ಹನಿಟ್ರ್ಯಾಪ್: ಪಾಕಿಸ್ತಾನಕ್ಕೆ ಯೋಧನಿಂದ ಮಾಹಿತಿ ರವಾನೆ
ವಾಟ್ಸ್‌ಆ್ಯಪ್ ಮೂಲಕ ಮಹತ್ವದ ಮಾಹಿತಿ ರವಾನಿಸಿರುವ ಯೋಧ
Team Udayavani, May 19, 2019, 6:00 AM IST
ಭೋಪಾಲ್: ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬನ “ಹನಿ ಟ್ರ್ಯಾಪ್’ ಜಾಲದಲ್ಲಿ ಸಿಲುಕಿದ್ದ ಕಾರಣಕ್ಕಾಗಿ ಲಕ್ನೋದಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಭಾರತೀಯ ಸೇನೆಯ ಯೋಧ, ಪಾಕಿಸ್ತಾನದಲ್ಲಿದ್ದ ವ್ಯಕ್ತಿಗೆ ಭಾರತೀಯ ಸೇನೆಗೆ ಸಂಬಂಧಿಸಿದ ಹಲವಾರು ಮಹತ್ವದ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಮೂಲಕ ರವಾನಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
2018ರ ಡಿಸೆಂಬರ್‌ನಿಂದ ಈತನ ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಸೇನಾ ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಮಧ್ಯಪ್ರದೇಶದ ಎಟಿಎಸ್ ಹಾಗೂ ಕೇಂದ್ರೀಯ ಗುಪ್ತಚರ ದಳದ ಅಧಿಕಾರಿಗಳು ಈತನನ್ನು ಇತ್ತೀಚೆಗೆ ವಶಕ್ಕೆ ಪಡೆದಿದ್ದವು. ಬಂಧನಕ್ಕೆ ಕೆಲವೇ ದಿನಗಳ ಮುನ್ನ ಈತನ ಈ ಕಾನೂನುಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ ಹಲವಾರು ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗಿತ್ತು. ಭೋಪಾಲ್‌ನಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಯೋಧನನ್ನು ಶನಿವಾರ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಿದೆ. ಆದರೂ, ಈತನಿಂದ ಪಾಕಿಸ್ತಾನ ಮೂಲದ ವ್ಯಕ್ತಿಗೆ ಯಾವ್ಯಾವ ಮಾಹಿತಿಗಳು ರವಾನಿಸಲ್ಪಟ್ಟಿವೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಸೇನೆ ನಿರ್ಧರಿಸಿದೆ. ಹಾಗಾಗಿ, ಆತನನ್ನು ತನ್ನ ವಶಕ್ಕೆ ಪಡೆಯಲು ಸೇನೆ ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.