ಫೋರ್ಬ್ಸ್ ಪಟ್ಟಿಯಲ್ಲಿ ಅನುಷ್ಕಾ, ಸಿಂಧು
Team Udayavani, Mar 28, 2018, 8:55 AM IST
ಮುಂಬೈ: ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವಿ ನಟಿ ಎಂಬ ಖ್ಯಾತಿಗೆ ಪಾತ್ರವಾದ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಇದೀಗ ಫೋರ್ಬ್ಸ್ 30 ಅಂಡರ್ 30 ಏಷ್ಯಾ 2018ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷ ಈ ಖ್ಯಾತಿಗೆ ಪಾತ್ರವಾದ ಏಕೈಕ ಬಾಲಿವುಡ್ ನಟಿ ಈಕೆ. ಇವರ ಜೊತೆಗೆ, ಬ್ಯಾಡ್ಮಿಂಟನ್ ತಾರೆ ಪಿ.ಪಿ.ಸಿಂಧು ಕೂಡ ಈ ಪಟ್ಟಿಯಲ್ಲಿದ್ದಾರೆ. ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತಿರುವ ಮತ್ತು ಏಷ್ಯಾದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡುತ್ತಿರುವ 30 ವರ್ಷದೊಳಗಿನ 30 ವ್ಯಕ್ತಿಗಳ ಹೆಸರನ್ನು ಫೋರ್ಬ್ಸ್ ಪಟ್ಟಿ ಮಾಡಿದೆ.
ಫೋರ್ಬ್ಸ್ ಪಟ್ಟಿಯ ವೈಶಿಷ್ಟ್ಯ
– ಏಷ್ಯಾ-ಪೆಸಿಫಿಕ್‌ನ 24 ರಾಷ್ಟ್ರಗಳ ಪ್ರತಿನಿಧಿಗಳಿಗೆ ಅವಕಾಶ
– ಈ ಬಾರಿ ಅಜೆರ್‌ಬೈಜಾನ್ ಮತ್ತು ಉತ್ತರ ಕೊರಿಯಾ ಕೂಡ ಸೇರ್ಪಡೆ
ಆನ್‌ಲೈನ್ ಮೂಲಕ ನಾಮನಿರ್ದೇಶನ
10 ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಧಕರ ಆಯ್ಕೆ
ಅನುಷ್ಕಾ ಶರ್ಮಾ
2007ರಲ್ಲಿ ಮಾಡೆಲ್ ಆಗಿ ವೃತ್ತಿ ಆರಂಭಿಸಿದ ಅನುಷ್ಕಾ 2008ರಲ್ಲಿ ರಬ್ ನೆ ಬನಾ ದಿ ಜೋಡಿ ಮೂಲಕ ಸಿನಿರಂಗ ಪ್ರವೇಶಿಸಿದರು. ಈ ಸಿನಿಮಾ ಹಿಟ್ ಆಗಿದ್ದಲ್ಲದೆ, ಮನೋಜ್ಞ ಅಭಿನಯಕ್ಕಾಗಿ ಅನುಷ್ಕಾಗೆ ಫಿಲಂ ಫೇರ್ ಪ್ರಶಸ್ತಿಯೂ ಲಭಿಸಿದೆ. ಬಳಿಕ ಬ್ಯಾಂಡ್ ಬಾಜಾ ಬಾರಾತ್, ಜಬ್ ತಕ್ ಹೇ ಜಾನ್, ಪೀಕೆ, ಬಾಂಬೆ ವೆಲ್ವೆಟ್, ದಿಲ್ ಧಡಕ್‌ನೇ ದೋ, ಏ ದಿಲ್ ಹೇ ಮುಷ್ಕಿಲ್, ಜಬ್ ಹ್ಯಾರಿ ಮೆಟ್ ಸೇಜಲ್, ಪರಿ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ.
ಪಿ.ವಿ. ಸಿಂಧು
ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಪಿ.ವಿ.ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಸೇರಿದಂತೆ ಅನೇಕ ಸೂಪರ್ ಸೀರೀಸ್ ಟ್ರೋಫಿ ಗೆದ್ದು ಪ್ರಶಂಸೆ ಗಳಿಸಿದ್ದಾರೆ.
ಪಾಕಿಸ್ತಾನದ 9 ಮಂದಿಗೆ ಸ್ಥಾನ
ಪಾಕ್ ಗಾಯಕಿ ಮೊಮಿನಾ ಮುಸ್ತೆಹ್ಸಾನ್, ಆರೋಗ್ಯ ಕ್ಷೇತ್ರದ ಸಾಧಕರಾದ ಮೊಹಮ್ಮದ್ ಅಸಾದ್ ರಜಾ, ಅಬ್ರಾಹಿಂ ಸಾಹಾ, ವಿಡಿಯೋ ಗೇಮಿಂಗ್ ಕ್ಷೇತ್ರದ ಸಾದಿಯಾ ಬಶೀರ್ ಸೇರಿದಂತೆ ಬರೋಬ್ಬರಿ 9 ಮಂದಿ ಪಾಕಿಸ್ತಾನೀಯರು ಪಟ್ಟಿಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.