ಐಪಿಎಲ್ ಬೆಟ್ಟಿಂಗ್ : ನಟ ಅರ್ಬಾಜ್ ಖಾನ್‌ಗೆ ಪೊಲೀಸ್ ಸಮನ್ಸ್
Team Udayavani, Jun 1, 2018, 5:23 PM IST
ಮುಂಬಯಿ : ಬಾಲಿವುಡ್ ಚಿತ್ರ ನಿರ್ಮಾಪಕ ಮತ್ತು ನಟ ಅರ್ಬಾಜ್ ಖಾನ್ ಗೆ ಥಾಣೆ ಪೊಲೀಸರು ಐಪಿಎಲ್ ಬೆಟ್ಟಿಂಗ್ ತನಿಖೆಗೆ ಸಂಬಂಧಿಸಿ ಸಮನ್ಸ್ ನೀಡಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿ ಪೊಲೀಸರು ಕುಖ್ಯಾತ ಬುಕ್ಕಿ ಸೋನು ಜಲಾನ್ ಎಂಬಾತನನ್ನು ಬಂಧಿಸಿದ್ದರು. ಆತನನ್ನು ತನಿಖೆಗೆ ಗುರಿಪಡಿಸಿದಾಗ ಆತ ಅರ್ಬಾಜ್ ಖಾನ್ ಹೆಸರನ್ನು ಉಚ್ಚರಿಸಿದ. ಆ ಪ್ರಕಾರ ಪೊಲೀಸರು ನಾಳೆ ಶನಿವಾರ ಅರ್ಬಾಜ್ ಖಾನ್ ಗೆ ಠಾಣೆ ಬಂದು ತನಿಖೆಯನ್ನು ಎದುರಿಸುವಂತೆ ಸಮನ್ಸ್ ಜಾರಿ ಮಾಡಿದರು.
ಮೂಲಗಳಿಂದ ತಿಳಿದು ಬಂದ ಪ್ರಕಾರ ಜಲಾನ್ ಕೈಯಲ್ಲಿ ಅರ್ಬಾಜ್ ಖಾನ್ ಕುರಿತ ಒಂದು ಬೆಟ್ಟಿಂಗ್ ವಿಡಿಯೋ ಇದೆ; ಅದನ್ನು ಬಳಸಿಕೊಂಡು ಆತ ಅರ್ಬಾಜ್‌ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ಆದರೆ ಆ ವಿಡಿಯೋ ವಿವರಗಳು ಸಿಕ್ಕಿಲ್ಲ ಎನ್ನಲಾಗಿದೆ.
ಜಲಾನ್ ಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೂ ನಂಟಿರುವ ಕಾರಣಕ್ಕೆ ಆತನ ಬಂಧನವಾಗಿರುವುದು ಪೊಲೀಸರಿಗೆ ದೊರಕಿರುವ ಮಹತ್ತರ ಗೆಲುವೆಂದು ತಿಳಿಯಲಾಗಿದೆ.
ಜಲಾನ್ ಗೆ ಮುಂಬಯಿಯಲ್ಲಿ ಮೂರು ಫ್ಲಾಟುಗಳಿದ್ದು ಅವುಗಳಿಂದ ಆತನಿಗೆ ನಿರಂತರ ಆದಾಯವಿದೆ. ಆತನ ಬಳಿ ಇರುವ ಐಷಾರಾಮಿ ವಾಹನಗಳ ಪಟ್ಟಿ ಸಾಕಷ್ಟು ದೊಡ್ಡದೇ ಇದೆ.
ಜಲಾನ್‌ನ ನಿವಾಸಗಳ ಮೇಲಿನ ದಾಳಿಯಲ್ಲಿ ಪೊಲೀಸರಿಗೆ ಸಿಕ್ಕಿರುವ ಡೈರಿಯೊಂದರಲ್ಲಿ ಆತನಿಗೆ 2018ರ ಐಪಿಎಲ್ ಋತುವಿನ ಬೆಟ್ಟಿಂಗ್‌ನಿಂದಲೇ 500 ಕೋಟಿ ರೂ. ಹಣ ಬಂದಿರುವುದು ಬಹಿರಂಗವಾಗಿದೆ. ಇದರಲ್ಲಿ 10 ಕೋಟಿ ರೂ. ಚೆನ್ನೈ ಮತ್ತು ಹೈದರಾಬಾದ್ ನಡುವಿನ ಐಪಿಎಲ್ ಫೈನಲ್ ಪಂದ್ಯದ ಬೆಟ್ಟಿಂಗ್‌ನಿಂದಲೇ ಬಂದಿದೆ ಎಂದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Devotee: ಟೆಂಪಲ್ ರನ್ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್
Jai Hanuman: ರಿಷಬ್ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು
Threat: ಹೆಬ್ಬಾಳ್ಕರ್ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ
Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Naxal Surrender: ‘ಶರಣಾಗುವಾಗ ಬಂದೂಕು ಹಿಡಿದುಕೊಂಡು ಬರುತ್ತಾರಾ?’: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.