ಸಮರ ಸನ್ನದ್ಧತೆ ವೀಡಿಯೋ ಹರಿಬಿಟ್ಟ ನೌಕಾಪಡೆ
Team Udayavani, Oct 24, 2020, 9:33 AM IST
ಹೊಸದಿಲ್ಲಿ: ಭಾರತ- ಚೀನ ಉದ್ವಿಗ್ನತೆ ನಡುವೆ ಭಾರತೀಯ ನೌಕಾಪಡೆ “ಹಡಗು ನಿರೋಧಕ ಕ್ಷಿಪಣಿ’ ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಸಮರಾಭ್ಯಾಸದ ಭಾಗವಾಗಿ ಮುಳುಗುತ್ತಿರುವ ಹಡಗೊಂದಕ್ಕೆ ಅತ್ಯಂತ ನಿಖರವಾಗಿ ದಾಳಿ ಮಾಡಿರುವ ಕ್ಷಿಪಣಿ ಪರೀಕ್ಷೆಯ ವಿಡಿಯೋವನ್ನು ನೌಕಾಪಡೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಈ ಮೂಲಕ ನೌಕಾಪಡೆಯ ಸಮರ ಸನ್ನದ್ಧತೆಯನ್ನು ಪ್ರದರ್ಶಿಸಿದೆ.
ಅರಬ್ಬೀ ಸಮುದ್ರದಲ್ಲಿ ಮಧ್ಯಮ ಗಾತ್ರದ ಸಮರ ನೌಕೆ ಐಎನ್‌ಎ ಪ್ರಬಲ್ ಮೂಲಕ ಚಿಮ್ಮಿದ ಕ್ಷಿಪಣಿ ಗರಿಷ್ಠ ದೂರದಲ್ಲಿ ಮುಳುಗುತ್ತಿದ್ದ ಹಡಗನ್ನು ಯಶಸ್ವಿಯಾಗಿ ಟಾರ್ಗೆಟ್ ಮಾಡಿದೆ.
ಇದನ್ನೂ ಓದಿ:ಲಸಿಕೆ ವಿತರಣೆಗೆ ಯೋಜನೆ; ಆದ್ಯತಾ ವಲಯ ಗುರುತಿಸಿರುವ ಕೇಂದ್ರ
ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮಂಗಳವಾರ ವಷ್ಟೇ ಸಮುದ್ರ ತೀರ ಸನಿಹದ ಪ್ರದೇಶಗಳಲ್ಲಿನ ಕಾರ್ಯಾಚರಣೆ ಸಿದ್ಧತೆ ಬಗ್ಗೆ ಪರಿಶೀಲಿಸಿದ್ದರು. ಇದರ ಬೆನ್ನಲ್ಲೇ ಈ ಪರೀಕ್ಷೆ ನಡೆದಿದೆ.
Anti Ship Missile successfully launched by @indiannavy Missile Corvette #INSPrabal pic.twitter.com/gSwYjerNDu
— DD News (@DDNewslive) October 23, 2020
ಲಡಾಖ್ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಇತ್ತ ನೌಕಾಪಡೆ ಸಮುದ್ರ ವ್ಯಾಪ್ತಿಯಲ್ಲಿ ನಿರಂತರ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಇತರೆ ಯುದ್ಧನೌಕೆಗಳ ನೇತೃತ್ವದಲ್ಲಿ ನಿರಂತರ ಸಮರಾಭ್ಯಾಸ ನಡೆಸುತ್ತಲೇ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.