ಸೇನೆಯ ಹೊಸ ಹಿಟ್ ಲಿಸ್ಟ್ನಲ್ಲಿ 7ಹಿಜ್ಬುಲ್, 6 ಎಲ್ಇಟಿ ಉಗ್ರರು
Team Udayavani, Sep 1, 2018, 3:42 PM IST
ಜಮ್ಮು : ಈ ಹಿಂದೆ ಆಪರೇಶನ್ ಆಲೌಟ್ ಕಾರ್ಯಾಚರಣೆಯಲ್ಲಿ ಅನೇಕ ಪ್ರಮುಖ ಭಯೋತ್ಪಾದಕರನ್ನು ಕೊಂದು ಮುಗಿಸಿದ್ದ ಭಾರತೀಯ ಸೇನೆ ಇದೀಗ ಆಪರೇಶನ್ ಆಲೌಟ್-2 ಸ್ಕೆಚ್ ಹಾಕಿದೆ.
ಇದರ ಪ್ರಕಾರ ಸಿದ್ಧಪಡಿಸಲಾಗಿರುವ ಹೊಸ ಹಿಟ್ ಲಿಸ್ಟ್ನಲ್ಲಿ ಜಮ್ಮು ಕಾಶ್ಮೀರದಲ್ಲಿ ಏಳು ಹಿಜ್ಬುಲ್ ಮುಜಾಹಿದೀನ್, ಆರು ಲಷ್ಕರ್ ಎ ತಯ್ಯಬ ಉಗ್ರರು ಸೇನೆಯ ಟಾಪ್ ಟಾರ್ಗೆಟ್ ಆಗಿದ್ದಾರೆ.
ಆಪರೇಶನ್ ಆಲೌಟ್ 2 ಬಗ್ಗೆ ಸೇನೆಯಿಂದ ಯಾವುದೇ ಅಧಿಕೃತ ಹೇಳಿಕೆ ಇಲ್ಲ. ಆದರೂ ಪಾಕ್ ಬೆಂಬಲಿತ ವಿವಿಧ ಉಗ್ರ ಸಂಘಟನೆಗಳ ಉನ್ನತ ಭಯೋತ್ಪಾದಕರನ್ನು ಮಟಾಶ್ ಮಾಡುವ ಯೋಜನೆಯನ್ನು ಸೇನೆ ರೂಪಿಸಿರುವುದಾಗಿ ನಿಕಟ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರದಲ್ಲೇ ಕಾರ್ಯಾಚರಿಸುತ್ತಿರುವ ಈ ಟಾಪ್ ಟಾರ್ಗೆಟ್ ಉಗ್ರರನ್ನು ಮುಗಿಸಿ ಬಿಡುವುದಕ್ಕೆ ಸೇನೆ ಸ್ಕೆಚ್ ಹಾಕಿದೆ. ಸೇನೆಯ ಹಿಟ್ ಲಿಸ್ಟ್ ನಲ್ಲಿ ಜೆಇಎಂ, ಎಚ್ಎಂ, ಎಲ್ಇಟಿ, ಅಲ್ ಬದರ್ ಅನ್ಸಾರ್ ಘಜ್ವಾತ್ ಉಲ್ ಹಿಂದ್ ಉಗ್ರ ಸಂಘಟನೆಯ ಉನ್ನತ ಉಗ್ರರು ಸೇರಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಈಚೆಗೆ ಉಗ್ರರು ಪೊಲೀಸರ ನಿಕಟ ಬಂಧುಗಳನ್ನು ಅಪಹರಿಸಿರುವುದು, ನಿರಂತರವಾಗಿ ಎನ್ಕೌಂಟರ್ಗಳು ನಡೆಯುತ್ತಿರುವುದು ಇವೇ ಮೊದಲದ ಕಾರಣಗಳಿಗಾಗಿ ಸೇನೆ ಉಗ್ರರ ಮೇಲಿನ ಅಂತಿಮ ಪ್ರಹಾರಕ್ಕಾಗಿ ಆಪರೇಶನ್ ಆಲೌಟ್ 2 ಯೋಜನೆಯನ್ನು ಹಾಕಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.