Loksabha: ಕೊಯಮತ್ತೂರಿನಲ್ಲಿ ಅಣ್ಣಾಮಲೈಗೆ ಸೋಲಿನ ಆಘಾತ? ಏನಿದು ಎಕ್ಸಿಟ್ ಪೋಲ್ ಫಲಿತಾಂಶ

Team Udayavani, Jun 2, 2024, 10:12 AM IST

Annamalai

ಚೆನ್ನೈ: ಲೋಕಸಭಾ ಚುನಾವಣೆಯ ಏಳು ಹಂತದ ಮತದಾನ ಮುಗಿದು, ಶನಿವಾರ ಸಂಜೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಗೆ ಬಹುಮತ ಬರಲಿದೆ ಎನ್ನುವುದನ್ನು ಸೂಚಿಸುತ್ತಿದೆ. ಅದೇ ವೇಳೆ ದಕ್ಷಿಣದ ರಾಜ್ಯಗಳಾದ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರಯಲಿದೆ ಎಂದು ಸಮೀಕ್ಷೆಗಳು ಸೂಚಿಸಿದೆ.

ತಮಿಳುನಾಡಿನ ಎರಡನೇ ಅತಿದೊಡ್ಡ ನಗರವಾದ ಕೊಯಮತ್ತೂರು 2024 ರ ಲೋಕಸಭಾ ಚುನಾವಣೆಯಲ್ಲಿ ಬಲಿಷ್ಠರ ಘರ್ಷಣೆಗೆ ಸಾಕ್ಷಿಯಾಗಿದೆ. ಮಾಜಿ ನಗರ ಮೇಯರ್ ಮತ್ತು ಡಿಎಂಕೆ ಅಭ್ಯರ್ಥಿ ಪಿ ಗಣಪತಿ ರಾಜ್‌ಕುಮಾರ್ ಮತ್ತು ಎಐಎಡಿಎಂಕೆ ನ ಸಿಂಗೈ ಜಿ ರಾಮಚಂದ್ರನ್ ವಿರುದ್ಧ ಬಿಜೆಪಿಯು ತನ್ನ ಫೈರ್‌ಬ್ರಾಂಡ್ ನಾಯಕ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿದೆ.

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಭವಿಷ್ಯವು ಪ್ರತಿಪಕ್ಷಗಳ ನೇತೃತ್ವದ ಇಂಡಿಯಾ ಬ್ಲಾಕ್ ಗೆಲುವನ್ನು ಸೂಚಿಸುತ್ತದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಭ್ಯರ್ಥಿ ಪಿ ಗಣಪತಿ ರಾಜ್‌ಕುಮಾರ್ ಅವರು ಕೊಯಮತ್ತೂರು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎನ್ನುತ್ತಿದೆ ಎಕ್ಸಿಟ್ ಪೋಲ್ ಸಮೀಕ್ಷೆ.

ಅಣ್ಣಾಮಲೈ ಅವರು ಇದನ್ನು ತಳ್ಳಿಹಾಕಿದ್ದಾರೆ. “ಜೂನ್ 4 ರಂದು ನಿಮಗೆ ಆಹ್ಲಾದಕರ ಆಶ್ಚರ್ಯವನ್ನು ನೀಡಲು ನಾವು ಇಷ್ಟಪಡುತ್ತೇವೆ. ನಾವು ಆರಾಮವಾಗಿ ಗೆಲ್ಲುತ್ತೇವೆ. ಮೋದಿ ಜಿ ದೊಡ್ಡ ಜನಾದೇಶದೊಂದಿಗೆ ಹಿಂತಿರುಗುತ್ತಾರೆ” ಎಂದು ಹೇಳಿದರು.

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಭಾರೀ ಪ್ರಚಾರ ನಡೆಸಿದರು. ದಕ್ಷಿಣದ ರಾಜ್ಯದಲ್ಲಿ ಕಮಳ ಅರಳಿಸಲು ಬಿಜೆಪಿ ಹೈಕಮಾಂಡ್ ಭಾರೀ ಕಸರತ್ತು ನಡೆಸಿದೆ. ಆದರೆ ಸ್ವತಃ ಅಣ್ಣಾಮಲೈ ಸೋಲು ಕಾಣಲಿದ್ದಾರೆ ಎಂಬ ಸಮೀಕ್ಷೆ ವರದಿ ಪಕ್ಷಕ್ಕೆ ಆತಂಕ ತರಿಸಿದೆ.

ಕೊಯಮತ್ತೂರಿನಲ್ಲಿ ಪ್ರಸ್ತುತ ಸಿಪಿಎಂ ನಾಯಕ ಪಿಆರ್ ನಟರಾಜನ್ ಸಂಸದರಾಗಿದ್ದಾರೆ. ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ನಟರಾಜನ್ 45.85 ರಷ್ಟು ಮತಗಳನ್ನು ಗಳಿಸಿದರೆ, ಬಿಜೆಪಿಯ ಸಿಪಿ ರಾಧಾಕೃಷ್ಣನ್ ಅವರು 31.47 ರಷ್ಟು ಮತಗಳನ್ನು ಪಡೆಯುವ ಮೂಲಕ ಸಮೀಪದ ಸ್ಪರ್ಧಿಯಾಗಿದ್ದರು.

ಟಾಪ್ ನ್ಯೂಸ್

1-weddding

Crazy Rich Asian Wedding; ಮದುವೆಗೆ ಬಂದವರಿಗೆ 66,000 ರೂ. ನಗದು ಗಿಫ್ಟ್!

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

1-al

Washington; ಬಿಸಿಲಿನ ಬೇಗೆಗೆ ಕರಗಿಯೇ ಹೋಯಿತು ಲಿಂಕನ್‌ ಪ್ರತಿಮೆ!

1-wwewe

Delhi Airport; ಮೋದಿ ಉದ್ಘಾಟಿಸಿದ್ದ ಟರ್ಮಿನಲ್‌: ಖರ್ಗೆ ಆರೋಪ

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weddding

Crazy Rich Asian Wedding; ಮದುವೆಗೆ ಬಂದವರಿಗೆ 66,000 ರೂ. ನಗದು ಗಿಫ್ಟ್!

1-wwewe

Delhi Airport; ಮೋದಿ ಉದ್ಘಾಟಿಸಿದ್ದ ಟರ್ಮಿನಲ್‌: ಖರ್ಗೆ ಆರೋಪ

ED

ED; ದಿಲ್ಲಿ ಅಬಕಾರಿ ನೀತಿ ಹಗರಣ: 9ನೇ ಆರೋಪಪಟ್ಟಿ ಸಲ್ಲಿಕೆ

MONEY (2)

Small savings ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಇಲ್ಲ

1-saasdsdsa-d

Vikram Misri ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

1-weddding

Crazy Rich Asian Wedding; ಮದುವೆಗೆ ಬಂದವರಿಗೆ 66,000 ರೂ. ನಗದು ಗಿಫ್ಟ್!

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

1-al

Washington; ಬಿಸಿಲಿನ ಬೇಗೆಗೆ ಕರಗಿಯೇ ಹೋಯಿತು ಲಿಂಕನ್‌ ಪ್ರತಿಮೆ!

1-wwewe

Delhi Airport; ಮೋದಿ ಉದ್ಘಾಟಿಸಿದ್ದ ಟರ್ಮಿನಲ್‌: ಖರ್ಗೆ ಆರೋಪ

ED

ED; ದಿಲ್ಲಿ ಅಬಕಾರಿ ನೀತಿ ಹಗರಣ: 9ನೇ ಆರೋಪಪಟ್ಟಿ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.