ತಿರುಮಲದೊಡೆಯನಿಗೆ ‘ನವನೀತ ಸೇವೆ’ : ದೇಸಿ ಹಸುವಿನ ತಳಿಗಳನ್ನು ರಕ್ಷಿಸಲು ಟಿಟಿಡಿ ನಿರ್ಧಾರ
Team Udayavani, Aug 8, 2021, 12:45 PM IST
ವಿಶಾಖಪಟ್ಟಣಂ : ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ದೇಸಿ ಹಸುವಿನ ತಳಿಗಳನ್ನು ರಕ್ಷಿಸಲು ಮತ್ತು ಹಸುವಿನ ಉತ್ಪನ್ನಗಳೊಂದಿಗೆ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ನವನೀತ ಸೇವೆ’ ಪರಿಚಯಿಸುವ ನಿಟ್ಟಿನಲ್ಲಿ ಯೋಜಿಸುತ್ತಿರುವುದಾಗಿ ವರದಿ ತಿಳಸಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿದ ಟಿಟಿಡಿಯ ಅಧ್ಯಕ್ಷ ಮತ್ತು ಅಧಿಕಾರಿ ಕೆಎಸ್ ಜವಾಹರ್ ರೆಡ್ಡಿ, ದೇಸಿ ಹಸುವಿನ ತುಪ್ಪದಿಂದಲೇ ವೆಂಕಟೇಶ್ವರ ದೇವರಿಗೆ ಅರ್ಪಿಸುವ ಎಲ್ಲಾ ನೈವೇದ್ಯಂ (ಆಹಾರ ನೈವೇದ್ಯ) ವನ್ನು ತಯಾರಿಸುವ ಗುರಿಯನ್ನು ದೇವಾಲಯವು ಹೊಂದಿದೆ. ಇದರೊಂದಿಗೆ ಸಾವಯವ ಕೃಷಿಗೆ ಉತ್ತೇಜಿಸುವ ನಿಟ್ಟಿನಲ್ಲಿಯೂ ದೇವಸ್ಥಾನದ ಸಮಿತಿ ‘ನವನೀತ ಸೇವೆ’ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಶಕೀಬ್ ಅಲ್ ಹಸನ್ ರ ಒಂದು ಓವರ್ ನಲ್ಲಿ ಐದು ಸಿಕ್ಸರ್ ಚಚ್ಚಿದ ಡ್ಯಾನ್ ಕ್ರಿಶ್ಚಿಯನ್
ನೈವೇದ್ಯವನ್ನು ತಯಾರಿಸಲು ನಮಗೆ ಪ್ರತಿದಿನ ಕನಿಷ್ಠ 30 ಕೆಜಿ ತುಪ್ಪ ಬೇಕು, ಇದಕ್ಕೆ 1000 – 1,200 ಲೀಟರ್ ಹಾಲು ಬೇಕಾಗುತ್ತದೆ. ‘ನವನೀತ ಸೇವೆ’ ಮೂಲಕ, ದೇಸಿ ಹಸುಗಳಿಂದ ಸಂಗ್ರಹಿಸಿದ ಹಾಲನ್ನು ನೈವೇದ್ಯಕ್ಕೆ ಬಳಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ ದೇಸಿ ಹಸುಗಳನ್ನು ಭಕ್ತಾದಿಗಳಿಗೆ ದಾನ ಮಾಡಲು ಕರೆ ನೀಡಿದ ಅವರು, “ಈ ‘ನವನೀತ ಸೇವೆ’ ಗೆ ದೇಶಾದ್ಯಂತದ ಜನರು ದೇವಸ್ಥಾನಕ್ಕೆ ಹಸುಗಳನ್ನು ದೇವರ ಹೆಸರಿನಲ್ಲಿ ದಾನ ಮಾಡಬಹುದು. ಈ ಮಹಾನ್ ಕಾರ್ಯಕ್ಕೆ ಈಗಾಗಲೇ ಒಬ್ಬ ದಾನಿ, 25 ಗಿರ್ ಹಸುಗಳನ್ನು ದಾನ ಮಾಡಿದ್ದಾರೆ, ಈ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ದೇವಸ್ಥಾನದ ಆಡಳಿತ ಮಂಡಳಿ ಕಾರ್ಯೋನ್ಮುಖವಾಗುತ್ತದೆ ಎಂದಿದ್ದಾರೆ.
ಇನ್ನು, ತಿರುಮಲ ಸುತ್ತಮುತ್ತಲಿನ ಪ್ರದೇಶಗಳನ್ನು ಮಾಲಿನ್ಯರಹಿತವಾಗಿಸಲು, ಇಂಧನ ಅವಲಂಬಿತ ವಾಹನಗಳನ್ನು ಬದಲಿಸಲು 35 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಟಿಟಿಡಿ ಯೋಜಿಸುತ್ತಿದೆ.
ಹೆಚ್ಚುವರಿಯಾಗಿ, ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎ ಪಿಎಸ್ ಆರ್ ಟಿಸಿ) ಬೆಟ್ಟದ ಪಟ್ಟಣಕ್ಕೆ ಹೋಗುವ ಅವಳಿ ಘಾಟ್ ರಸ್ತೆಗಳ ನಡುವೆ ಸಂಚರಿಸಲು 100 ಎಲೆಕ್ಟ್ರಿಕ್ ಬಸ್ ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಉ. ಪ್ರ ಚುನಾವಣೆ : ರಾಜ್ಯಾದ್ಯಂತ ‘ಬೂತ್ ವಿಜಯ್ ಅಭಿಯಾನ’ ಅಡಿಯಲ್ಲಿ ಕಾರ್ಯಕ್ರಮ : ಬಿಜೆಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.