![Udupi: ಲಾರಿಗೆ ಸ್ಕೂಟರ್ ಢಿಕ್ಕಿ: ಸವಾರ ಸಾವು](https://www.udayavani.com/wp-content/uploads/2025/02/car-parkala-5-415x234.jpg)
![Udupi: ಲಾರಿಗೆ ಸ್ಕೂಟರ್ ಢಿಕ್ಕಿ: ಸವಾರ ಸಾವು](https://www.udayavani.com/wp-content/uploads/2025/02/car-parkala-5-415x234.jpg)
Team Udayavani, Jul 11, 2024, 4:39 PM IST
ಆಂಧ್ರಪ್ರದೇಶ: ಶಾಲಾ ಬಾಲಕಿಯನ್ನು ಮೂವರು ಅಪ್ರಾಪ್ತ ಬಾಲಕರು ಸೇರಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆಗೈದಿರುವ ಪೈಶಾಚಿಕ ಘಟನೆ ಆಂಧ್ರ ಪ್ರದೇಶದ (Andhra Pradesh) ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್‌ಮರಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಈ ಘಟನೆ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ.
ಮೂರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು 6ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಹಾಗೂ 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಬಾಲಕರು ಸೇರಿ ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ.
ಬಾಲಕಿ ಮುಚ್‌ಮರಿ ಪಾರ್ಕ್ ನಲ್ಲಿ ಆಟ ಆಡುತ್ತಿದ್ದಳು ಆದರೆ ಸಂಜೆ ಆದರೂ ಮನೆಗೆ ಬಾರದಿದ್ದಾಗ ಬಾಲಕಿಯ ತಂದೆ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಅಕ್ಕಪಕ್ಕ ಎಲ್ಲಾ ಕಡೆ ಸ್ಥಳೀಯರು ಹಾಗೂ ಪೊಲೀಸರು ಹುಡುಕಾಡಿದರೂ ಬಾಲಕಿಯ ಪತ್ತೆಯಾಗಿರಲಿಲ್ಲ. ಕೊನೆಗೆ ಪೊಲೀಸರು ಶ್ವಾನದಳವನ್ನು ನಿಯೋಜಿಸಿದ್ದಾರೆ. ಪೊಲೀಸ್ ಸ್ನಿಫರ್ ಡಾಗ್ ಆರೋಪಿ ಬಾಲಕರ ಮನೆ ಮುಂದೆ ಹೋಗಿ ನಿಂತಿದೆ.
ಪೊಲೀಸರು ಪ್ರಾಥಮಿಕ ತನಿಖೆಯಾಗಿ ಅಪ್ರಾಪ್ತ ಬಾಲಕರನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ.
ಪಾರ್ಕ್ ನಲ್ಲಿ ಆಟ ಆಡುತ್ತಿದ್ದ ಬಾಲಕಿಯನ್ನು ನೋಡಿದ ಮೂವರು ಆಕೆಯ ಬಳಿ ತಮ್ಮನ್ನು ಆಟಕ್ಕೆ ಸೇರಿಸಿ ಎಂದು ಕೇಳಿ, ಆಕೆಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಆಕೆಯ ಬಾಯಿಗೆ ಬಟ್ಟೆ ತುರುಕಿ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಬಾಲಕಿ ವಿಚಾರವನ್ನು ಮನೆಯವರಿಗೆ ತಿಳಿಸುತ್ತಾಳೆ ಎನ್ನುವ ಭೀತಿಯಿಂದ ಕೊಲೆಗೈದು ದೇಹವನ್ನು ಕಾಲುವೆಗೆ ಎಸೆದು ಅಲ್ಲಿಂದ ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಬಾಲಕಿ ಹಾಗೂ ಬಾಲಕರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ಮೂವರು ಅಪ್ರಾಪ್ತ ಬಾಲಕರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Maharashtra: ಬಿಜೆಪಿ-ಶಿಂಧೆ ಶಿವಸೇನೆ ನಡುವೆ ಬಿಕ್ಕಟ್ಟು: 20 ಶಾಸಕರ “Y” ಭದ್ರತೆ ವಾಪಸ್!
ಕೀಳು ಮಟ್ಟದ ಪ್ರಶ್ನೆಗಳನ್ನು ಸಹಿಸಲು ಸಾಧ್ಯವಿಲ್ಲ: ಅಲಹಾಬಾದಿಯಾಗೆ ಸುಪ್ರೀಂ ತೀವ್ರ ತರಾಟೆ
ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದ ಕತಾರ್ ರಾಜ… ಖುದ್ದು ಬರಮಾಡಿಕೊಂಡ ಪ್ರಧಾನಿ ಮೋದಿ
Mahakumbh; ಪ್ರಯಾಗ್‌ರಾಜ್ ಸಂಗಮ್ ನಿಲ್ದಾಣ ಫೆ.28ರ ವರೆಗೆ ಬಂದ್
Udupi: ಲಾರಿಗೆ ಸ್ಕೂಟರ್ ಢಿಕ್ಕಿ: ಸವಾರ ಸಾವು
Mangaluru ಪ್ರತ್ಯೇಕ ಪ್ರಕರಣ: ಮಾದಕ ದ್ರವ್ಯ ಸೇವನೆ; ಮೂವರು ವಶಕ್ಕೆ
Bidar: ರಸ್ತೆ ಅಪಘಾತದಲ್ಲಿ ಕುಂಭಮೇಳಕ್ಕೆ ತೆರಳುತ್ತಿದ್ದ ಚಿಲ್ಲರ್ಗಿ ಗ್ರಾಮದ ವ್ಯಕ್ತಿ ಸಾವು!
Bidar: ಹಕ್ಕಿ ಜ್ವರ ಹೆಚ್ಚಳ: ಉದಗಿರನಿಂದ ಕೋಳಿ, ಉತ್ಪನ್ನಗಳ ಸಾಗಾಟಕ್ಕೆ ನಿಷೇಧ
Dharwad: ಪರಿಹಾರ ವಿಳಂಬ, ಸಣ್ಣ ನೀರಾವರಿ ಇಲಾಖೆಯಲ್ಲಿನ ವಸ್ತುಗಳು ಜಪ್ತಿ
You seem to have an Ad Blocker on.
To continue reading, please turn it off or whitelist Udayavani.