ಮಾನವೀಯತೆ ಮೆರೆದ ಪೊಲೀಸ್ ಕಾನ್ಸ್ ಟೇಬಲ್!
Team Udayavani, Apr 7, 2021, 2:35 PM IST
ತಮಿಳುನಾಡು : ಪೊಲೀಸರು ಅಂದ್ರೆ, ಅವರು ಯಾವಾಗಲೂ ಜನರನ್ನು ಹೊಡೆಯುತ್ತಾರೆ, ಹೆದರಿಸುತ್ತಾರೆ, ಭಯ ಪಡಿಸುತ್ತಾರೆ ಎಂಬ ಕಲ್ಪನೆ ಬಹಳ ಜನರಿಗೆ ಇದೆ. ಆದ್ರೆ ಎಲ್ಲಾ ಪೊಲೀಸರು ಈ ರೀತಿ ಮಾಡುವುದಿಲ್ಲ ಎಂಬುದಕ್ಕೆ ನಿನ್ನೆ(ಏ.6) ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ತಾಯಿಯೊಬ್ಬರು ಮತದಾನ ಮಾಡಲು ಹೋದ ವೇಳೆ ತನ್ನ ಒಂದು ತಿಂಗಳ ಮಗುವನ್ನು ಪೊಲೀಸರ ಕೈಗೆ ಕೊಟ್ಟು ಹೋಗಿದ್ದಾರೆ. ಆ ವೇಳೆ ಆ ಹಸುಗೂಸನ್ನು ಪೊಲೀಸ್ ಪೇದೆ ಜೋಪಾನವಾಗಿ ನೋಡಿಕೊಂಡಿದ್ದಾರೆ. ಪೊಲೀಸ್ ಮಗುವನ್ನು ಹಿಡಿದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
#APPolice‘s humane face at #TamilNaduElections: @AnantapurPolice constable deployed to #TamilNadu for #TamilNaduElections2021 carried & lulled a 1-month-old crying baby until the mother’s return from the voting booth, winning the hearts of many.#AndhraPradesh#Elections2021 pic.twitter.com/vk0DO2doJN
— Andhra Pradesh Police (@APPOLICE100) April 6, 2021
ಈ ಫೋಟೋವನ್ನು ಆಂಧ್ರ ಪ್ರದೇಶ ಪೊಲೀಸ್ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಪೊಲೀಸ್ ಕೂಡ ಆಂಧ್ರ ಪ್ರದೇಶದ ಮೂಲದವರೆಂದು ಹೇಳಲಾಗಿದ್ದು, ಪೊಲೀಸರ ಈ ಮಾನವೀಯ ಕಾರ್ಯ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ನಿನ್ನೆ ತಮಿಳುನಾಡು ವಿಧಾನಸಭಾ ಚುನಾವಣೆ ನಡೆದಿದೆ. ಈಗಾಗಲೇ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಅಸ್ಸಾ, ಕೇರಳ, ಪಶ್ಚಿಮ ಬಂಗಾಳ, ಪಾಂಡಿಚರಿ, ತಮಿಳುನಾಡಿನಲ್ಲಿ ಮತದಾನ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.