ಅಲಹಾಬಾದ್‌ನ ಪ್ರಶಾಂತ್ ಮಿಶ್ರಾ ರಚಿಸಿದ ವಿನ್ಯಾಸ : ಲೋಕಪಾಲಕ್ಕೆ ಚಿಹ್ನೆ, ಧ್ಯೇಯವಾಕ್ಯ
Team Udayavani, Nov 27, 2019, 8:27 AM IST
ಹೊಸದಿಲ್ಲಿ: ದೇಶದ ಮೊದಲ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ಲೋಕಪಾಲಕ್ಕೆ ಹೊಸ ಚಿಹ್ನೆ (ಲೋಗೋ), ಧ್ಯೇಯ ವಾಕ್ಯ ಸಿಕ್ಕಿದೆ. ಕೇಂದ್ರ ಸಿಬಂದಿ ಖಾತೆಯೇ ಸ್ವತಃ ಧ್ಯೇಯ ವಾಕ್ಯ ರೂಪಿಸಿದೆ. ಚಿಹ್ನೆಯನ್ನು ಜನರಿಂದ ಬಂದಿರುವುದನ್ನು ಆಯ್ಕೆ ಮಾಡಲಾಗಿದೆ. ಆರು ಸಾವಿರಕ್ಕೂ ಅಧಿಕ ಧ್ಯೇಯ ವಾಕ್ಯಕ್ಕಾಗಿನ ಪ್ರತಿಕ್ರಿಯೆಗಳಲ್ಲಿ ಯಾವುದೂ ತೃಪ್ತಿಕರವಾಗಿ ಇರಲಿಲ್ಲ. ಮೂರು ಹಂತಗಳಲ್ಲಿ ಅವುಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಅಲಹಾಬಾದ್‌ನ ಪ್ರಶಾಂತ್ ಮಿಶ್ರಾ ಎಂಬುವರು ವಿನ್ಯಾಸಗೊಳಿಸಿದ ಚಿಹ್ನೆಯನ್ನು ಪರಿಗಣಿಸಲಾಯಿತು.
ಹೇಗಿದೆ ಚಿಹ್ನೆ?: ‘ಲೋಕ’ ಎಂದರೆ ಜನರು, ‘ಪಾಲ್’ ಎಂದರೆ ‘ಜನರ ರಕ್ಷಕ’. ಹೀಗಾಗಿ ‘ಜನರ ರಕ್ಷಕ’ ಎಂದು ವಿನ್ಯಾಸಕಾರ ಮಿಶ್ರಾ ಹೇಳಿದ್ದಾರೆ. ಅದರಲ್ಲಿ ಒಂಬುಡ್ಸ್‌ಮನ್, ಜನರು (ಮೂರು ಮುಖಗಳು ಇವೆ), ಜಾಗೃತವಾಗಿರುವುದು (ಅಶೋಕ ಚಕ್ರದ ಕಣ್ಣಿನ ಗೊಂಬೆ), ಕಾನೂನು (ಕಿತ್ತಳೆ ಬಣ್ಣದಲ್ಲಿರುವ ಪುಸ್ತಕ), ನ್ಯಾಯಾಂಗ (ಎರಡೂ ಕೈಗಳಲ್ಲಿ ತ್ರಿವರ್ಣಗಳ ಮೂಲಕ ವಿಶೇಷ ರೀತಿಯಲ್ಲಿ ಹಿಡಿದುಕೊಂಡಿರುವ ವ್ಯವಸ್ಥೆ) ಇದೆ ಎಂದಿದ್ದಾರೆ.
ಧ್ಯೇಯ ವಾಕ್ಯ: ‘ಮತ್ತೂಬ್ಬರ ಸಂಪತ್ತಿನ ಮೇಲೆ ದುರಾಸೆಪಡುವುದು ಬೇಡ’ ಎಂಬ ಈಶಾಬಸೋಪನಿಷತ್‌ನ ಶ್ಲೋಕದಿಂದ ಅದನ್ನು ಆಯ್ದುಕೊಳ್ಳಲಾಗಿದೆ. ಕಳೆದ ತಿಂಗಳ 19ರಂದು ನಡೆದಿದ್ದ ಸಭೆಯಲ್ಲಿ ಬಂದಿರುವ ಆರು ಸಾವಿರ ಪ್ರತಿಕ್ರಿಯೆಗಳಲ್ಲಿ ಯಾವುದೂ ಸರಿ ಹೊಂದದೇ ಇರುವುದರಿಂದ ಸಚಿವಾಲಯ ಮಟ್ಟದಲ್ಲಿಯೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.