ಮುಂಬಯಿ ಸೆಶನ್ಸ್ ಕೋರ್ಟ್‌ನಲ್ಲಿ ಬೆಂಕಿ: ಜೀವ ಹಾನಿ ಇಲ್ಲ
Team Udayavani, Jan 8, 2018, 10:54 AM IST
ಮುಂಬಯಿ : ಮುಂಬಯಿ ಮಹಾ ನಗರದಲ್ಲಿ ಇನ್ನೊಂದು ಬೆಂಕಿ ಅವಘಡ ಸಂಭವಿಸಿದೆ. ಈ ಬಾರಿ ದು ಘಟಿಸಿರುವುದು ಕರ್ಮವೀರ ಭಾವುರಾವ್ ಮಾರ್ಗದಲ್ಲಿನ ಮುಂಬಯಿ ಸೆಶನ್ಸ್ ಕೋರ್ಟ್ ಕಟ್ಟಡದಲ್ಲಿ – ಇಂದು ಸೋಮವಾರ ಬೆಳಗ್ಗೆ.
ಬೆಂಕಿಯನ್ನು ನಂದಿಸಲು ತ್ವರಿತ ಕಾರ್ಯಾಚರಣೆಗಿಳಿದ ಕನಿಷ್ಠ ಐದು ಅಗ್ನಿಶಾಮಕಗಳು ಹರಸಾಹಸಪಟ್ಟು ಯಶಸ್ವಿಯಾದವು. ಈ ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿರುವ ವರದಿ ಇಲ್ಲ.
ದಕ್ಷಿಣ ಮುಂಬಯಿಯಲ್ಲಿರುವ ಮುಂಬಯಿ ವಿವಿ ಕ್ಯಾಂಪಸ್‌ಗೆ ಸಮೀಪದ ಕೋರ್ಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಅಗ್ನಿ ಶಾಮಕ ದಳಕ್ಕೆ ಇಂದು ಬೆಳಗ್ಗೆ 7.14ರ ಹೊತ್ತಿಗೆ ಸಿಕ್ಕಿತು ಎಂದು ಬಿಎಂಸಿ ಪ್ರಕೋಪ ನಿರ್ವಹಣೆ ಘಟಕದ ಅಧಿಕಾರಿಯೋರ್ವರು ಹೇಳಿದರು.
ಕಳೆದ ಎರಡು ವಾರಗಳ ಅವಧಿಯೊಳಗೆ ಮುಂಬಯಿ ಮಹಾನಗರಿಯಲ್ಲಿ ಘಟಿಸಿರುವ ಐದನೇ ದೊಡ್ಡ ಮಟ್ಟದ ಅಗ್ನಿ ದುರಂತ ಇದಾಗಿದೆ.
ಡಿ.28ರಂದು ಲೋವರ್ ಪರೇಲ್ ನಲ್ಲಿನ ಕಮಲಾ ಮಿಲ್ಸ್ ಆವರಣದಲ್ಲಿ ಘಟಿಸಿದ್ದ ಭೀಕರ ಅಗ್ನಿ ದುರಂತಕ್ಕೆ 14 ಮಂದಿ ಬಲಿಯಾಗಿರುವ ಘಟನೆ ಇನ್ನೂ ಜನಮನದಿಂದ ಆರಿ ಹೋಗಿಲ್ಲ. ಅಷ್ಟರೊಳಗಾಗಿ ಇಂದು ಮತ್ತೆ ಇನ್ನೊಂದು ಅಗ್ನಿ ದುರಂತ ಸಂಭವಿಸಿರುವುದು ಜನರಲ್ಲಿ ಕಳವಳ, ಭಯ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.