ಮೋದಿ, ಕೇಜ್ರಿವಾಲ್ ವಿರುದ್ಧ ಅಣ್ಣಾ ಕಿಡಿ
Team Udayavani, Oct 3, 2017, 6:20 AM IST
ಹೊಸದಿಲ್ಲಿ: 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಮೊಳಗಿಸಿ ಹೊಸ ಕ್ರಾಂತಿ ಮೂಡಿಸಿದ್ದ ಗಾಂಧಿವಾದಿ ಅಣ್ಣಾ ಹಜಾರೆ ಅವರು ಮತ್ತೂಂದು ಸುತ್ತಿನ ಚಳವಳಿಗೆ ಮುಂದಾಗಿದ್ದಾರೆ. ಪ್ರಸಕ್ತ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಅಣ್ಣಾ ಹೇಳಿದ್ದಾರೆ.
ಗಾಂಧಿ ಜಯಂತಿಯ ದಿನವಾದ ಸೋಮವಾರ ದೆಹಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದು ಕಂಡುಬಂತು. “ಮೋದಿ ಅವರು ಲೋಕ ಪಾಲ ನೇಮಕ ಹಾಗೂ ಭ್ರಷ್ಟಾಚಾರ ಮುಕ್ತ ದೇಶ ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ. ಮೋದಿ ಅವರಿಗೆ ಲೋಕಪಾಲರ ನೇಮಕ ಬೇಕಿಲ್ಲ. ಅವರು ಗುಜರಾತ್ ಸಿಎಂ ಆಗಿದ್ದಾ ಗಲೂ ರಾಜ್ಯದಲ್ಲಿ ಲೋಕಾಯುಕ್ತ ನೇಮಕ ಮಾಡಲಿಲ್ಲ. ಅದಕ್ಕಾಗಿ ಅವರು ಹೈಕೋರ್ಟ್, ಸುಪ್ರೀಂ ವರೆಗೆ ಹೋದರು,’ ಎಂದು ಅಣ್ಣಾ ಆರೋಪಿಸಿದರು.
ಇನ್ನು ಕೇಜ್ರಿವಾಲ್ ಅವರು ಸಿಎಂ ಆದ ಮೇಲೆ ಲೋಕಪಾಲ ಚಳವಳಿಯನ್ನೇ ಮರೆತರು. ಈಗ ನಾನು ಕೈಗೊಳ್ಳುವ ಪ್ರತಿ ಭಟನೆಗೆ ಬರುವಂತೆ ನಾನು ಆಹ್ವಾನ ನೀಡುವುದಿಲ್ಲ. ಒಂದು ವೇಳೆ ತಾವಾಗಿಯೇ ಬರುತ್ತೇನೆ ಎಂದರೂ ದೂರವಿರುವಂತೆ ಸೂಚಿಸುತ್ತೇನೆ ಎಂದರು ಅಣ್ಣಾ. ಇದೇ ವೇಳೆ, ಕೇಂದ್ರ ಸಚಿವ ವಿ.ಕೆ.ಸಿಂಗ್, ಪುದುಚೇರಿ ಲೆ.ಗ. ಕಿರಣ್ ಬೇಡಿ ಕೂಡ ರಾಜಕೀಯಕ್ಕೆ ಧುಮುಕಿ ಚಳವಳಿಗೆ ಎಳ್ಳು ನೀರು ಬಿಟ್ಟರು ಎನ್ನುತ್ತಾ ಅವರ ವಿರುದ್ಧವೂ ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.