ಅಸಭ್ಯ ಪೋಸ್ಟ್‌ಗೆ ಕ್ಷಮೆ ಕೇಳಿದ್ರು
Team Udayavani, Apr 21, 2018, 6:00 AM IST
ಚೆನ್ನೈ: “ಪತ್ರಕರ್ತೆಯಾಗಬೇಕೆಂದರೆ, ತಮಿಳುನಾಡಿನಲ್ಲಿ ಮಹಿಳೆಯರು ಮಾಧ್ಯಮ ಲೋಕದ ಗಣ್ಯ ವ್ಯಕ್ತಿಗಳ ಜತೆ ಮಲಗಲೇ ಬೇಕಾದ ಪರಿಸ್ಥಿತಿಯಿದೆ’ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿ ವಿವಾದಕ್ಕೀಡಾಗಿರುವ ತಮಿಳುನಾಡಿನ ಬಿಜೆಪಿ ನಾಯಕ ಎಸ್.ವಿ. ಶೇಖರ್, ಇದೀಗ, ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಅಲ್ಲದೆ, ಈ ಪೋಸ್ಟ್ ಮೂಲತಃ ತಾವು ಹಾಕಿದ್ದಲ್ಲವೆಂದೂ, ತಮ್ಮ ಸ್ನೇಹಿತ ಹಾಕಿದ್ದ ಪೋಸ್ಟ್ ಅನ್ನು ತಾವು ಹಂಚಿಕೊಂಡಿದ್ದಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಕಳೆದ ವಾರ ತಮಿಳುನಾಡಿನ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಹಿರಿಯ ಪತ್ರಕರ್ತೆ ಲಕ್ಷ್ಮೀ ಸುಬ್ರಮಣ್ಯಂ ಎಂಬುವರ ಕೆನ್ನೆ ಮುಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಉಲ್ಲೇಖೀಸಿ ಫೇಸ್‌ಬುಕ್‌ನಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದ ಶೇಖರ್, “”ರಾಜ್ಯಪಾಲರು ತಮ್ಮ ಕೈಯ್ಯನ್ನು ಫಿನಾಯಿಲ್ ಹಾಕಿ ತೊಳೆದುಕೊಳ್ಳಬೇಕು. ಇಂದು ತಮಿಳುನಾಡಿ ನಲ್ಲಿ ಮಾಧ್ಯಮ ಲೋಕದ ಗಣ್ಯರೊಂದಿಗೆ ಹಾಸಿಗೆಯಲ್ಲಿ ಮಲಗಿದರೆ ಮಾತ್ರ ಮಹಿಳೆಯರಿಗೆ ಪತ್ರಕರ್ತೆ ಕೆಲಸ ಸಿಗುತ್ತದೆ. ಲಕ್ಷ್ಮೀ ಸುಬ್ರಮಣ್ಯಂ ಕೂಡ ಅದರಿಂದ ಹೊರತಾಗಿಲ್ಲ” ಎಂದಿದ್ದರು.
ತೀವ್ರ ಪ್ರತಿಭಟನೆ: ಶೇಖರ್ ಹೇಳಿಕೆ ವಿರುದ್ಧ ಸಿಡಿದೆದ್ದ ತಮಿಳುನಾಡು ಮಾಧ್ಯಮ ಲೋಕ, ಮಂಡೆವೇಲಿಯಲ್ಲಿನ ಅವರ ನಿವಾಸದ ಮುಂದೆ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿತು. ನೂರಾರು ಪತ್ರಕರ್ತರು, ಶೇಖರ್ ವಿರುದ್ಧ ಘೋಷಣೆಗಳನ್ನು ಕೂಗಿ, ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಈ ವೇಳೆ, 30 ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.