![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jul 14, 2024, 5:25 PM IST
ಮುಂಬಯಿ: ಉದ್ಯಮಿ ಅಂಬಾನಿ ಮಗನ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಜು.12 ರಂದು ಅನಂತ್ (Anant Ambani) ಮತ್ತು ರಾಧಿಕಾ (Radhika Merchant) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ವರ್ಗವನ್ನೇ ಧರೆಗಿಳಿಸಿದಂತೆ ಕೋಟಿ ಕೋಟಿ ಖರ್ಚು ಮಾಡಿ ಮದುವೆಯನ್ನು ನೆರವೇರಿಸಿದ್ದಾರೆ. ವರದಿಗಳ ಪ್ರಕಾರ 5000 ಕೋಟಿ ರೂ. ಮದುವೆಗಾಗಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ.
ದೇಶ – ವಿದೇಶದ ಗಣ್ಯರು, ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ. ಬಿಟೌನ್ ತಾರೆಯರು ಕುಣಿದು ಕುಪ್ಪಳಿಸಿದ್ದಾರೆ.
ಸಾಮಾನ್ಯವಾಗಿ ಮದುವೆಗೆ ಉಡುಗೊರೆ ಕೊಡುವುದನ್ನು ನೋಡಿದ್ದೇವೆ. ಆದರೆ ಅಂಬಾನಿ ಮನೆಯ ಮದುವೆಯಲ್ಲಿ ಬಂದ ಸೆಲೆಬ್ರಿಟಿಗಳಿಗೆ 2 ಕೋಟಿ ರೂ. ಮೌಲ್ಯದ ವಾಚ್ ನೀಡಲಾಗಿದೆ.
ಶಾರುಖ್ ಖಾನ್,(Shah Rukh Khan) ರಣವೀರ್ ಸಿಂಗ್ (Ranveer Singh) ಸೇರಿದಂತೆ ಹಲವರಿಗೆ ಅಂಬಾನಿ ಮನೆಯಿಂದ ಲಿಮಿಟೆಡ್ ಆವೃತ್ತಿಯ ಆಡೆಮರ್ಸ್ ಪಿಗುಯೆಟ್ ಕಂಪೆನಿಯ ವಾಚ್ ಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ವಾಚ್ ನ ಬೆಲೆ 2 ಕೋಟಿ ರೂ. ಆಗಿದ್ದು, 9.5 ಮಿಮೀ ದಪ್ಪವಿರುವ ವಾಚ್ ಇದಾಗಿದೆ. 41 ಎಂಎಂ 18 ಕ್ಯಾರಟ್‌ನ ಚಿನ್ನದ ವಾಚ್‌ಗಳಾಗಿವೆ. ವಾಚ್ ವಾರ, ದಿನ, ದಿನಾಂಕ ಇನ್ನೀತರ ಮಾಹಿತಿಯನ್ನು ನೀಡುತ್ತದೆ.
“ಎಲ್ಲಾ ಸ್ನೇಹಿತರಿಗೆ ಅನಂತ್ ಅಂಬಾನಿ ವಿಶೇಷ ಮದುವೆ ಉಡುಗೊರೆ ನೀಡಿದ್ದಾರೆ” ಎನ್ನುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಟೌನ್ ನಿಂದ ಸಲ್ಮಾನ್ ಖಾನ್ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಜೋನಾಸ್, ಅನನ್ಯಾ ಕಪೂರ್, ರಣವೀರ್ ಸಿಂಗ್, ಶನಯಾ ಕಪೂರ್, ಶಿಖರ್ ಪಹಾರಿಯಾ ಸೇರಿದಂತೆ ಅನೇಕರು ಮದುವೆಯಲ್ಲಿ ಭಾಗಿಯಾಗಿದ್ದರು.
View this post on Instagram
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.