ಪ್ರವಾಹಕ್ಕೆ ಮನೆ ಛಾವಣಿಯಲ್ಲಿ ಸಿಲುಕಿದ್ದ ಮೇಕೆಗಳನ್ನು ರಕ್ಷಿಸಿದ ಯೋಧರು
Team Udayavani, Aug 18, 2019, 10:28 PM IST
ನವಾನ್ ಶಹರ್: ಪಂಜಾಬ್ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್.ಡಿ.ಆರ್.ಎಫ್. ತಂಡ ಮತ್ತು ಸೇನಾ ಜವಾನರು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಹುಟ್ಟೂರಾಗಿರುವ ನವಾನ್ ಶಹರ್ ಸಹ ಪ್ರವಾಹ ಪೀಡಿತವಾಗಿದೆ. ಇಲ್ಲಿನ ಜಲ್ಲಾ ಮಾಜ್ರಾ ಗ್ರಾಮದಲ್ಲಿ ಮನೆಯೊಂದರ ಸುತ್ತ ಪ್ರವಾಹದ ನೀರು ತುಂಬಿಕೊಂಡಿದ್ದರಿಂದ ಆ ಪುಟ್ಟ ಮನೆಯ ಮಾಡಿನ ಮೇಲೆ ಆಶ್ರಯ ಪಡೆದಿದ್ದ ಮೇಕೆಗಳನ್ನು ಮತ್ತು ಇಬ್ಬರು ವ್ಯಕ್ತಿಗಳನ್ನು ಸೇನಾ ತಂಡ ರಕ್ಷಿಸಿ ದೋಣಿಯಲ್ಲಿ ಕರೆತರುತ್ತಿರುವ ವಿಡೀಯೋ ಇಲ್ಲಿದೆ.
ಚಿಕ್ಕದಾಗಿರುವ ಆ ಮನೆಯ ಹತ್ತಿರ ದೋಣಿಯಲ್ಲಿ ತೆರಳುವ ಜವಾನರು ಬಳಿಕ ಮಾಡಿನ ಮೇಲೆ ಆಶ್ರಯ ಪಡೆದಿದ್ದ ಕೆಲವು ಮೇಕೆಗಳನ್ನು ಒಂದೊಂದಾಗಿ ದೋಣಿಗೆ ತುಂಬಿಸಿಕೊಳ್ಳುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.
#WATCH Punjab: Army team rescues goats from the roof of a submerged house in flood-affected village Jalla Majra in Nawanshahr pic.twitter.com/y28xQPUXDf
— ANI (@ANI) August 18, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.