9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ

Team Udayavani, Jul 5, 2024, 12:19 PM IST

9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ

ಆಂಧ್ರಪ್ರದೇಶ: ಕಾಲೇಜಿಗೆ ಹೋಗಿದ್ದ ಮಗಳು ನಾಪತ್ತೆಯಾಗಿ ಸರಿ ಸುಮಾರು ಒಂಬತ್ತು ತಿಂಗಳು ಕಳೆದಿದ್ದು ಇದೀಗ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್ ಅವರ ಆದೇಶದ ಮೇರೆಗೆ ಪೊಲೀಸರು ಕೇವಲ 9 ದಿನದಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿದ್ದಾರೆ.

ಏನಿದು ಪ್ರಕರಣ:
ಆಂಧ್ರಪ್ರದೇಶದಲ್ಲಿ ಬಾಲಕಿಯರು, ಮಹಿಳೆಯರು ನಾಪತ್ತೆಯಾಗುತ್ತಿದ್ದು ಈ ಕುರಿತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತನ್ನ ಅಧಿಕಾರಿಗಳ ಬಳಿ ಸಭೆಯನ್ನೂ ನಡೆಸಿದ್ದಾರೆ ಈ ನಡುವೆ ಪವನ್ ಕಲ್ಯಾಣ್ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಗೆ ಭೇಟಿ ನೀಡಿದ್ದರು ಈ ವೇಳೆ ಅಲ್ಲಿಗೆ ಬಂದ ಮಹಿಳೆಯೊಬ್ಬರು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ತನ್ನ ಮಗಳು ಒಂಬತ್ತು ತಿಂಗಳ ಹಿಂದೆ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬರಲಿಲ್ಲ ಹುಡುಕಿಕೊಡಿ ಸಾರ್ ಎಂದು ಕೇಳಿಕೊಂಡಿದ್ದಾರೆ, ಕೂಡಲೇ ಮಹಿಳೆಯ ಮನವಿಗೆ ಸ್ಪಂದಿಸಿದ ಪವನ್ ಕಲ್ಯಾಣ್ ಸಂಬಂಧಿತ ಅಧಿಕಾರಿಗಳ ಬಳಿ ಮಾತನಾಡಿ ಕೂಡಲೇ ಪ್ರಕರಣವನ್ನು ಇತ್ಯರ್ಥಪಡಿಸಲು ಸೂಚನೆ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ತನಿಖಾ ತಂಡ ನಾಪತ್ತೆಯಾದ ಬಾಲಕಿ ಅದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿಜಯವಾಡದ ರಾಮವರಪ್ಪಾಡು ಮೂಲದ ಯುವಕನೊಂದಿಗೆ ಜಮ್ಮುವಿನಲ್ಲಿ ಇರುವುದು ಪತ್ತೆಯಾಗಿದೆ. ಕೂಡಲೇ ಅಲ್ಲಿಗೆ ತೆರಳಿದ ತಂಡ ಇಬ್ಬರನ್ನೂ ವಶಕ್ಕೆ ಪಡೆದು ಜಮ್ಮುವಿನಿಂದ ವಿಜಯವಾಡಕ್ಕೆ ಕರೆತಂದಿದ್ದಾರೆ.

ವಿಚಾರಣೆ ವೇಳೆ ಯುವಕ ನನ್ನನ್ನು ಪ್ರೀತಿಸುವ ನಾಟಕವಾಡಿ ಬಲವಂತವಾಗಿ ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದ ಕೆಲ ದಿನಗಳ ಬಳಿಕ ಪೊಲೀಸರು ತಮ್ಮನ್ನು ಹುಡುಕಬಹುದು ಎಂದು ಜಮ್ಮುವಿಗೆ ಹೋಗಲು ನಿರ್ಧರಿಸಿದ್ದ ಆದರೆ ಕೈಯಲ್ಲಿ ಹಣವಿರದ ಕಾರಣ ಯುವಕ ತನ್ನ ಮೊಬೈಲ್ ಹಾಗೂ ನನ್ನ ಬಳಿ ಇದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ಜಮ್ಮು ಗೆ ತೆರಳಿದೆವು ಅಲ್ಲಿ ಗೆಳೆಯ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆದರೆ ನನಗೆ ಮೊಬೈಲ್ ಬಳಸಲು ಆತ ಅವಕಾಶ ನೀಡಿಲ್ಲ ಎಂದಿದ್ದಾಳೆ ಒಮ್ಮೆ ಆತ ಕೆಲಸಕ್ಕೆ ಹೋಗಿದ್ದಾಗ ಹೇಗೋ ತನ್ನ ಸಹೋದರಿಗೆ ಇನ್ಸ್ಟಾಗ್ರಾಮ್ ಮೂಲಕ ಸಂದೇಶ ಕಳುಹಿಸಿದ್ದಾಳೆ ಇದರ ಬೆನ್ನು ಹತ್ತಿದ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಯುವಕನ ವಿರುದ್ಧ (ಐಪಿಸಿ) ಸೆಕ್ಷನ್ 366 (ಅಪಹರಣ) ಮತ್ತು 344 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಒಂಬತ್ತು ತಿಂಗಳ ಹಿಂದೆಯೇ ಮಹಿಳೆ ದೂರು ನೀಡಿದ್ದರು:
ಮಗಳು ನಾಪತ್ತೆಯಾಗಿರುವ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕ ಯುವತಿ ಇಬ್ಬರು ಜಮ್ಮುವಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು ಆದರೆ ಪೊಲೀಸರು ತಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸಿಮ್ ಬದಲಾಯಿಸಿದ್ದಾನೆ ಇದರಿಂದ ಪೊಲೀಸರು ತಮ್ಮ ಕಾರ್ಯವನ್ನು ಅರ್ಧಕ್ಕೆ ಬಿಟ್ಟು ಬಿಟ್ಟಿದ್ದಾರೆ, ಇದೀಗ ಒಂಬತ್ತು ತಿಂಗಳ ಬಳಿಕ ಉಪಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪೊಲೀಸರು ಈ ಜೋಡಿಗಳನ್ನು ಪತ್ತೆ ಹಚ್ಚಿದ್ದು ಪೊಲೀಸರ ಬಗ್ಗೆ ಜನ ಆಡಿಕೊಳ್ಳುವಂತಾಗಿದೆ, ಅಲ್ಲದೆ ಕರ್ತವ್ಯದಲ್ಲಿ ನಿರ್ಲಕ್ಷ ತೋರಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Belagavi; ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ

ಟಾಪ್ ನ್ಯೂಸ್

Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ

Kadaba: ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕ, ಸಹಾಯಕ್ಕೆ ಮೊರೆ

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 44 ಶಾಲೆಗಳಿಗೆ ರಜೆ ಘೋಷಣೆ

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 44 ಶಾಲೆಗಳಿಗೆ ರಜೆ ಘೋಷಣೆ

Bar

Government; ಡಿಜಿಟಲೀಕರಣದತ್ತ ಅಬಕಾರಿ ಇಲಾಖೆ: ಭ್ರಷ್ಟಾಚಾರಕ್ಕೆ ಬೀಳಲಿದೆ ಕಡಿವಾಣ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

ASF

ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

C-V-Anand

Governor ವಿರುದ್ಧ ಸುಳ್ಳು: ಕೋಲ್ಕತಾ ಕಮಿಷನರ್‌ ವಿರುದ್ಧ ಶಿಸ್ತು ಕ್ರಮ?

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ

Kadaba: ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕ, ಸಹಾಯಕ್ಕೆ ಮೊರೆ

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.