![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Feb 27, 2024, 11:09 PM IST
ಮುಂಬೈ: ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಅತಿಥಿಗಳಿಗಾಗಿ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ.
ಮಾ.1ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಸಮಾರಂಭಗಳು ನಡೆಯಲಿವೆ. ಇದರಲ್ಲಿ ಭಾಗವಹಿಸುವ ಅತಿಥಿಗಳಿಗೆ ಖುದ್ದು, ಯಾವ ಖಾದ್ಯಗಳು ಅವರ ಆದ್ಯತೆ ಎನ್ನುವಂಥ ವಿಚಾರಗಳನ್ನು ಆತಿಥ್ಯ ವಹಿಸುತ್ತಿರುವ ತಂಡ ಕೇಳಿ ತಿಳಿದುಕೊಂಡಿದೆ. ಅದರಂತೆ, ಸಮಾರಂಭದ ನೆನಪು ಸ್ಮರಣೀಯವಾಗಿಸಲು ವಿವಿಧ ರೀತಿಯ ಪಾಕ ಪದ್ದತಿಗಳಿರುವ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಪೈಕಿ ಬೆಳಗ್ಗೆ ಉಪಾಹಾರಕ್ಕೆ 70 ಬಗೆಯ ತಿನಿಸಿನ ಆಯ್ಕೆಗಳಿರಲಿದ್ದು, ಮಧ್ಯಾಹ್ನದ ಭೋಜನಕ್ಕೆ 250 ಬಗೆ, ರಾತ್ರಿಯ ಊಟಕ್ಕೆ 250 ಬಗೆ ಖಾದ್ಯಗಳು ಇರಲಿವೆ. ಸಮಾರಂಭ ನಡೆಯುವ ಯಾವುದೇ ದಿನದಲ್ಲೂ ಯಾವುದೇ ಖಾದ್ಯ ಪುನರಾವರ್ತಿತವಾಗುತ್ತಿಲ್ಲ.
21ರ ಪೈಕಿ 20 ಮಂದಿ ಮಹಿಳಾ ಶೆಫ್ ಗಳು:
ಇಂದೋರ್ ಮೂಲದ ತಿನಿಸುಗಳಿಗೆ ಅಂಬಾನಿ ಕುಟುಂಬ ಹೆಚ್ಚಿನ ಗಮನವಹಿಸಿದೆ. ಖಾದ್ಯ ತಯಾರಿಸಲು ಇಂದೋರ್‌ನಿಂದ 21 ಶೆಫ್ಗಳನ್ನು ಕರೆಸಲಾಗಿದೆ. ವಿಶೇಷವೆಂದರೇ ಈ 21 ಬಾಣಸಿಗರ ಪೈಕಿ ಒಬ್ಬರು ಮಾತ್ರ ಪುರುಷ ಬಾಣಸಿಗ, ಉಳಿದವರೆಲ್ಲಾ ಮಹಿಳೆಯರೇ ಆಗಿದ್ದಾರೆ.
ಇದನ್ನೂ ಓದಿ: ಪತಂಜಲಿ ಸುಳ್ಳು ಜಾಹೀರಾತು ಪ್ರಕರಣ: ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯೇ?: ಸುಪ್ರೀಂ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.