ರಕ್ಷಣಾ ಬಜೆಟ್: ಸೇನೆಗೆ ಅಸಮಾಧಾನ, ಆಧುನೀಕರಣಕ್ಕೆ ಸಾಲದು
Team Udayavani, Mar 14, 2018, 11:32 AM IST
ಹೊಸದಿಲ್ಲಿ : ಚೀನ ತನ್ನ ಮಿಲಿಟರಿ ಖರ್ಚು ವೆಚ್ಚಗಳನ್ನು ಭಾರೀ ಪ್ರಮಾಣಕ್ಕೆ ಏರಿಸಿರುವ ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಆಧುನೀಕರಣದ ಬಗ್ಗೆ ಹೊಂದಿದ್ದ ನಿರೀಕ್ಷೆಗಳು ಈಗ ಹುಸಿಯಾಗಿವೆ; 2018-19ರಲ್ಲಿ ರಕ್ಷಣಾ ಬಜೆಟ್ನಲ್ಲಿ ಒದಗಿಸಲಾಗಿರುವ ಹಣವು ಅಪರ್ಯಾಪ್ತವಾಗಿದೆ ಎಂದು ಉಪ ಸೇನಾ ಮುಖ್ಯಸ್ಥ ಲೆ| ಜ| ಶರತ್ ಚಂದ್ ಅವರು ವಿಷಾದಿಸಿದ್ದಾರೆ.
ಸರಕಾರ ಒದಗಿಸಿರುವ ರಕ್ಷಣಾ ಬಜೆಟ್ ಮೊತ್ತ ಅಪರ್ಯಾಪ್ತವಾಗಿರುವುದರ ಫಲವಾಗಿ ಅನೇಕ ಮೇಕ್ ಇನ್ ಇಂಡಿಯಾ ಯೋಜನೆಗಳು ಅರ್ಧದಲ್ಲೇ ಕೊನೆಗೊಳ್ಳಬಹುದು ಎಂಬ ಭಯವನ್ನು ಲೆ| ಜ| ಶರತ್ ಚಂದ್ ಅವರು ಸಂಸದೀಯ ಮಂಡಳಿಯ ಮುಂದೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆಯ ಆಧುನೀಕರಣಕ್ಕೆಂದು ಒದಗಿಸಲಾಗಿರುವ 21,388 ಕೋಟಿ ರೂ.ಗಳು ಅಪರ್ಯಾಪ್ತವಾಗಿವೆ. ಈಗ ಚಾಲ್ತಿಯಲ್ಲಿರುವ 125 ಯೋಜನೆಗಳು, ತುರ್ತು ಖರೀದಿಗಳು ಮತ್ತು ಇತರ ಆವಶ್ಯಕತೆಗಳನ್ನು ಪೂರೈಸುವುದಕ್ಕೇ 29,033 ಕೋಟಿ ರೂ.ಗಳು ಬೇಕಾಗಿರುವಾಗ ರಕ್ಷಣಾ ಬಜೆಟ್ ನಲ್ಲಿ ಕೊಡಲಾಗಿರುವ 21,388 ಕೋಟಿ ರೂ.ಗಳು ಯಾವುದಕ್ಕೂ ಸಾಲದು ಎಂದು ಲೆ| ಜ| ಶರತ್ ಚಂದ್ ಸಂಸದೀಯ ಮಂಡಳಿಗೆ ಸ್ಪಷ್ಟಪಡಿಸಿದ್ದಾರೆ.
2018-19ರ ರಕ್ಷಣಾ ಬಜೆಟ್ ನಮ್ಮ ನಂಬಿಕೆ ಮತ್ತು ಆಶಯಗಳನ್ನು ನುಚ್ಚುನೂರು ಮಾಡಿವೆ. ಈಗಾಗಲೇ ನಾವೇನಾದರೂ ಮಾಡಿರುವ ಸಣ್ಣ ಪುಟ್ಟ ಸಾಧನೆಗಳಿಗೆ ಕೂಡ ಇದರಿಂದ ಹಿನ್ನಡೆಯಾಗಿದೆ ಎಂದವರು ವಿಷಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.