ಕರವೇ ನಾರಾಯಣ ಗೌಡರ ಹಿಂದಿ ವಿರೋಧಿ ಅಭಿಯಾನ:ಎಂಎನ್‌ಎಸ್‌ ಬೆಂಬಲ


Team Udayavani, Jul 14, 2017, 12:44 PM IST

Raj-Thackeray.jpg

ಮುಂಬಯಿ: ಕರ್ನಾಟಕದ  ಕನ್ನಡ ಪರ ಸಂಘಟನೆಯಾಗಿರುವ  ನಾರಾಯಣ ಗೌಡ ನೇತೃತ್ವದ  ಕರ್ನಾಟಕ  ರಕ್ಷಣಾ ವೇದಿಕೆ(ಕರಾವೇ) ಹಿಂದಿ  ಹೇರಿಕೆ ವಿರೋಧಿಸಿ  ನಡೆಸುತ್ತಿರುವ  ಅಭಿಯಾನಕ್ಕೆ  ಮಹಾರಾಷ್ಟ್ರ  ನವ ನಿರ್ಮಾಣ  ಸೇನೆ  ತನ್ನ  ಬೆಂಬಲ ಘೋಷಿಸಿದೆ. 

ದೇಶಾದ್ಯಂತ  ಹಿಂದಿ  ಭಾಷೆಯನ್ನು  ಹೇರುವ  ಬಿಜೆಪಿ  ನೇತೃತ್ವದ  ಕೇಂದ್ರ ಸರಕಾರದ  ಪ್ರಯತ್ನ  ವಿರೋಧಿಸಿ  ಕರ್ನಾಟಕ ರಕ್ಷಣಾ  ವೇದಿಕೆ  ಬೆಂಗಳೂರಿನಲ್ಲಿ  ಹೋರಾಟ ನಡೆಸುತ್ತಿದೆ.  ಈ ಅಭಿಯಾನದ  ಭಾಗವಾಗಿ  ವೇದಿಕೆ  ಶನಿವಾರದಂದು ಬೆಂಗಳೂರಿನಲ್ಲಿ  ಸೆಮಿನಾರ್‌ ಒಂದನ್ನು  ಆಯೋಜಿಸಿದೆ.  ಈ  ಸೆಮಿನಾರ್‌ನಲ್ಲಿ  ಭಾಗವಹಿಸುವಂತೆ  ವೇದಿಕೆಯ  ಅಧ್ಯಕ್ಷ  ನಾರಾಯಣ ಗೌಡ  ಅವರು  ಎಂಎನ್‌ಎಸ್‌ಗೆ  ಆಹ್ವಾನ ಕಳುಹಿಸಿಕೊಟ್ಟಿದೆ ಎಂದು  ಎಂಎನ್‌ಎಸ್‌ ನಾಯಕ ಸಂದೀಪ್‌ ದೇಶಪಾಂಡೆ  ತಿಳಿಸಿದರು.

ಅಷ್ಟೇ ಅಲ್ಲದೆ  ನಾರಾಯಣ ಗೌಡ ಅವರು  ಎಂಎನ್‌ಎಸ್‌  ಮುಖ್ಯಸ್ಥ  ರಾಜ್‌ ಠಾಕ್ರೆ  ಅವರಿಗೆ  ದೂರವಾಣಿ ಕರೆ ಮಾಡಿ ಕೇಂದ್ರ ಸರಕಾರದ  ಹಿಂದಿ  ಹೇರಿಕೆ  ಪ್ರಯತ್ನದ  ವಿರುದ್ಧದ  ಹೋರಾಟದಲ್ಲಿ  ಕೈಜೋಡಿಸುವಂತೆ  ಮನವಿ ಮಾಡಿಕೊಂಡರು  ಎಂದವರು  ತಿಳಿಸಿದರು. 

ಮಾತುಕತೆಯ ವೇಳೆ ರಾಜ್‌ ಠಾಕ್ರೆ ಅವರು ಕರ್ನಾಟಕ ರಕ್ಷಣಾ ವೇದಿಕೆಯ  ಈ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವ  ಭರವಸೆಯನ್ನು ನಾರಾಯಣ ಗೌಡ ಅವರಿಗೆ ನೀಡಿದ್ದಾರೆ. ಬಿಜೆಪಿ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನದಲ್ಲಿದ್ದು ಕೇಂದ್ರದ  ಈ  ಕ್ರಮದಿಂದಾಗಿ  ಮರಾಠಿ ಭಾಷೆಗೆ  ಸಾಕಷ್ಟು  ಹಿನ್ನಡೆಯುಂಟಾಗಿದೆ ಎಂದು  ದೇಶಪಾಂಡೆ  ತಿಳಿಸಿದರು. 

ಬೆಂಗಳೂರಿನಲ್ಲಿ  ಶನಿವಾರ ನಡೆಯಲಿರುವ ಈ ಸೆಮಿನಾರ್‌ನಲ್ಲಿ ಎಂಎನ್‌ಎಸ್‌ನ ಪ್ರತಿನಿಧಿಯಾಗಿ  ಸಂದೀಪ್‌ ದೇಶಪಾಂಡೆ ಪಾಲ್ಗೊಳ್ಳಲಿರುವರು.   

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.