ದೊಡ್ಡವಳ ಜೀವ ಉಳಿಸಲು10,000ರೂ.ಗೆ ಚಿಕ್ಕವಳ ಮಾರಾಟ : ಅಪ್ರಾಪ್ರೆ ಖರೀದಿಸಿ ಮದುವೆಯಾದ ಕೀಚಕ
Team Udayavani, Feb 27, 2021, 9:15 PM IST
ಆಂಧ್ರಪ್ರದೇಶ : ಬಡತನ ಎಂತಹ ನಿಕೃಷ್ಟ ಕೆಲಸಕ್ಕೂ ದೂಡುತ್ತೆ. ಹಾಗೂ ಹಣದ ಮದ ಎಂತಹ ನೀಚ ಕೃತ್ಯವನ್ನು ಮಾಡಿಸುತ್ತೆ ಎನ್ನುವುದಕ್ಕೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದ ಈ ಘಟನೆ ಜೀವಂತ ಸಾಕ್ಷಿಯಾಗಿದೆ.
ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದ ಬಡಕುಟುಂಬವೊಂದು ತಮ್ಮ ಮತ್ತೊಂದು ಮಗಳನ್ನ ಕೇವಲ 10,000 ರೂಪಾಯಿಗೆ ಮಾರಾಟ ಮಾಡಿದೆ. ಇವರ ಬಡತನ ಸ್ಥಿತಿಯನ್ನೇ ದುರುಪಯೋಗ ಪಡಿಸಿಕೊಂಡ 46 ವರ್ಷದ ಧುರುಳನೋರ್ವ 12 ವರ್ಷದ ಬಾಲೆಯನ್ನ ಖರೀದಿಸಿ ಮದುವೆಯಾಗಿದ್ದಾನೆ.
ದಿನಗೂಲಿ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ ಕುಟುಂಬ ದೊಡ್ಡ ಮಗಳ ಉಸಿರಾಟದ ಕಾಯಿಲೆಗೆ ಚಿಕಿತ್ಸೆ ಕೊಡಿಸಲೆಂದು 10,000 ರೂಪಾಯಿಗೆ ತನ್ನ12 ವರ್ಷದ ಮಗುವನ್ನು ಮಾರಾಟ ಮಾಡಿದೆ. ಇವರಿಂದ ಅಪ್ತಾಪ್ತೆಯನ್ನು ಖರೀದಿಸಿದ ಚಿನ್ನಾ ಸುಬ್ಬಯ್ಯ ಹೆಸರಿನ ಕೀಚಕ ಮರುದಿನವೇ ಏನೂ ಅರಿಯದ ಆ ಪುಟ್ಟ ಕಂದನ ಜತೆ ಮದುವೆಯಾಗಿ, ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾನೆ.
ಭಯದಿಂದ ಕಣ್ಣೀರು ಹಾಕುತ್ತಿದ್ದ ಅಪ್ರಾಪ್ತೆಯಿಂದ ನಿಜ ಸಂಗತಿ ತಿಳಿದು, ಆತನ ಸಂಬಂಧಿಕರು ಸ್ಥಳೀಯ ಪಂಚಾಯಿತಿ ಗಮನಕ್ಕೆ ತಂದಿದ್ದಾರೆ. ಇವರಿಂದ ಮಾಹಿತಿ ಪಡೆದ ಮಕ್ಕಳ ಕಲ್ಯಾಣ ಇಲಾಖೆ ಆ ಬಾಲಕಿಯನ್ನು ರಕ್ಷಿಸಿದ್ದಾರೆ. ಜತೆಗೆ ಪ್ರಕರಣದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.