರದ ವಿರುದ್ಧ ಶಿಕ್ಷಣ ಸಚಿವರ ಮನೆ ಎದುರು ಪ್ರತಿಭಟಿಸಿ ಬಂಧನಕ್ಕೊಳಗಾಗಿದ್ದ ಏನ್ ಯಸ್ ಯುಐ ಕಾರ್ಯಕರ್ತರ ತಂಡ ಭೇಟಿ ಮಾಡಿ ಮಾತುಕತೆ ನಡೆಸಿದರು.ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಭೇಟಿಯಾಗಿ ಆರೋಗ್ಯ ಕ್ಷೇತ್ರ ಹಾಗೂ ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲವಾಗುವ ಸಾರ್ವಜನಿಕ ಯೋಜನೆಗಳ ಕುರಿತು ಚರ್ಚೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.