ಮರಾಠರಿಗೆ ಶೇ.16 ಮೀಸಲಾತಿಗೆ ಅಂಗೀಕಾರ
Team Udayavani, Nov 30, 2018, 11:36 AM IST
ಮುಂಬಯಿ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮರಾಠರಿಗೆ ಶೇ. 16ರಷ್ಟು ಮೀಸಲಾತಿ ದಗಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಗುರುವಾರ ಅನುಮೋದಿಸಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗದಲ್ಲಿ ಇನ್ನು ಮರಾಠರಿಗೆ ಮೀಸಲಾತಿ ಸಿಗಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿ ಆಧಾರದಲ್ಲಿ ಮಸೂದೆ ರೂಪಿಸಲಾಗಿದೆ. ಮರಾಠರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಇವರಿಗೆ ಸರಕಾರದ ನೆರವು ಅಗತ್ಯವಿದೆ ಎಂದು ಮಸೂದೆ ಮಂಡಿಸಿದ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಸೂದೆ ಅವಿರೋಧವಾಗಿ ಅನುಮೋದನೆಗೊಂಡಿದೆ.
ರಾಜ್ಯದಲ್ಲಿ ಶೇ. 30ರಷ್ಟು ಮರಾಠರಿದ್ದಾರೆ. ರಾಜಕೀಯ ವಲಯದಲ್ಲಿ ಪ್ರಭಾವ ಹೊಂದಿರುವ ಮರಾಠರು ಕಳೆದ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಆಗಲೇ ಮೀಸಲಾತಿ ಘೋಷಿಸುವುದಾಗಿ ಫಡ್ನವೀಸ್ ಘೋಷಿಸಿದ್ದರು.
1 ಲಕ್ಷಕ್ಕಿಂತ ಕಡಿಮೆ ಆದಾಯ: ಮಹಾ ರಾಷ್ಟ್ರದಲ್ಲಿ ಶೇ. 37.28 ರಷ್ಟು ಮರಾಠರು ಬಡತನ ರೇಖೆಗಿಂತ ಕೆಳಗಿದ್ದು, ಶೇ.93ಕ್ಕೂ ಹೆಚ್ಚು ಕುಟುಂಬಗಳ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಹೇಳಿದೆ. ಇನ್ನೊಂದೆಡೆ ಶೇ.76.86ರಷ್ಟು ಕುಟುಂಬಗಳು ಕೃಷಿ ಮತ್ತು ಕೃಷಿಕೂಲಿಯನ್ನೇ ಆದಾಯವನ್ನಾಗಿಸಿಕೊಂಡಿವೆ. ಸದ್ಯ ಸರಕಾರಿ ಹಾಗೂ ಅರೆ ಸರ್ಕಾರಿ ಸೇವೆಗಳಲ್ಲಿ ಶೇ. 6 ರಷ್ಟು ಮರಾಠರಿದ್ದು, ಡಿ ವರ್ಗದ ನೌಕರರೇ ಹೆಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.