ಜಿಯೋ ತೆಕ್ಕೆಗೆ ಆರ್ ಕಾಮ್
Team Udayavani, Dec 29, 2017, 6:25 AM IST
ಹೊಸದಿಲ್ಲಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ (ಆರ್.ಕಾಮ್)ಯನ್ನು ಜಿಯೋ ಖರೀದಿ ಮಾಡಲಿದೆ. ಸಾಲದ ಸುಳಿಗೆ ಸಿಲುಕಿದ್ದ ಅನಿಲ್ ಅಂಬಾನಿ ಒಡೆತನದ ರಿಲಾಯನ್ಸ್ ಕಮ್ಯೂನಿಕೇಶನ್ಸ್ನ ಟೆಲಿಕಾಂ ವಹಿವಾಟನ್ನು ಸೋದರ ಮುಖೇಶ್ ಅಂಬಾನಿ ಖರೀದಿ ಸಿದ್ದಾರೆ. ತಂದೆ ದಿ. ಧೀರೂಬಾಯಿ ಅಂಬಾನಿ 85ನೇ ಜನ್ಮದಿನದಂದೇ ಈ ಘೋಷಣೆ ಮಾಡಿರುವುದು ಮಹತ್ವದ್ದಾಗಿದೆ. ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸ್ಥಾಪಿಸಿದ ಅನಂತರದಲ್ಲಿ ರಿಲಾಯನ್ಸ್ ಭಾರೀ ಆಘಾತ ಅನುಭವಿಸಿತ್ತು. 2006ರಲ್ಲಿ ಇಬ್ಬರೂ ಸೋದರರು ಸ್ವತ್ತು ಹಂಚಿಕೊಂಡ ನಂತರದಲ್ಲಿ ಇದೇ ಮೊದಲ ಬಾರಿಗೆ ಸೋದರನ ಸಹಾಯಕ್ಕೆ ಮುಖೇಶ್ ಮುಂದಾಗಿದ್ದಾರೆ.
ತರಂಗಾಂತರ, ಟವರ್, ಆಪ್ಟಿಕಲ್ ಫೈಬರ್ ನೆಟ್ವರ್ಕ್ ಹಾಗೂ ಇತರ ವೈರ್ಲೆಸ್ ಸ್ವತ್ತುಗಳನ್ನು ರಿಲಾಯನ್ಸ್ ಜಿಯೋ ಖರೀದಿ ಸಲಿದೆ. ಆದರೆ ಇದರ ವಹಿವಾಟು ಮೊತ್ತವು 24 ರಿಂದ 25 ಸಾವಿರ ಕೋಟಿ ರೂ. ಆಗಲಿದೆ ಎಂದು ಊಹಿಸಲಾಗಿದೆ. ಆದರೆ ಈ ಬಗ್ಗೆ ನಿಖರ ಮೊತ್ತ ಬಹಿರಂಗಗೊಳಿಸಲಾಗಿಲ್ಲ.
ದೇಶದ ಹಾಗೂ ವಿದೇಶದ 35 ಬ್ಯಾಂಕ್ಗಳಲ್ಲಿ ಒಟ್ಟು 45 ಸಾವಿರ ಕೋಟಿ ರೂ. ಸಾಲವನ್ನು ರಿಲಾಯನ್ಸ್ ಕಮ್ಯೂನಿಕೇಶನ್ಸ್ ಹೊಂದಿದೆ. ಕೆಲವೇ ದಿನಗಳ ಹಿಂದಷ್ಟೇ 40 ಸಾವಿರ ಕೋಟಿ ರೂ. ಹೂಡಿಕೆ ಯನ್ನು ಬಾಹ್ಯ ಮೂಲದಿಂದ ತರಲಾಗಿದೆ ಎಂದು ಅನಿಲ್ ಅಂಬಾನಿ ಘೋಷಿಸಿದ್ದರಿಂದ, ಷೇರು ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಶೇ.50ಕ್ಕೂ ಹೆಚ್ಚು ಏರಿಕೆ ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.