ಚೀನ ಗಡಿ ಕಾವಲಿಗೆ 1 ಸಾವಿರ ಕಾಪ್ಟರ್ ಬಳಕೆ
Team Udayavani, Oct 21, 2022, 7:10 AM IST
ಹೊಸದಿಲ್ಲಿ: ಭಾರತೀಯ ಸೇನೆಯು ಚೀನ ದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ತನ್ನ ಕಣ್ಗಾವಲು ಹೆಚ್ಚಿಸುವ ನಿಟ್ಟಿನಲ್ಲಿ 80 ಮಿನಿ ರಿಮೋಟ್ ಪೈಲಟ್ ವಿಮಾನ ವ್ಯವಸ್ಥೆ ಮತ್ತು 1,000 ಕಣ್ಗಾವಲು ಕಾಪ್ಟರ್ಗಳನ್ನು ಹೊಂದುವ ಪ್ರಕ್ರಿಯೆ ಆರಂಭಿಸಿದೆ.
ಅತೀ ಎತ್ತರದ ಪ್ರದೇಶಗಳಲ್ಲಿ ಹಗಲು- ರಾತ್ರಿ ಕಣ್ಗಾವಲು ಇರಿಸಲು ಮತ್ತು ಗುರಿ ಪತ್ತೆಹಚ್ಚುವಿಕೆಗಾಗಿ ಮಿನಿ ರಿಮೋಟ್ ಪೈಲಟ್ ವಿಮಾನವು ಬಹು ಸಂವೇದಕ ವ್ಯವಸ್ಥೆಯಾಗಿದೆ. ರಿಮೋಟ್ ಪೈಲಟ್ ವಿಮಾನ ಪೂರೈಕೆಗೆ ಟೆಂಡರ್ ಪ್ರಕಿಯೆ ಆರಂಭವಾಗಿದ್ದು, ಕಂಪೆನಿಗಳು ಬಿಡ್ ಸಲ್ಲಿ ಸಲು ನ.16 ಕಡೆಯ ದಿನವಾಗಿದೆ. ಇದೇ ವೇಳೆ ಕಣ್ಗಾವಲು ಕಾಪ್ಟರ್ಗಳ ಪೂರೈಕೆಗೆ ಬಿಡ್ ಸಲ್ಲಿಸಲು ನ.17 ಕೊನೆಯ ದಿನವಾ ಗಿದೆ. ಗುತ್ತಿಗೆ ಪ್ರಕ್ರಿಯೆ ಮುಗಿದ 12 ತಿಂಗಳ ಒಳಗಾಗಿ ಅವುಗಳನ್ನು ಕಂಪೆನಿಗಳು ಪೂರೈಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಗಾವಲು ಕಾಪ್ಟರ್ ಭಾರತೀಯ ಸೇನೆಗೆ ವೈಮಾನಿಕ ಕಣ್ಗಾವಲು ಮತ್ತು ಗುರಿಯೆಡೆಗೆ ನಿರಂತರ ಕಣ್ಗಾವಲು ಸಾಮರ್ಥ್ಯ ಒದಗಿಸುತ್ತದೆ. ಚೀನ ಗಡಿಯಲ್ಲಿ ಕಣ್ಗಾವಲಿಗಾಗಿ ಈ 1,000 ಕಣ್ಗಾವಲು ಕಾಪ್ಟರ್ಗಳನ್ನು ನಿಯೋಜಿ ಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.