ಪಾಟ್ನಾ: 2000 ವರ್ಷಗಳಷ್ಟು ಹಳೇಯ ಕುಶಾನರ ಕಾಲದ ಇಟ್ಟಿಗೆ ಗೋಡೆಗಳ ಅವಶೇಷ ಪತ್ತೆ
Team Udayavani, Jun 4, 2022, 3:34 PM IST
ಪಾಟ್ನಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬಿಹಾರದ ಪಾಟ್ನಾದ ಕುಮ್ರಹಾರ್ ಪ್ರದೇಶದಲ್ಲಿ ಕೊಳದ ಪುನರುಜ್ಜೀವನದ ಕಾಮಗಾರಿಯ ಸ್ಥಳದಲ್ಲಿ ಕನಿಷ್ಠ 2,000 ವರ್ಷಗಳಷ್ಟು ಹಳೆಯದಾದ ಇಟ್ಟಿಗೆ ಗೋಡೆಗಳ ಅವಶೇಷಗಳನ್ನು ಪತ್ತೆ ಮಾಡಿದೆ.
ಪಾಟ್ನಾ ರೈಲ್ವೆ ನಿಲ್ದಾಣದ ಪೂರ್ವಕ್ಕೆ ಆರು ಕಿಮೀ ದೂರದಲ್ಲಿರುವ ಕುಮ್ರಹಾರ್ ನಲ್ಲಿ ಗುರುವಾರ ಅಗೆಯುವ ಕಾರ್ಯವನ್ನು ನಡೆಸುತ್ತಿದ್ದಾಗ ಅಧಿಕಾರಿಗಳು ಗೋಡೆಗಳ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ ಎಂದು ಎಎಸ್‌ಐ-ಪಾಟ್ನಾ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಗೌತಮಿ ಭಟ್ಟಾಚಾರ್ಯ ಹೇಳಿದರು. ಇಲ್ಲಿ ಮೌರ್ಯ ಸಾಮ್ರಾಜ್ಯದ ಅವಶೇಷಗಳು ಹಿಂದೆ ಕಂಡುಬಂದಿತ್ತು.
“ಕೇಂದ್ರದ ‘ಮಿಷನ್ ಅಮೃತ್ ಸರೋವರ’ ಉಪಕ್ರಮದ ಭಾಗವಾಗಿ ಎಎಸ್ಐ ರಕ್ಷಿತ ಕೊಳವನ್ನು ಪುನರುಜ್ಜೀವನಗೊಳಿಸುತ್ತಿದೆ. ಕೊಳದ ಒಳಗಿನ ಇಟ್ಟಿಗೆ ಗೋಡೆಗಳು ಗಮನಾರ್ಹವಾದ ಸಂಶೋಧನೆಯಾಗಿದೆ. ಎಎಸ್ಐ ತಜ್ಞರ ತಂಡವು ಗೋಡೆಗಳ ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯನ್ನು ವಿಶ್ಲೇಷಿಸುತ್ತಿದೆ” ಎಂದು ಗೌತಮಿ ಭಟ್ಟಾಚಾರ್ಯ ಹೇಳಿದರು.
ಇದನ್ನೂ ಓದಿ:ರಿಷಭ್ ಬ್ಯಾಕ್ ಟು ಬ್ಯಾಕ್ ಸಿನಿಮಾ: ‘ಕಾಂತಾರ’ದ ನಿಗೂಢತೆ ಅರಿಯಲು ದಿನಾಂಕ ಫಿಕ್ಸ್
ಈ ಇಟ್ಟಿಗೆಗಳು ಉತ್ತರ ಭಾರತದ ಬಹುಪಾಲು, ಇಂದಿನ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ಭಾಗಗಳಲ್ಲಿ ಸುಮಾರು ಕ್ರಿ.ಶ 30 ರಿಂದ ಸುಮಾರು 375 ರವರೆಗೆ ಆಳಿದ ಕುಶಾನ್ ಯುಗಕ್ಕೆ ಸೇರಿದವು ಎಂದು ತೋರುತ್ತದೆ, ಆದರೆ ವಿವರವಾದ ವಿಶ್ಲೇಷಣೆಯ ನಂತರವೇ ಯಾವುದೇ ತೀರ್ಮಾನಕ್ಕೆ ಬರಬಹುದು ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
Ambedkar; ಅವಮಾನ ಖಂಡಿಸಿ ಕಾಂಗ್ರೆಸ್ ಆಂದೋಲನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.