ಚೀನ ಎದುರಿಸಲು ಹೊವಿಟ್ಜರ್ ಬಲ
Team Udayavani, Jul 17, 2017, 3:30 AM IST
ಹೊಸದಿಲ್ಲಿ: ಭಾರತೀಯ ಭೂಸೇನೆಯ ಬಹುವರ್ಷದ ಬೇಡಿಕೆಯಾಗಿದ್ದ ಅತಿ ಹಗುರ ಹೊವಿಟ್ಜರ್ ಫಿರಂಗಿಯ ಪ್ರಾಯೋಗಿಕ ಪರೀಕ್ಷೆ ಇದೀಗ ಆರಂಭಗೊಂಡಿದೆ. ಅತ್ತ ಚೀನ ಹಾಗೂ ಪಾಕಿಸ್ಥಾನ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವಂಥ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ವಿಶೇಷವೆಂದರೆ, ಹೊವಿಟ್ಜರ್ ಫಿರಂಗಿಯು ಸದ್ಯದಲ್ಲೇ ಸೇನೆಗೆ ಸೇರ್ಪಡೆಗೊಳ್ಳಲಿದ್ದು, ಚೀನವನ್ನು ಎದುರಿಸಲೆಂದೇ ಇದನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಚೀನದೊಂದಿಗಿನ ಗಡಿಯಲ್ಲಿ ಈ ಫಿರಂಗಿಗಳನ್ನು ನಿಯೋಜಿಸುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನದ ಪೋಖ್ರಾನ್‌ನಲ್ಲಿ ಅಮೆರಿಕ ತಯಾರಿಕೆಯ ಎಂ-777 ಎ-2 ಅತಿ ಹಗುರ ಫಿರಂಗಿಯ ಪರೀಕ್ಷೆ ನಡೆಯುತ್ತಿದೆ. ಸೇನೆಗೆ ಸೇರ್ಪಡೆ ಮುನ್ನ ನಡೆಸುವ ಪರೀಕ್ಷೆ ಇದಾಗಿದೆ. ಬೊಫೋರ್ಸ್ ಹಗರಣ ಬೆಳಕಿಗೆ ಬಂದ ನಂತರ ಅಂದರೆ ಸುಮಾರು 30 ವರ್ಷಗಳ ಬಳಿಕ ಹೋವಿಟ್ಜರ್ ಪರೀಕ್ಷೆ ಆರಂಭಿಸಲಾಗಿದೆ. ಸೆಪ್ಟಂ ಬರ್ ವರೆಗೆ ಈ ಪರೀಕ್ಷೆ ಮುಂದುವರಿಯಲಿದ್ದು, ದಾಳಿ ಸಾಮರ್ಥ್ಯ, ಖಚಿತತೆ ಬಗ್ಗೆ ಸೇನೆ ದತ್ತಾಂ ಶಗಳನ್ನು ಕಲೆ ಹಾಕಲಿದೆ. 155 ಎಂ.ಎಂ/39 ಕ್ಯಾಲಿಬರ್‌ನ ಈ ಫಿರಂಗಿ ಭಾರತದಲ್ಲಿ ತಯಾರಿಸಿದ ಗುಂಡುಗಳನ್ನು ಸಿಡಿಸಲಿದೆ. 2018 ಸೆಪ್ಟrಂಬರ್‌ನಲ್ಲಿ ಇನ್ನೂ ಮೂರು ಫಿರಂಗಿಗಳು ಭಾರತಕ್ಕೆ ಪೂರೈಕೆಯಾಗಲಿದ್ದು, 2019ರಿಂದ ಸೇನೆಗೆ ತಿಂಗಳಿಗೆ 5 ಫಿರಂಗಿಗಳಂತೆ 2021ರವರೆಗೆ 145 ಫಿರಂಗಿಗಳು ಸೇರ್ಪಡೆಯಾಗಲಿವೆ. ಈ ಕುರಿತಂತೆ ಭಾರತ ಅಮೆರಿಕದೊಂದಿಗೆ ಈ ಹಿಂದೆ 5 ಸಾವಿರ ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.
ಈಗ ಅಮೆರಿಕದಿಂದ ಪೂರೈಕೆಯಾದ ಫಿರಂಗಿಗಳು ಸಂಪೂರ್ಣ ಜೋಡಣೆಯಾದ ರೀತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಮಹೀಂದ್ರಾ ಡಿಫೆನ್ಸ್ ಜತೆ ಬಿಎಇ ಸಿಸ್ಟಮ್ಸ್ ಅಮೆರಿಕ ತಯಾರಿಯ ಹೊವಿಟ್ಜರ್ ಫಿರಂಗಿ ಜೋಡಣೆಯನ್ನು ಭಾರತದಲ್ಲೇ ಮಾಡಲಿವೆ. 1980ರ ದಶಕದಲ್ಲಿ ಸ್ವೀಡನ್‌ನ ಬೊಫೋರ್ ತಯಾರಿಕೆಯ ಹೊವಿಟ್ಜರ್ ಫಿರಂಗಿಗಳನ್ನು ಖರೀದಿಸಲಾಗಿದ್ದು, ಇದರಲ್ಲಿ ಅವ್ಯವಹಾರ ನಡೆದಿದ್ದುದರಿಂದ ಬಳಿಕ ಫಿರಂಗಿಗಳನ್ನು ಖರೀದಿಸಿರಲಿಲ್ಲ. ಗಡಿಯಲ್ಲಿ ನೆರೆ ರಾಷ್ಟ್ರಗಳ ಉಪಟಳ ಇರುವುದರಿಂದ ಫಿರಂಗಿಗೆ ಸೇನೆ ನಿರಂತರ ಬೇಡಿಕೆ ಇಡುತ್ತಲೇ ಬಂದಿತ್ತು. ಇತ್ತೀಚೆಗೆ ಚೀನದ ಉಪಟಳ ಹೆಚ್ಚಾಗಿರುವ ಕಾರಣ, ಕಳೆದ ವಾರವಷ್ಟೇ ಸಮರ ಸನ್ನದ್ಧತೆಗಾಗಿ ಕೆಲವು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸೇನೆಗೆ ಸ್ವಾತಂತ್ರ್ಯ ನೀಡಲಾಗಿತ್ತು. ಇದೇ ವೇಳೆ, ಸೇನೆ ಕೂಡ ತನ್ನ ಆಧುನೀಕರಣ ಕಾರ್ಯಕ್ಕೆ ವೇಗ ನೀಡುವಂತೆ ಸರಕಾರವನ್ನು ಒತ್ತಾಯಿಸಿದ ಬಳಿಕ ಈ ಎಲ್ಲ ವಿದ್ಯಮಾನಗಳು ನಡೆದಿವೆ.
ಮೂವರು ಹಿಜ್ಬುಲ್ ಉಗ್ರರ ಸೆರೆ
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾ ಹಿದೀನ್ ಉಗ್ರ ಸಂಘಟನೆಯ ಅಡಗುತಾಣವೊಂದನ್ನು ಪೊಲೀಸರು ರವಿವಾರ ಭೇದಿಸಿದ್ದು, ಮೂವರು ಉಗ್ರರನ್ನು ಬಂಧಿಸಿದ್ದಾರೆ. ಈ ಅಡಗುತಾಣದಲ್ಲಿದ್ದ ಉಗ್ರರು ಕಣಿವೆ ರಾಜ್ಯದ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಸರಕಾರದ ‘ಹಠಮಾರಿತನ’
ಕಾಶ್ಮೀರದ ವಿಚಾರದಲ್ಲಿ ಸರಕಾರದ ಹಠಮಾರಿ ನಿಲುವು ಅಲ್ಲಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ. ಚೀನ ಮತ್ತು ಕಾಶ್ಮೀರ ಪರಿಸ್ಥಿತಿ ಕುರಿತು ವಿಪಕ್ಷಗಳೊಂದಿಗೆ ಸರಕಾರ ಸಭೆ ನಡೆಸಿದ ಬೆನ್ನಲ್ಲೇ ಅಂದರೆ ರವಿವಾರ ಮಾತನಾಡಿದ ಅವರು, ‘ಕಾಶ್ಮೀರ ವಿವಾದವು ಕೀವು ಆಗಿರುವಂಥ ಗಾಯ. ಕಾಶ್ಮೀರದ ಜನರು ಎರಡು ಗರಿಷ್ಠವಾದಿಗಳ ನಡುವೆ ಸಿಕ್ಕು ನಲುಗುತ್ತಿದ್ದಾರೆ. ಒಂದು ಕಡೆ ಕೇಂದ್ರ ಸರಕಾರ ಮತ್ತೂಂದು ಕಡೆ ಪ್ರತ್ಯೇಕತಾವಾದಿಗಳು ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇವರ ನಿಲುವಿಗೆ ಜನ ಬಲಿಯಾಗುತ್ತಿದ್ದಾರೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.