ಉತ್ತರಾಖಂಡದಲ್ಲಿ ಮತ್ತೂಂದು ಪ್ರವಾಹ?
Team Udayavani, Feb 13, 2021, 7:10 AM IST
ಡೆಹ್ರಾಡೂನ್/ತಪೋವನ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ರಕ್ಷಣ ಕಾರ್ಯ ಇನ್ನೂ ನಡೆಯುತ್ತಿರುವಾಗಲೇ ಮತ್ತೂಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಋಷ್ಯಗಂಗಾ ಸಮೀಪ ಹಠಾತ್ ಸರೋವರವೊಂದು ನಿರ್ಮಾಣವಾಗಿದ್ದು, ಸ್ಫೋಟಗೊಳ್ಳುವ ಆತಂಕ ಎದುರಾಗಿದೆ. ಇದರಿಂದ ಮತ್ತೂಂದು ಪ್ರವಾಹ ಎದುರಾಗಬಹುದಾಗಿದ್ದು, ಈಗ ನಡೆಯುತ್ತಿರುವ ರಕ್ಷಣ ಕಾರ್ಯಾಚರಣೆಗೂ ಅಡ್ಡಿಯಾಗುವ ಭೀತಿ ಇದೆ ಎಂದು ಹೇಮವತಿ ನಂದನ್ ಬಹುಗುಣ ಘರ್ವಾಲ್ ವಿಶ್ವವಿದ್ಯಾನಿಲಯ (ಎಚ್‌ಎನ್‌ಬಿಜಿಯು)ದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಪ್ರವಾಹದಲ್ಲಿ ತೇಲಿ ಬಂದಿರುವ ಅವಶೇಷಗಳು ಸೇರಿ ಈ ಸರೋವರ ನಿರ್ಮಾಣವಾಗಿರುವುದು ಉಪಗ್ರಹ ಚಿತ್ರಗಳಿಂದ ಖಚಿತವಾಗಿದೆ. ನದಿ ನೀರಿನ ಹರಿವಿಗೆ ಅದು ತಡೆಯಾಗಿರುವುದೂ ದೃಢಪಟ್ಟಿದೆ. ಸರೋವರ 350 ಮೀ. ಉದ್ದ, 60 ಮೀ. ಎತ್ತರ ಮತ್ತು 10 ಡಿಗ್ರಿಗಳಷ್ಟು ಇಳಿಜಾರಿನಂತೆ ಕಾಣುತ್ತಿದೆ ಎಂದು ಕೇಂದ್ರ ಜಲ ಆಯೋಗ ಟ್ವೀಟ್ ಮಾಡಿದೆ. ಇದು ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದಿದ್ದಾರೆ.
ರಾಜ್ಯ ಸರಕಾರ ಫೋಟೋಗಳನ್ನು ಪರಿಶೀಲಿಸುತ್ತಿದೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಹೆಲಿಕಾಪ್ಟರ್‌ಗಳಲ್ಲಿ ವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಅವರು ಪರಿಶೀಲಿಸಿ ವರದಿ ನೀಡಲಿದ್ದಾರೆ ಎಂದಿದ್ದಾರೆ.
ಗ್ರಾಮಸ್ಥರಿಂದ ಪತ್ತೆ :
ಈ ಸರೋವರ ಪತ್ತೆಯಾಗಿರುವುದು ಗ್ರಾಮಸ್ಥರಿಂದ. ಋಷ್ಯಗಂಗಾ ನದಿ ಹರಿಯುವ ಜಾಗದಲ್ಲಿ ಇದು ನಿರ್ಮಾಣವಾಗಿದೆ. ನದಿಯ ಹರಿವಿಗೆ ಅವಶೇಷಗಳು ಅಡ್ಡಬಂದಿದ್ದು, ನೀರು ಸಂಗ್ರಹವಾಗುತ್ತಿದೆ. ನೀರು ಹೆಚ್ಚಾದಾಗ ಅಡ್ಡಲಾಗಿರುವ ಅವಶೇಷಗಳನ್ನು ಮುರಿದು ಒಮ್ಮೆಲೇ ನೀರು ನುಗ್ಗಬಹುದು. ಆಗ ಮತ್ತೆ ಪ್ರವಾಹ ಉಂಟಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಮತ್ತೆರಡು ಮೃತದೇಹ ಪತ್ತೆ :
ಚಮೋಲಿಯಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗುವುದರ ಮೂಲಕ ಒಟ್ಟು 38 ಮಂದಿ ಅಸುನೀಗಿರುವುದು ಖಚಿತವಾಗಿದೆ. ಎನ್‌ಟಿಪಿಸಿಯ ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ ಸುರಂಗದಲ್ಲಿ ಇನ್ನೂ 25-35 ಮಂದಿ ಸಿಕ್ಕಿ ಹಾಕಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ತಪೋವನದಲ್ಲಿ ಸುರಂಗ ಮಾರ್ಗಕ್ಕೆ ಪರ್ಯಾಯವಾಗಿ ರಸ್ತೆ ನಿರ್ಮಾಣವೂ ಬಿರುಸಾಗಿ ಸಾಗಿದೆ. ಇನ್ನೂ 170ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.