ಸನ್ನಿಧಾನಕ್ಕೆ ಮತ್ತೋರ್ವ ಮಹಿಳೆ

Team Udayavani, Jan 5, 2019, 12:30 AM IST

x-127.jpg

ಶಬರಿಮಲೆ: ಇಬ್ಬರು ಮಹಿಳೆಯರ ಪ್ರವೇಶದಿಂದಾಗಿ ಕೇರಳ ರಣಾಂಗಣವಾಗಿರುವ ಮಧ್ಯೆ ಗುರುವಾರ ರಾತ್ರಿ 47 ವರ್ಷದ ಮತ್ತೂಬ್ಬ ಮಹಿಳೆ ಅಯ್ಯ ಪ್ಪನ ದರ್ಶನ ಪಡೆದ ವಿಷಯ ಬೆಳಕಿಗೆ ಬಂದಿದೆ. ಶ್ರೀಲಂಕಾದ ಶಶಿಕಲಾ ಎಂಬವರು ದೇವರ ದರ್ಶನ ಪಡೆದಿದ್ದಾರೆ ಎಂದು ಮುಖ್ಯ ಮಂತ್ರಿ ಕಾರ್ಯಾಲಯ ಹಾಗೂ ಪೊಲೀ ಸರು ದೃಢಪಡಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಶಶಿಕಲಾ ಪೊಲೀಸರು ಅವಕಾಶ ನೀಡಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಶುಕ್ರವಾರವೂ ಅಹಿತ ಕರ ಘಟನೆಗಳು ವರದಿಯಾಗಿವೆ. ಗುರುವಾರದಿಂದ 1, 369 ಮಂದಿಯನ್ನು ಬಂಧಿಸಿ, 801 ಪ್ರಕರಣಗಳನ್ನು ದಾಖಲಿಸಲಾಗಿದೆ. 717 ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದು, ಕಲ್ಲಿಕೋಟೆ, ಕಣ್ಣೂರು ಸೇರಿದಂತೆ ಕೆಲವೆಡೆ ಕಚ್ಚಾ ಬಾಂಬ್‌ ಎಸೆದ ಪ್ರಕರಣ ನಡೆದಿವೆ.

ಮಂಜೇಶ್ವರ : 144 ಸೆಕ್ಷನ್‌
ಶುಕ್ರವಾರ ಮಂಜೇಶ್ವರ ತಾಲೂಕಿ ನಾದ್ಯಂತ 144 ಸೆಕ್ಷನ್‌ ನಡಿ ಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.ಎಸ್‌ಪಿ ಡಾ| ಎ. ಶ್ರೀನಿವಾಸ್‌ ಹಾಗೂ ಎಎಸ್‌ಪಿ ಶಿಲ್ಪಾ ನೇತೃತ್ವ ದಲ್ಲಿ  ಬಿಗು ಬಂದೋಬಸ್ತ್ ಮಾಡ ಲಾಗಿದೆ. ಸೂಕ್ಷ್ಮ ಸಂವೇದಿ ಪ್ರದೇಶ ದಲ್ಲಿ ವಿಶೇಷ ಭದ್ರತೆ ಮತ್ತು ಗಸ್ತು ನಡೆಸಲಾಯಿತು.  ಭಕ್ತರ ವಾಹನಗಳಿಗೆ ಭದ್ರತೆ ಒದಗಿಸಲಾಗಿದೆ. ಕಿಡಿಗೇಡಿಗಳ ಹಲ್ಲೆಯಿಂದ ಅಯ್ಯಪ್ಪ ವ್ರತಧಾರಿಗಳ ಸಹಿತ 15ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 

ಪ್ರವೇಶಕ್ಕೆ ಸಿಸಿಟಿವಿ ಸಾಕ್ಷಿ
ಶಶಿಕಲಾ ತಾನು ದೇಗುಲ ಪ್ರವೇಶಿಸಿಲ್ಲ ಎಂದಿರುವ ಹಿನ್ನೆಲೆಯಲ್ಲಿ ಪೊಲೀಸರು ದೇಗುಲದ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ್ದಾರೆ. ಶಶಿಕಲಾ ಅವರು ಸನ್ನಿಧಾನಂ ಕಡೆಗೆ ಹೆಜ್ಜೆಯಿಡುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರೀಕೋವಿಲ್‌ನಲ್ಲಿ ಅಳವಡಿಸಿದ್ದ ಕಣ್ಗಾವಲು ಕೆಮರಾದಲ್ಲಿ ಶಶಿಕಲಾ ಮತ್ತು ಅವರೊಂದಿಗಿದ್ದ ಪುರುಷ ರೊಬ್ಬರು ದರ್ಶನ ಪಡೆದು ವಾಪಸಾಗುತ್ತಿರುವುದು ಕೂಡ ದಾಖಲಾಗಿದೆ. ಶಶಿಕಲಾ ಅವರ ತಲೆಯಲ್ಲಿ ಇರುಮುಡಿ ಕಟ್ಟು ಕೂಡ ಇದೆ. ಈ ಕುರಿತು ಮಾತನಾಡಿರುವ ಶಶಿಕಲಾ, ನಾನು ಅಯ್ಯಪ್ಪ ಭಕ್ತೆ. 41 ದಿನಗಳ ವ್ರತವನ್ನೂ ಮಾಡಿದ್ದೇನೆ. ನಾನು ದೇಗುಲಕ್ಕೆ ಹೋದಾಗ ಭಕ್ತರು ವಿರೋಧಿಸದಿದ್ದರೂ ಪೊಲೀಸರೇ ವಾಪಸ್‌ ಕಳುಹಿಸಿದರು. ನಿಮಗೆಲ್ಲರಿಗೂ ಅಯ್ಯಪ್ಪನೇ ಉತ್ತರ ಕೊಡುತ್ತಾನೆ ಎಂದರು. ಪಂಪಾದಲ್ಲಿ ವರದಿಗಾರರ ಜತೆ ಮಾತನಾಡಿದ ಶಶಿಕಲಾ ಅವರ ಪತಿ ಶರವಣನ್‌, ನಾನು, ಪತ್ನಿ ಹಾಗೂ ಪುತ್ರ ದರ್ಶನಕ್ಕಾಗಿ ತೆರಳಿದ್ದು ನಿಜ. ಆದರೆ ನನ್ನ ಪತ್ನಿಗೆ 18 ಮೆಟ್ಟಿಲು ಹತ್ತಲು ಪೊಲೀಸರು ಬಿಡಲಿಲ್ಲ. ಹೀಗಾಗಿ ನಾನು ಮತ್ತು ಮಗ ಮಾತ್ರ ಅಯ್ಯಪ್ಪನ ದರ್ಶನ ಪಡೆದೆವು ಎಂದಿದ್ದಾರೆ. ಆದರೆ ಭದ್ರತೆಯ ಭಯದಿಂದ ಶಶಿಕಲಾ ಕುಟುಂಬ ಈ ರೀತಿ ಹೇಳುತ್ತಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಶಬರಿಮಲೆ ಯಾತ್ರೆ ಸುಗಮ
ತಲಪಾಡಿ/ವಿಟ್ಲ/ಜಾಲೂಸೂರು: ಕೇರಳ ದಲ್ಲಿ  ಆತಂಕವಿದ್ದರೂ ದಕ್ಷಿಣ ಕನ್ನಡ ಜಿಲ್ಲೆ  ಮೂಲಕ ಶಬರಿಮಲೆಗೆ ತೆರಳುವ ಭಕ್ತರಿಗೆ ಶುಕ್ರವಾರ ಸಮಸ್ಯೆ ಎದುರಾಗಿಲ್ಲ.  ಗಡಿ ಪ್ರದೇಶಗಳಲ್ಲಿ ಪೊಲೀಸ್‌ ಬಂದೋಬಸ್ತ್ ಇದ್ದು, ಅನ್ಯರಾಜ್ಯಗಳು ಮತ್ತು ರಾಜ್ಯದ ವಿವಿಧೆಡೆಯಿಂದ ಖಾಸಗಿ ವಾಹನಗಳಲ್ಲಿ ಬಂದ ಯಾತ್ರಿಕರು ತಲಪಾಡಿ, ವಿಟ್ಲ, ಜಾಲೂಸೂರುರು ಮೂಲಕ ಕೇರಳಕ್ಕೆ ತೆರಳಿದರು. ಮಂಗಳೂರಿನಿಂದ ಪ್ರಯಾಣಿಸುವವರು ರೈಲುಗಳನ್ನು ಆಶ್ರಯಿಸಿದರು. 

ಕಾಸರಗೋಡು: 677 ಮಂದಿ ವಿರುದ್ಧ  ಕೇಸು, 33 ಸೆರೆ
ಕಾಸರಗೋಡು:
ಶಬರಿಮಲೆಗೆ ಯುವತಿಯರ ಪ್ರವೇಶ ಖಂಡಿಸಿ ಗುರುವಾರ ನಡೆದ ಹರತಾಳ ಮತ್ತು ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಜಿಲ್ಲೆ ಯಲ್ಲಿ 677 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, 33 ಮಂದಿ ಬಂಧಿಸಿದ್ದಾರೆ.  ಇತರರಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ಬಾಯಾರು ಮುಳಿಗದ್ದೆಯ ಮದ್ರಸಾ ಅಧ್ಯಾಪಕ ಅಬ್ದುಲ್‌ ಕರೀಂ ಮೇಲೆ ಹಲ್ಲೆಗೆ ಸಂಬಂಧಿಸಿ 12 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಂದ್ಯೋಡಿನ ಹಲ್ಲೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿರುವ ಕುಂಬಳೆ ಪೊಲೀಸರು 100 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಕಾಸರಗೋಡು ನಗರ ಮತ್ತು ಪರಿಸರದಲ್ಲಿ ಅಹಿತಕರ ಘಟನೆಗೆ ಸಂಬಂಧಿಸಿ 16 ಮಂದಿಯನ್ನು ಬಂಧಿಸಿ ದ್ದು, ಕರಂದಕ್ಕಾಡ್‌ನ‌ಲ್ಲಿ ವಾಹನಗಳನ್ನು ತಡೆದು ಮೆರವಣಿಗೆ ನಡೆಸಿದ ಘಟನೆಗೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ. ಶ್ರೀಕಾಂತ್‌, ಪಿ. ರಮೇಶ್‌, ಸುಜಿತ್‌, ಉಮಾ, ರೋಹಿತ್‌ ಸಹಿತ 280 ಮಂದಿ ವಿರುದ್ಧ  ಕೇಸು ದಾಖಲಾಗಿದೆ.

ಮನೆಗೆ ಹಾನಿಗೊಳಿಸಿದ ಘಟನೆಗೆ ಸಂಬಂಧಿಸಿ 10 ಮಂದಿ ವಿರುದ್ಧ ಕೇಸು ದಾಖಲಿಸಿದ್ದು, ಆಟೋ ರಿಕ್ಷಾ ಹಾನಿಗೊಳಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಪೊಯಿನಾಚಿಯಲ್ಲಿ ರಸ್ತೆ ತಡೆ ನಡೆಸಿದ ಆರೋಪದಲ್ಲಿ 20 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಶಂಕಿತ ಯುವಕನೋರ್ವನನ್ನು ಬಂಧಿಸಲಾಗಿದೆ. ಮಧೂರಿನಲ್ಲಿ ಅನುಮತಿ ರಹಿತ ಮೆರವಣಿಗೆ ಸಂಬಂಧ ಐವರನ್ನು ಬಂಧಿಸಲಾಗಿದೆ.

ಟಾಪ್ ನ್ಯೂಸ್

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!

Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!

Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ

Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ

ಜೋಡೋ ಯಾತ್ರೆಯಲ್ಲಿ”ನಗರ ನಕಲರು’: ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!

Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!

Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ

Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ

ಜೋಡೋ ಯಾತ್ರೆಯಲ್ಲಿ”ನಗರ ನಕಲರು’: ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.