ಪಾತಾಳಕ್ಕೆ ಕುಸಿದ ಕಾಂಗ್ರೆಸ್ ಈಗ ಅಪ್ನಾದಲ್‌ಗಿಂತಲೂ ಸಣ್ಣ ಪಕ್ಷ!
Team Udayavani, Mar 13, 2017, 3:45 AM IST
ಲಕ್ಕೋ: ಶತಮಾನಗಳಷ್ಟು ಹಳೆಯದಾದ ಮತ್ತು ಇತಿಹಾಸ ಹೊಂದಿರುವ ಕಾಂಗ್ರೆಸ್ ಈಗ ಅಪ್ನಾ ದಲ್‌ಗಿಂತಲೂ ಸಣ್ಣ ಪಕ್ಷವಾಗಿ ಹೊರಹೊಮ್ಮುತ್ತಿದೆಯೇ?
ಹೌದು. ಉತ್ತರಪ್ರದೇಶದಲ್ಲಿ ಅಪ್ನಾದಲ್‌ಗಿಂತಲೂ ಕಡಿಮೆ ಸ್ಥಾನ ಗಳಿಸಿ ಅತ್ಯಂತ ಶೋಚನೀಯ ಪರಿಸ್ಥಿತಿಗೆ ತಲುಪಿದೆ ಕಾಂಗ್ರೆಸ್. ಈ ಬಾರಿ ಸಮಾಜವಾದಿ ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ. 105 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಕೇವಲ 7 ರಲ್ಲಿ ಮಾತ್ರ ಗೆಲುವು ಕಂಡಿದೆ.
ವಿಚಿತ್ರ ಎಂದರೆ, ಯುಪಿಯಲ್ಲಿ ಅತಿ ಸಣ್ಣ ಪಕ್ಷವಾಗಿರುವ ಅಪ್ನಾ ದಲ್ ಸ್ಪರ್ಧಿಸಿದ್ದೇ ಕೇವಲ 11 ಕ್ಷೇತ್ರಗಳಲ್ಲಿ. ಈ ಪೈಕಿ 9 ರಲ್ಲಿ ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಸ್ಥಿತಿ ಈಗ ಸಣ್ಣ ಪಕ್ಷವಾದ ಅಪ್ನಾ ದಲ್‌ಗಿಂತಲೂ ಕೆಳಮಟ್ಟಕ್ಕೆ ಕುಸಿದಿದೆ. ಕಾಂಗ್ರೆಸ್‌ಗೆ ಇದೊಂದು ದಯನೀಯ ಸೋಲು, ಚೇತರಿಸಿಕೊಳ್ಳಲಾಗದ ಹೊಡೆತ.
ನೆಹರೂ ಮನೆತನದ ಕುಡಿಗಳನ್ನು ಪ್ರಚಾರಕ್ಕೆ ಬಳಕೆ ಮಾಡಿದರೂ ಪಕ್ಷಕ್ಕೆ ಯಾವುದೇ ರೀತಿಯಿಂದಲೂ ಕಿಂಚಿತ್ತೂ ಲಾಭವಾಗಿಲ್ಲ. ಪ್ರಿಯಾಂಕಾ ಬಂದರೂ ಯಾವ ಜಾದೂ ನಡೆಯಲಿಲ್ಲ . ಒಟ್ಟಾರೆ ಯುಪಿಯಲ್ಲಿ ಪಕ್ಷ ಮೇಲಕ್ಕೆ ಏಳಲಾಗದಂತಹ ದಯನೀಯ ಸ್ಥಿತಿಗೆ ಮುಟ್ಟಿದೆ. ಈಗಾಗಲೇ ಅಧಿಕಾರ ಕಳೆದುಕೊಂಡು 26 ವರ್ಷ ಉರುಳಿದ್ದು, ಮುಂದಿನ ಐದು ವರ್ಷದ ಲೆಕ್ಕ ಸೇರಿಸಿದರೆ 31 ವರ್ಷಗಳಾಗುತ್ತದೆ. ನೆಹರೂ ಮನೆತನದ ಉಗಮವನ್ನು ಕಂಡ ರಾಜ್ಯದಲ್ಲೇ ಈಗ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿದ್ದು, ಮುಂದೆ ಏನೇ ಮಾಡಿದರೂ ಮೇಲಕ್ಕೆ ಬರುವುದಿಲ್ಲವೇನೋ ಎಂಬ ಸಂದೇಶವನ್ನು ಸಾರಿದೆ. ಇದು ಇತರೆ ರಾಜ್ಯಗಳ ಮೇಲೂ ಪರಿಣಾಮ ಬೀರಿ, ದೇಶದಲ್ಲೂ ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಪಾತಾಳಕ್ಕೆ ಕುಸಿಯುವ ಸಾಧ್ಯತೆಯಿದೆ. ಹೀಗಾಗಿ, ಮೋದಿ ಸರ್ಕಾರ ಅವಧಿ ಮುಗಿಸಿ ಚುನಾವಣೆಗೆ ಹೋಗುವ ಮುನ್ನ ಈಗಲೇ ಕಾಂಗ್ರೆಸ್ ನೆಹರೂ ಮನೆತನ ಹೊರತುಪಡಿಸಿದ ಬೇರೆ ನಾಯಕನ ನೆರಳಿನಲ್ಲಿ ಚಿಗುರುವ ಪ್ರಯತ್ನ , ತಂತ್ರ ಬಳಕೆ ಮಾಡಬೇಕಿದೆ. ಆದರೆ ಪಂಜಾಬ್‌ನಲ್ಲಿ 10 ವರ್ಷದ ಬಳಿಕ ಬಿಜೆಪಿ ವಿರುದ್ದ ಸೆಣಸಿ ಅಧಿಕಾರಕ್ಕೆ ಬಂದಿರುವುದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್. ಯುಪಿಯಲ್ಲಿ ಕಳೆದುಹೋದ ಮರ್ಯಾದೆಯನ್ನು ಪಂಜಾಬಿನಲ್ಲಿ ಉಳಿಸಿಕೊಂಡಿರುವುದೇ ದೊಡ್ಡ ಸಮಾಧಾನ. ಗೋವಾ ಮತ್ತು ಮಣಿಪುರದಲ್ಲಿ ಅತಿದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿದ್ದು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ ಎಂಬುದೇ ಕೊಂಚ ಸಮಾಧಾನಕರ ಸಂಗತಿ!
143 ಶಾಸಕರ ವಿರುದ್ಧ ಕೇಸು
ಉತ್ತರಪ್ರದೇಶದಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರ ಪೈಕಿ ಸರಾಸರಿ ನಾಲ್ವರಲ್ಲಿ ಒಬ್ಬರು ಕೊಲೆ, ಅತ್ಯಾಚಾರದಂಥ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜತೆಗೆ, ಪ್ರತಿ 10 ಮಂದಿಯಲ್ಲಿ 8 ಶಾಸಕರು ಕೋಟ್ಯಧಿಪತಿಗಳು ಎಂಬ ಅಂಶ ಬಹಿರಂಗವಾಗಿದೆ. ಯುಪಿ ಎಲೆಕ್ಷನ್ ವಾಚ್ ಮತ್ತು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ(ಎಡಿಆರ್)ಯ ವರದಿಯು ಈ ವಿಚಾರವನ್ನು ತಿಳಿಸಿದೆ. ಉತ್ತರಪ್ರದೇಶದಲ್ಲಿ ಶೇ.36ರಷ್ಟು ಅಂದರೆ ಒಟ್ಟು 143 ಮಂದಿ ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, 2012ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಆಗ ವಿಧಾನಸಭೆಯಲ್ಲಿ 189 ಮಂದಿ (ಶೇ.189) ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದರು.
ನನ್ನ ಸೋಲಿಗೆ ಕೈ ಕಾರಣ
ನವದೆಹಲಿ: ಉತ್ತರಪ್ರದೇಶದಲ್ಲಿ ಅಖೀಲೇಶ್ ಸರ್ಕಾರದಲ್ಲಿ ಸಚಿವರಾಗಿದ್ದ, ಎಸ್ಪಿ ನಾಯಕ ರವಿದಾಸ್ ಮೆಹೊÅàತ್ರಾ ಅವರು ತಮ್ಮ ಸೋಲಿಗೆ ಕಾಂಗ್ರೆಸ್ ಅನ್ನು ಹೊಣೆಯಾಗಿಸಿದ್ದಾರೆ. ಭಾನುವಾರ ಮಾತನಾಡಿದ ಮೆಹೊÅàತ್ರಾ, “ನಾನು ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್‌ನ ಅಭ್ಯರ್ಥಿಯೂ ಅದೇ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಹೀಗಾಗಿ, ಕಾಂಗ್ರೆಸ್‌ನಿಂದಾಗಿಯೇ ನಾನು ಸೋಲುಣ್ಣಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿಯು ತನ್ನ ನಾಮಪತ್ರ ವಾಪಸ್ ಪಡೆದಿದ್ದರೆ, ನಾನೇ ಗೆಲ್ಲುತ್ತಿದ್ದೆ,’ ಎಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಪಾಠಕ್ ಅವರು 5,094 ಮತಗಳ ಅಂತರದಿಂದ ಮೆಹೊÅàತ್ರಾ ಅವರನ್ನು ಸೋಲಿಸಿದ್ದಾರೆ.
ಮೋದಿ ಹೊಗಳಿದ ಚಿದು: ಕೇಂದ್ರದ ನೀತಿಗಳನ್ನು ಟೀಕಿಸು ತ್ತಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಬಳಿಕ ಪ್ರಧಾನಿ ಮೋದಿ ಅವರನ್ನು “ದೇಶದ ಅತ್ಯಂತ ಪ್ರಭಾವಿ ರಾಜಕೀಯ ನಾಯಕ’ ಎಂದು ಹೊಗಳುವ ಮೂಲಕ ಬೆರಗು ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.