ಹೋರಾಟದ ಹುದ್ದೆಗಳಿಗೆ ಮಹಿಳೆಯರಿನ್ನೂ ಸಿದ್ಧರಿಲ್ಲ
Team Udayavani, Dec 16, 2018, 6:00 AM IST
ಹೊಸದಿಲ್ಲಿ: ಸೇನೆಯಲ್ಲಿ ಹೋರಾಟದ ಹುದ್ದೆಗಳಿಗೆ ಮಹಿಳೆಯರು ಸಿದ್ಧವಿಲ್ಲ. ಮಹಿಳೆಯರಿಗೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಇರುತ್ತದೆ. ಹೋರಾಟದ ವೇಳೆ ತಾಯ್ತನ ರಜೆ ನೀಡದಿದ್ದರೆ ಕೋಲಾಹಲವೇ ಉಂಟಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್ ಸಂದರ್ಶನ ವೊಂದರಲ್ಲಿ ಹೇಳಿದ್ದಾರೆ.
ಹೋರಾಟ ನಡೆಸುವ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಲು ನಾನು ಸಿದ್ಧವಾಗಿದ್ದೇನೆ. ಆದರೆ, ಬಹುತೇಕ ನಮ್ಮಲ್ಲಿನ ಯೋಧರು ಗ್ರಾಮೀಣ ಪ್ರದೇಶದವರಾಗಿದ್ದು, ಮಹಿಳಾ ಅಧಿಕಾರಿಯು ತಂಡದ ನೇತೃತ್ವ ವಹಿಸುವುದನ್ನು ಒಪ್ಪಿಕೊಳ್ಳಲಾರರು. ಅಷ್ಟೇ ಅಲ್ಲ, ಹೋರಾಟ ನಡೆಯುತ್ತಿರುವಾಗ ಒಂದು ತಂಡದ ಮುಖ್ಯಸ್ಥೆ, ಆ ತಂಡಕ್ಕೆ ಕಮಾಂಡ್ ನೀಡುತ್ತಿರಬೇಕಾಗುತ್ತದೆ. ಆಗ ಆರು ತಿಂಗಳು ತಾಯ್ತನ ರಜೆ ಕೇಳಿದರೆ ನಾವು ಕೊಡಲಾಗದು. ಕೊಡದಿದ್ದರೆ ಕೋಲಾಹಲವೇ ಉಂಟಾಗುತ್ತದೆ ಎಂದು ರಾವತ್ ಹೇಳಿದ್ದಾರೆ.
ಅಷ್ಟೇ ಅಲ್ಲ, ಹೋರಾಟ ನಡೆಸುತ್ತಿರುವಾಗ ಮಹಿಳಾ ಯೋಧರು ಸಾಯಲೂಬಹುದು. ಹಾಗಾದರೆ ಅವರ ಮಕ್ಕಳ ಕಥೆಯೇನು ಎಂದೂ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಸಾಂಸ್ಕೃತಿಕ ಸಮಸ್ಯೆಯೂ ಇಲ್ಲಿ ಉಂಟಾಗುತ್ತದೆ. ಪುರುಷರ ಮಧ್ಯೆ ಮಹಿಳಾ ಯೋಧರಿದ್ದಾಗ ಹಠಾತ್ ಬಟ್ಟೆ ಬದಲಾವಣೆ ಮಾಡುವಂಥ ಸನ್ನಿವೇಶ ಉಂಟಾಗುತ್ತದೆ. ಮಹಿಳಾ ಯೋಧರ ಎದುರೇ ಪುರುಷ ಯೋಧರು ಮೂತ್ರ ವಿಸರ್ಜನೆ ಮಾಡುವಂಥ ಸನ್ನಿವೇಶ ಎದುರಾದರೆ, ಅದಕ್ಕೆ ಮಹಿಳೆಯರು ಆಕ್ಷೇಪ ಎತ್ತುತ್ತಾರೆ. ಪಾಶ್ಚಾತ್ಯ ಸಂಸ್ಕೃತಿಗೆ ನಾವು ಇನ್ನೂ ಒಗ್ಗಿಕೊಂಡಿಲ್ಲ. ಇದಕ್ಕೆ ಒಗ್ಗಿಕೊಳ್ಳಲು ನಮ್ಮ ಯೋಧರಿಗೆ ಸಮಯ ತೆಗೆದುಕೊಳ್ಳುತ್ತದೆ ಎಂದೂ ಬಿಪಿನ್ ರಾವತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.