Arabian Sea; ಹಡಗುಗಳ ಮೇಲಿನ ದಾಳಿ ತಡೆಗೆ ಸಜ್ಜಾಯಿತು ನೌಕಾಪಡೆ
ವ್ಯಾಪಾರಿ ನೌಕೆಗಳಿಗೆ ಹೆಚ್ಚಿದ ಭದ್ರತೆ
Team Udayavani, Jan 1, 2024, 2:15 AM IST
ಹೊಸದಿಲ್ಲಿ: ಅರಬಿ ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ಹೌತಿ ಬಂಡುಕೋರರಿಂದ ನಿರಂತರ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇಂಥ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆ ಕಾರ್ಯತತ್ಪರವಾಗಿದೆ.
ರವಿವಾರದಿಂದ ಸಮುದ್ರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಶತ್ರುಗಳನ್ನು ನಾಶ ಮಾಡುವ ನಾಲ್ಕು ಹಡಗುಗಳು, ಒಂದು ಸಣ್ಣ ಯುದ್ಧ ಹಡಗು, ಪಿ-81 ಹೆಸರಿನ ದೂರವ್ಯಾಪ್ತಿಯ ಸಂಚಾರಿ ಯುದ್ಧವಿಮಾನವನ್ನು ನಿಯೋಜಿಸಲಾಗಿದೆ. ಇವು ಅರಬಿ ಸಮುದ್ರ, ಏಡೆನ್ ಕೊಲ್ಲಿಯಲ್ಲಿ ಭದ್ರತಾ ದೃಷ್ಟಿಯಿಂದ ಕಾರ್ಯಾಚರಣೆ ಮಾಡಲಿವೆ. ಜತೆಗೆ ಈ ಭಾಗದಲ್ಲಿ ಹದ್ದಿನ ಕಣ್ಣಿಡಲು ಒಂದು ಬೇಟೆ ಡ್ರೋನ್ ಅನ್ನೂ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಮಾಮೂಲಿ ಉಪಯೋಗಕ್ಕೆ ಬಳಸುವ ವಿಮಾನ, ಹೆಲಿಕಾಪ್ಟರ್‌ಗಳನ್ನೂ ನೀಡಲಾಗಿದೆ. ಈ ಎಲ್ಲ ಸೇರ್ಪಡೆಗಳ ಮೂಲಕ ವ್ಯಾಪಾರಿ ಉದ್ದೇಶದ ಹಡಗುಗಳ ಸುಗಮ ಸಂಚಾರಕ್ಕೆ ನೆರವಾಗುವುದು ಉದ್ದೇಶವಾಗಿದೆ.
ಯಾಕೆ ಈ ಭದ್ರತೆ?
ಉತ್ತರ ಮತ್ತು ಕೇಂದ್ರ ಅರಬಿ ಸಮುದ್ರದದಲ್ಲಿ ಕೆಲವು ದಿನಗಳ ಹಿಂದೆ ಸತತವಾಗಿ ವ್ಯಾಪಾರಿ ಉದ್ದೇಶಕ್ಕಾಗಿ ಬಳಸುವ ಹಡಗುಗಳ ಮೇಲೆ ದಾಳಿಯಾಗುತ್ತಿವೆ. ಮಾಲ್ಟಿàಸ್‌ನ ಎಂವಿ ರೂಯೆನ್, ಲೈಬೀರಿಯದ ಎಂವಿ ಚೆಮ್ ಪುÉಟೊ ಹಡಗುಗಳ ಮೇಲೆ ದಾಳಿಯಾಗಿತ್ತು. ಚೆಮ್ ಪ್ಲುಟೊ ಹಡಗಿನ ಮೇಲೆ ಡ್ರೋನ್ ಮೂಲಕ ದಾಳಿ ನಡೆದಿತ್ತು. ಪರಿಣಾಮ ಅದು 2 ದಿನ ತಡವಾಗಿ ಡಿ.26ಕ್ಕೆ ಮುಂಬಯಿ ಬಂದರಿಗೆ ಬಂದಿತ್ತು.
ಬಂಡುಕೋರರ ಕ್ಷಿಪಣಿ ಹೊಡೆದು ಉರುಳಿಸಿದ ಅಮೆರಿಕ
ಕೆಂಪು ಸಮುದ್ರದಲ್ಲಿ ಸರಕು ಹಡಗೊಂದರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಬಂಡುಕೋರರು ಉಡಾಯಿಸಿದ್ದ 2 ಛೇದಕ ಕ್ಷಿಪಣಿಗಳನ್ನು ಅಮೆರಿಕದ ಪಡೆಗಳು ರವಿವಾರ ಹೊಡೆದುರುಳಿಸಿವೆ. ಇದಾದ ಬೆನ್ನಲ್ಲೇ, ಉಗ್ರರು ನಾಲ್ಕು ದೋಣಿಗಳಲ್ಲಿ ಬಂದು ಇದೇ ಹಡಗಿನ ಮೇಲೆ ಮತ್ತೂಮ್ಮೆ ದಾಳಿಗೆ ಯತ್ನಿಸಿದ್ದು, ಅಮೆರಿಕ ಪಡೆ ಪ್ರತಿದಾಳಿ ನಡೆಸಿ ಹಲವು ಉಗ್ರರನ್ನು ಹತ್ಯೆಗೈದಿದೆ. ಈ ವೇಳೆ, 4ರ ಪೈಕಿ 3 ದೋಣಿಗಳು ಮುಳುಗಿವೆ ಎಂದು ಅಮೆರಿಕ ಹೇಳಿದೆ. ಘಟನೆ ಹಿನ್ನೆಲೆಯಲ್ಲಿ ಸಿಂಗಾಪುರ ಮೂಲದ ಮಾರೆಸ್ಕ್ ಹ್ಯಾಂಗ್‌ಝೌ ಹಡಗಿನ ಸಂಚಾರವನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸುವುದಾಗಿ ಕಂಪೆನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.