ಮೋದಿ ಕಾಲದಲ್ಲಿ ಮರಳಿದ ಶಿಲ್ಪ ಸಂಪತ್ತು: ಭಾರತಕ್ಕೆ ಮರಳುತ್ತಿದೆ ಅನ್ನಪೂರ್ಣಾ ದೇವಿ ವಿಗ್ರಹ

Team Udayavani, Nov 30, 2020, 7:19 AM IST

ಮೋದಿ ಕಾಲದಲ್ಲಿ ಮರಳಿದ ಶಿಲ್ಪ ಸಂಪತ್ತು: ಭಾರತಕ್ಕೆ ಮರಳುತ್ತಿದೆ ಅನ್ನಪೂರ್ಣಾ ದೇವಿ ವಿಗ್ರಹ

ಹೊಸದಿಲ್ಲಿ: ಪ್ರಧಾನಿ ಮೋದಿ ರವಿವಾರ ನಡೆಸಿಕೊಟ್ಟ ಮನ್‌ ಕೀ ಬಾತ್‌ ನಲ್ಲಿ ಕೆನಡಾದಲ್ಲಿರುವ ಅನ್ನಪೂರ್ಣಾ ದೇವಿಯ ವಿಗ್ರಹ ಸದ್ಯದಲ್ಲೇ ವಾರಾಣಸಿಗೆ ಮರಳುವ ಸಿಹಿ ಸುದ್ದಿ ನೀಡಿದ್ದಾರೆ. ಶತಮಾನದಷ್ಟು ಹಿಂದೆ ಕಳವಾಗಿದ್ದ ಈ ವಿಗ್ರಹ ವಾಪಸ್‌ ಬರುತ್ತಿರುವುದು ಇಡೀ ದೇಶಕ್ಕೇ ಖುಷಿಯ ವಿಚಾರ ಎಂದಿದ್ದಾರೆ ಮೋದಿ. ಅಷ್ಟೇ ಅಲ್ಲ, ಕಳೆದ ಆರು ವರ್ಷಗಳಲ್ಲಿ ಇಂತಹ ಸುಮಾರು 40 ವಿಗ್ರಹಗಳನ್ನು ವಿದೇಶಗಳಿಂದ ತರಿಸಲಾಗಿದೆ. ಅಮೆರಿಕವೊಂದೇ ಭಾರತದ 200 ಪ್ರಾಚೀನ ವಸ್ತುಗಳನ್ನು ಮರಳಿಸಿದೆ.

ಮೋದಿ ವಿಶೇಷ ಆಸಕ್ತಿ

ಕಳವಾಗಿರುವ ವಿಗ್ರಹಗಳನ್ನು ಮರಳಿ ತರಿಸುವಲ್ಲಿ ಪ್ರಧಾನಿ ಮೋದಿ ವಿಶೇಷ ಆಸಕ್ತಿ ವಹಿಸಿದ್ದಾರೆ. 2014ರಲ್ಲಿ ಪ್ರಧಾನಿಯಾದ ಬಳಿಕ ಆಸ್ಟ್ರೇಲಿಯಾದಿಂದ ಚೋಳರ ಕಾಲದ ನಟ ರಾಜ ಮತ್ತು ಅರ್ಧನಾರೀಶ್ವರ ವಿಗ್ರಹಗಳನ್ನು ವಾಪಸ್‌ ತರಲಾಯಿತು. ಇವೆರಡೂ 10ನೇ ಶತಮಾನದವು. ಸೆಪ್ಟಂಬರ್‌ನಲ್ಲಿ ಮೋದಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ವೇಳೆ ಇವುಗಳನ್ನು ಆಗಿನ ಅಲ್ಲಿನ ಪ್ರಧಾನಿ ವಾಪಸ್‌ ನೀಡಿದ್ದರು.

2015ರಲ್ಲಿ ಕೆನಡಾ ಪ್ರವಾಸಕ್ಕೆ ತೆರಳಿದ್ದ ವೇಳೆ ಖುಜುರಾಹೋದಿಂದ ಕಳವಾಗಿದ್ದ ವಿಗ್ರಹಗಳನ್ನು ವಾಪಸ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದಾದ ಒಂದು ತಿಂಗಳಿನಲ್ಲಿ ಜರ್ಮನಿಯು ದುರ್ಗಾ ಮಾತೆಯ ಮಹಿಷಮರ್ದಿನಿ ಅವತಾರದ ವಿಗ್ರಹ ವನ್ನು ವಾಪಸ್‌ ಮಾಡಿತ್ತು.

ಇಂಡಿಯಾ ಪ್ರೈಡ್‌ ಶ್ರಮ

ಭಾರತದಿಂದ ಕಳವಾಗಿರುವ ವಿಗ್ರಹಗಳನ್ನು ಹುಡುಕುವಲ್ಲಿ ಇಂಡಿಯಾ ಪ್ರೈಡ್‌ ಎಂಬ ಎನ್‌ಜಿಎ ಸಂಘಟನೆಯ ಶ್ರಮವೂ ಇದೆ. 2014ರಲ್ಲಿ ವಿಜಯಕುಮಾರ್‌ ಮತ್ತು ಅನುರಾಗ್‌ ಸಕ್ಸೇನಾ ಎಂಬವರು ಇದನ್ನು ಸ್ಥಾಪಿಸಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರ ಗುಂಪೇ ಇದೆ. ಇವರ ಶ್ರಮದಿಂದ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳು ಇಂಗ್ಲೆಂಡ್‌ನಲ್ಲಿ ಇರುವುದು ಪತ್ತೆಯಾಗಿತ್ತು.

ಮನ್‌ ಕೀ ಬಾತ್‌ ನಲ್ಲಿ ಮೋದಿ ಹೇಳಿದ್ದು

ಭಾನುವಾರ ತಮ್ಮ ಮನ್‌ ಕೀಬಾತ್‌ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅನ್ನ ಪೂರ್ಯಾ ದೇವಿಯ ವಿಗ್ರಹವು ಕೆನಡಾದಿಂದ ವಾಪಸ್‌ ಬರುತ್ತಿರುವ ಮಾಹಿತಿ ನೀಡಿದರು. ಇದನ್ನು 100 ವರ್ಷಗಳ ಹಿಂದೆ ಕಳವು ಮಾಡಲಾಗಿತ್ತು. ಈ ವಿಗ್ರಹ ಮರಳಿಸುತ್ತಿರುವ ಕೆನಡಾ ಸರಕಾರಕ್ಕೆ ಮೋದಿ ಕೃತಜ್ಞತೆ ಸಲ್ಲಿಸಿದರು. 18ನೇ ಶತಮಾನದಲ್ಲಿ ಪೇಶ್ವೆ ಬಾಜೀರಾವ್‌ ಕಾಲದಲ್ಲಿ ನಿರ್ಮಿಸಲಾಗಿದ್ದ ದೇಗುಲದಿಂದ ಈ ವಿಗ್ರಹವನ್ನು ಕಳವು ಮಾಡಲಾಗಿತ್ತು.

ರಾಮ, ಲಕ್ಷ್ಮಣ, ಸೀತೆಯ ಮೂರ್ತಿಗಳು

ಇತ್ತೀಚೆಗಷ್ಟೇ ಇಂಗ್ಲೆಂಡ್ ನಿಂದ ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳನ್ನು ವಾಪಸ್‌ ತರಿಸಲಾಗಿದೆ. ಇವು ವಿಜಯನಗರ ಕಾಲದವು. 1978ರಲ್ಲಿ ತಮಿಳುನಾಡಿನಿಂದ ಇವುಗಳನ್ನು ಕಳವು ಮಾಡಲಾಗಿತ್ತು. ಇಂಗ್ಲೆಂಡ್‌ ಸರಕಾರದ ಜತೆ ಮಾತುಕತೆ ನಡೆಸಿ ವಾಪಸ್‌ ತರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ತಿಳಿಸಿದ್ದಾರೆ. ಮೋದಿ ಅವರ ಆಸ ಕ್ತಿಯಿಂದಾಗಿ ದೇಶದ ಸಾಂಸ್ಕೃ ತಿಕ ಸಂಪ ತ್ತನ್ನು ವಾಪಸ್‌ ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ವಿಗ್ರಹಗಳನ್ನು ಶನಿವಾರವಷ್ಟೇ ನಾಗಪಟ್ಟಣ ಜಿಲ್ಲೆಯ ಆನಂದಮಂಗಲಂನ ದೇಗುಲದಲ್ಲಿ ಪುನರ್‌ ಪ್ರತಿಷ್ಠಾಪನೆ ನಡೆಸಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.