Speaker ನಿಲುವು ಖಂಡಿಸಿ 2 ಬಣಗಳಿಂದ ಮೇಲ್ಮನವಿ :ಉದ್ಧವ್ ಸುಪ್ರೀಂಗೆ ಶಿಂಧೆ ಹೈಕೋರ್ಟ್‌ಗೆ!
Team Udayavani, Jan 16, 2024, 12:18 AM IST
ಹೊಸದಿಲ್ಲಿ: ಸದ್ಯಕ್ಕಂತೂ ಮಹಾರಾಷ್ಟ್ರದ ಶಿವಸೇನೆಯ ಎರಡು ಬಣಗಳ ಕಾನೂನು ಸಮರ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಸೋಮವಾರ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ, ಏಕನಾಥ ಶಿಂಧೆ ಬಣ ಹೈಕೋರ್ಟ್ ಮೆಟ್ಟಿಲೇರಿದೆ.
ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯೇ “ನೈಜ ಶಿವಸೇನೆ’ ಎಂದು ಹೇಳಿ, ಆ ಬಣದ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಅರ್ಜಿಯನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಆದೇಶ ಪ್ರಶ್ನಿಸಿ ಸೋಮವಾರ ಉದ್ಧವ್ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಜ.10ರಂದು ಸ್ಪೀಕರ್ ನಾರ್ವೇಕರ್ ಅವರು ಶಿಂಧೆ ಬಣದ ಪರ ತೀರ್ಪು ನೀಡಿದ್ದರು. ಇದರಿಂದ ಉದ್ಧವ್ ಬಣ ತೀವ್ರ ಮುಖಭಂಗ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಉದ್ಧವ್ ಬಣವು ದೀರ್ಘ ಕಾನೂನು ಹೋರಾಟಕ್ಕೆ ಸಜ್ಜಾಗಿ, ಈಗ ಸುಪ್ರೀಂಕೋರ್ಟ್‌ನ ಕದ ತಟ್ಟಿದೆ.
ಅತ್ತ, ಅವರು ಸುಪ್ರೀಂಗೆ ಅರ್ಜಿ ಸಲ್ಲಿಸುತ್ತಿದ್ದಂತೆಯೇ, ಇತ್ತ ಸಿಎಂ ಶಿಂಧೆ ಬಣವು ಮಹಾರಾಷ್ಟ್ರ ಹೈಕೋರ್ಟ್ ಮೆಟ್ಟಿಲೇರಿದೆ. ಉದ್ಧವ್ ಬಣದ 14 ಶಾಸಕರನ್ನು ಅನರ್ಹಗೊಳಿಸದೇ ಇರುವ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ.
ಮಾತೋಶ್ರೀಗೆ ಬಿಗಿ ಭದ್ರತೆ
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸದ ಬಳಿ ವಿಧ್ವಂಸಕ ಕೃತ್ಯ ನಡೆಯಲಿದೆ ಎಂಬ ಬಗ್ಗೆ ಮುನ್ನೆಚ್ಚರಿಕೆಯ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಾತೋಶ್ರೀಗೆ ಭದ್ರತೆ ಹೆಚ್ಚಿಸಿ¨ªಾರೆ.ಮಹಾ ರಾಷ್ಟ್ರ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ರವಿವಾರ ಸಂಜೆ ದೂರವಾಣಿ ಕರೆ ಬಂದಿದ್ದು, ಮುಂಬಯಿ- ಗುಜರಾತ್ ರೈಲಿನಲ್ಲಿ ಪ್ರಯಾಣಿಸುತ್ತಿ¨ªಾಗ ಜನರ ಗುಂಪು ಉರ್ದುವಿನಲ್ಲಿ ವಿಧ್ವಂಸಕ ಯೋಜನೆಗಳ ಬಗ್ಗೆ ಚರ್ಚಿ ಸುತ್ತಿದ್ದರು ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿ ಕೊಂಡಿ¨ªಾನೆ. ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಾತೋಶ್ರೀಗೆ ಭದ್ರತೆ ಹೆಚ್ಚಿಸಿ¨ªಾರೆ ಹಾಗೂ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.