![TTD-Donate](https://www.udayavani.com/wp-content/uploads/2025/02/TTD-Donate-415x249.jpg)
![TTD-Donate](https://www.udayavani.com/wp-content/uploads/2025/02/TTD-Donate-415x249.jpg)
Team Udayavani, Dec 26, 2024, 5:07 PM IST
ಆಂಧ್ರ ಪ್ರದೇಶ: ಮಂಗಳಮುಖಿ ಜತೆ ಪುತ್ರ ಮದುವೆ ಆಗುವುದಾಗಿ ಹೇಳಿದ ಕಾರಣಕ್ಕೆ ಅವಮಾನಗೊಂಡ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡ ದಾರುಣ ಘಟನೆ ಆಂಧ್ರಪ್ರದೇಶದ ನಂದ್ಯಾಲ್‌ನಲ್ಲಿ ನಡೆದಿರುವುದು ವರದಿಯಾಗಿದೆ.
ಏನಿದು ಘಟನೆ?: ಆಂಧ್ರದ ನಂದ್ಯಾಲ ನಿವಾಸಿಗಳಾದ ಸುಬ್ಬು ರಾಯಡು ಮತ್ತು ಸರಸ್ವತಿ ದಂಪತಿಯ ಏಕೈಕ ಪುತ್ರ ಸುನೀಲ್ ಬಿಟೆಕ್ ಪದವೀಧರನಾಗಿದ್ದು, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ.
ಸುನೀಲ್ ಕಳೆದ ಮೂರು ವರ್ಷಗಳಿಂದ ಮಂಗಳಮುಖಿಯಾಗಿರುವ ಸ್ಮಿತಾ ಎಂಬಾಕೆ ಜತೆ ಸಂಬಂಧದಲ್ಲಿದ್ದು, ಇತ್ತೀಚೆಗೆ ಸುನೀಲ್ ಬಳಿ ಪೋಷಕರು ಮದುವೆ ವಿಚಾರವನ್ನು ಮಾತನಾಡಿದ್ದಾರೆ. ಈ ವೇಳೆ ತಾನು ಸ್ಮಿತಾ ಎಂಬಾಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ.
ಮಗ ಪ್ರೀತಿಸುತ್ತಿರುವುದು ಮಂಗಳಮುಖಿ ಎನ್ನವುದನ್ನು ಅರಿತ ಪೋಷಕರು ಸುನೀಲ್‌ನನ್ನು ಕೌನ್ಸಿಲಿಂಗ್ ಮಾಡಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕವೂ ಸುನೀಲ್ ಸ್ಮಿತಾಳನ್ನೇ ವಿವಾಹವಾಗುವುದಾಗಿ ಪೋಷಕರ ಮುಂದೆ ಹೇಳಿದ್ದಾನೆ.
ಮಗನ ನಿರ್ಧಾರದಿಂದ ಮನನೊಂದು ಅವಮಾನ ಅನುಭವಿಸಿದ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸುನೀಲ್ ಪ್ರೀತಿಸುತ್ತಿರುವ ಮಂಗಳಮುಖಿ ಸ್ಮಿತಾ ಅವರ ಪರಿಚಿತ ಗುಂಪು ಸುನೀಲ್ ಪೋಷಕರಿಗೆ ಅವಮಾನ ಮಾಡಿ, ಕಿರುಕುಳ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಸದ್ಯ ಈ ಬಗ್ಗೆ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Maharashtra: ಬಿಜೆಪಿ-ಶಿಂಧೆ ಶಿವಸೇನೆ ನಡುವೆ ಬಿಕ್ಕಟ್ಟು: 20 ಶಾಸಕರ “Y” ಭದ್ರತೆ ವಾಪಸ್!
ಕೀಳು ಮಟ್ಟದ ಪ್ರಶ್ನೆಗಳನ್ನು ಸಹಿಸಲು ಸಾಧ್ಯವಿಲ್ಲ: ಅಲಹಾಬಾದಿಯಾಗೆ ಸುಪ್ರೀಂ ತೀವ್ರ ತರಾಟೆ
ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದ ಕತಾರ್ ರಾಜ… ಖುದ್ದು ಬರಮಾಡಿಕೊಂಡ ಪ್ರಧಾನಿ ಮೋದಿ
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
Udupi: ಲಾರಿಗೆ ಸ್ಕೂಟರ್ ಢಿಕ್ಕಿ: ಸವಾರ ಸಾವು
Mangaluru ಪ್ರತ್ಯೇಕ ಪ್ರಕರಣ: ಮಾದಕ ದ್ರವ್ಯ ಸೇವನೆ; ಮೂವರು ವಶಕ್ಕೆ
Bidar: ರಸ್ತೆ ಅಪಘಾತದಲ್ಲಿ ಕುಂಭಮೇಳಕ್ಕೆ ತೆರಳುತ್ತಿದ್ದ ಚಿಲ್ಲರ್ಗಿ ಗ್ರಾಮದ ವ್ಯಕ್ತಿ ಸಾವು!
Bidar: ಹಕ್ಕಿ ಜ್ವರ ಹೆಚ್ಚಳ: ಉದಗಿರನಿಂದ ಕೋಳಿ, ಉತ್ಪನ್ನಗಳ ಸಾಗಾಟಕ್ಕೆ ನಿಷೇಧ
You seem to have an Ad Blocker on.
To continue reading, please turn it off or whitelist Udayavani.