ಸೇನಾ ಜವಾನ ಅಪಹರಣ ಸುಳ್ಳು; ಆತ ಸುರಕ್ಷಿತ: ರಕ್ಷಣಾ ಸಚಿವಾಲಯ
Team Udayavani, Mar 9, 2019, 5:17 AM IST
ಹೊಸದಿಲ್ಲಿ : ಜಮ್ಮು ಕಾಶ್ಮೀರದ ಬಡಗಾಂವ್ ನಲ್ಲಿ ಭಯೋತ್ಪಾದಕರು ಸೇನಾ ಜವಾನನೋರ್ವನನ್ನು ಅಪಹರಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ರಕ್ಷಣಾ ಸಚಿವಾಲಯ ಸುಳ್ಳೆಂದು ಹೇಳಿ ಸಷ್ಟನೆ ನೀಡಿದ್ದು, ಆ ಯೋಧನು ಸುರಕ್ಷಿತನಿದ್ದಾನೆ ಎಂದು ಸ್ಪಷ್ಟ ಪಡಿಸಿದೆ.
‘ಭಯೋತ್ಪಾದಕರು ಯೋಧನನ್ನು ಅಪಹರಿಸಿಲ್ಲ; ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ’ ಎಂದು ರಕ್ಷಣಾ ಸಚಿವಾಲಯ ಸುಳ್ಳು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯೆ ನೀಡಿದೆ.
ಸೇನಾ ಜವಾನ ಮೊಹಮ್ಮದ್ ಯಾಸೀನ್ ಎಂಬವರನ್ನು ಉಗ್ರರು ಜಮ್ಮು ಕಾಶ್ಮೀರದ ಬಡಗಾಂವ್‌ನ ಛದೂರಾ ಪ್ರದೇಶದ ಕಾಜಿಪೋರದಲ್ಲಿ ಅಪಹರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಸ್ಪಷ್ಟನೆಯಾಗಿ ರಕ್ಷಣಾ ಸಚಿವಾಲಯ, ಯೋಧ ಮೊಹಮ್ಮದ್ ಯಾಸೀನ್ ಅಪಹೃತರಾಗಿಲ್ಲ; ಅವರು ಸುರಕ್ಷಿತರಿದ್ದಾರೆ ಎಂದು ಹೇಳಿತಲ್ಲದೆ ಈ ರೀತಿಯ ಯಾವುದೇ ಸುಳ್ಳು ವದಂತಿಗಳು ಮತ್ತು ಊಹಾಪೋಹಗಳನ್ನು ನಂಬಬೇಡಿ ಎಂದು ಕೇಳಿಕೊಂಡಿದೆ.
ಮೊಹಮ್ಮದ್ ಯಾಸೀನ್ ಅವರು ಜಮ್ಮು ಕಾಶ್ಮೀರದ ಲೈಟ್ ಇನ್‌ಫ್ಯಾಂಟ್ರಿ (ಜೆಎಕೆಎಲ್‌ಐ) ಘಟಕಕ್ಕೆ ಸೇರಿದವರು. ಜೆಎಕೆಎಲ್‌ಐ ಭಾರತೀಯ ಸೇನಾ ಪಡೆಯ ಇನ್‌ಫ್ರಾಂಟ್ರಿ ರೆಜಿಮೆಂಟ್ ಆಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.