ಯುದ್ಧದಿಂದ ಮುಂದಿನ ವರ್ಷ ವಾಹನಗಳ ದರ ದುಬಾರಿ?
Team Udayavani, Apr 5, 2022, 8:15 AM IST
ಡೆಟ್ರಾಯ್: ಮುಂದಿನ ವರ್ಷ ವಾಹನಗಳ ದರದಲ್ಲಿ ಗಣನೀಯ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.
ಆಟೋ ತಯಾರಿಕೆಯಲ್ಲಿ ಅತ್ಯಂತ ಮಹ ತ್ವದ ಪಾತ್ರ ವಹಿಸುವ, ಉಕ್ರೇನ್ನಲ್ಲಿ ತಯಾರಾಗುವ ಎಲೆಕ್ಟ್ರಿಕಲ್ ವೈರಿಂಗ್ ದಿಢೀರನೆ ಕೈಗೆಟುಕದ ಸ್ಥಿತಿ ನಿರ್ಮಾಣವಾಗಿದೆ. ಇವು ಗಳ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದ್ದರೂ, ಯುದ್ಧದಿಂದಾಗಿ ಎಲೆಕ್ಟ್ರಿಕಲ್ ವೈರಿಂಗ್ನ ಪರಿಕರಗಳು ಸಿಗುತ್ತಿಲ್ಲ.
ಪರಿಣಾಮವೆಂಬಂತೆ, ಜರ್ಮನಿಯಲ್ಲಿರುವ ಬಿಎಂಡಬ್ಲ್ಯೂ ಕಾರು ಕಂಪೆನಿಯ ಶಾಖೆ, ತನ್ನ ಕಾರುಗಳ ತಯಾರಿಕೆಯನ್ನೇ ಸ್ಥಗಿತಗೊಳಿಸಿದೆ.
ಮರ್ಸಿಡಿಸ್ ಕೂಡ ತನ್ನ ಕಾರು ಜೋಡಣಾ ಸ್ಥಾವರ ಗಳಲ್ಲಿ ಕೆಲಸವನ್ನು ನಿಧಾನಗತಿಗೆ ಇಳಿಸಿದ್ದು, ಫೋಕ್ಸ್ವ್ಯಾಗನ್ ಕೂಡ ಸ್ಥಗಿತಗೊಳ್ಳುವ ಸೂಚನೆ ನೀಡಿದೆ.
ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ
ಇದರ ಬಿಸಿ ಅಮೆರಿಕಕ್ಕೂ ತಟ್ಟಿದೆ. ವಿದ್ಯುತ್ಚಾಲಿತ ವಾಹನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ನಿಕ್ಕಲ್ವರೆಗೆ ಹಲವು ಲೋಹಗಳ ರಫ್ತನ್ನು ರಷ್ಯಾ ಸ್ಥಗಿತಗೊಳಿಸಿದೆ.
ಹೀಗಾಗಿ, ಅಮೆರಿಕದ ಆಟೋ ವಲಯವು ಭಾರೀ ಸಮಸ್ಯೆಗೆ ಸಿಲುಕಲಿದೆ. ವಾಹನಗಳ ತಯಾರಿಕೆ ಪ್ರಮಾಣ ಕುಗ್ಗುವುದಲ್ಲದೇ, ಅವುಗಳ ದರವೂ ಏರಿಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.