ಆಹಾರ ಪೊಟ್ಟಣದಲ್ಲಿ ಸತ್ತ ಹಲ್ಲಿ ಇದ್ದರೆ ಸ್ವೀಕರಿಸುತ್ತೀರಾ?
Team Udayavani, Nov 11, 2018, 6:00 AM IST
ಚೆನ್ನೈನ: ಸೆನ್ಸಾರ್ ಮಂಡಳಿಯೊಂದರಿಂದ ಪ್ರಮಾಣ ಪತ್ರ ಪಡೆದ ಯಾವುದೇ ಚಿತ್ರದಲ್ಲಿನ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಕೋರುವುದು ಅಥವಾ ಆ ಚಿತ್ರದ ನಿಷೇಧಕ್ಕಾಗಿ ಆಗ್ರಹಿಸುವುದು ಆಕ್ಷೇಪಾರ್ಹ ಎಂದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೇಳಿಕೆಯನ್ನು ಎಐಎಡಿಎಂಕೆ ತೀವ್ರವಾಗಿ ಟೀಕಿಸಿದೆ. ಜತೆಗೆ, ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೂ ಚಿತ್ರ ದಲ್ಲಿನ ಕೆಲವು ಅಂಶಗಳು ಹಿತಕರ ವಾಗಿಲ್ಲದಿದ್ದಲ್ಲಿ ಅಂಥ ದೃಶ್ಯಗಳನ್ನು ಕತ್ತರಿಸುವಂತೆ ಆಗ್ರಹಿಸಲು ಕಾನೂ ನಿನಲ್ಲಿ ಅವಕಾಶವಿದೆ ಎಂದು ಪಕ್ಷ ಹೇಳಿದೆ.
ಚಿತ್ರ ನಟ ವಿಜಯ್ ಅಭಿನಯದ “ಸರ್ಕಾರ್’ ಚಿತ್ರದಲ್ಲಿ ಪಕ್ಷದ ನಾಯಕಿ ಜಯಲಲಿತಾ ಅವರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ಸಿಡಿದೆದ್ದಿದ್ದ ಎಐಎಡಿಎಂಕೆ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಆಗ್ರಹಿಸಿತ್ತು. ಅದಕ್ಕೆ ರಜನಿಕಾಂತ್ ವಿರೋಧಿಸಿದ್ದರು.
ಇದಕ್ಕೆ ತಮ್ಮ ಪಕ್ಷದ ಮುಖ ವಾಣಿಯಾದ “ನಮತು ಪುರುಚ್ಚಿ ತಲೈವಿ ಅಮ್ಮಾ’ನಲ್ಲಿ ಕಾನೂನಿನ ಸ್ಪಷ್ಟನೆ ನೀಡುವುದರ ಜತೆಗೆ, “”ನಿಮ್ಮ ಮನೆಗೆ ತರಿಸಲಾದ ಸಂಸ್ಕರಿತ ಆಹಾರ ಪೊಟ್ಟಣದಲ್ಲಿ ಸತ್ತ ಹಲ್ಲಿ ಯೊಂದು ಇದ್ದರೆ ನೀವೇನು ಮಾಡು ತ್ತೀರಿ? ಪ್ಯಾಕೆಟ್ಟಿನ ಮೇಲೆ ಗುಣಮ ಟ್ಟದ ಖಾತ್ರಿಯ ಬಗ್ಗೆ ಪ್ರಮಾಣೀ ಕರಿಸಲಾಗಿದ್ದನ್ನೇ ನಂಬಿ ಆಹಾರವನ್ನು ತಿನ್ನುತ್ತೀರೋ ಅಥವಾ ಎಸೆಯುತ್ತೀ ರೋ?” ಎಂದು ಟಾಂಗ್ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.