Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
Team Udayavani, Nov 22, 2024, 6:44 AM IST
ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ನಲ್ಲಿ ದೋಷಾರೋಪ ನಿಗದಿಯಾಗುತ್ತಿದ್ದಂತೆ, ಕಾಂಗ್ರೆಸ್, ಟಿಎಂಸಿ, ಆಪ್ ಸೇರಿದಂತೆ ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿವೆ.
“ಅದಾನಿ ಮೆಗಾ ಹಗರಣ’ವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂಬ ನಮ್ಮ ಒತ್ತಾಯಕ್ಕೆ ಈಗ ಬಲ ಬಂದಿದ್ದು, ಈಗ ನಡೆಯುತ್ತಿರುವ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಗೆ ಹೊಸ ಮತ್ತು ವಿಶ್ವಾಸಾರ್ಹ ಮುಖ್ಯಸ್ಥರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಲಂಚ ಹಾಗೂ ವಂಚನೆ ಆರೋಪ ಎದುರಿಸುತ್ತಿರುವ ಅದಾನಿಯವರನ್ನು ಕೂಡಲೇ ಬಂಧಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅದಾನಿಯು ಭಾರತ ಮಾತ್ರವಲ್ಲದೆ ಅಮೆರಿಕದ ಕಾನೂನನ್ನೂ ಉಲ್ಲಂ ಸಿರುವುದು ಈಗ ಸ್ಪಷ್ಟವಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು. ಜತೆಗೆ, ಅವರ “ರಕ್ಷಕಿ’ ಹಾಗೂ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ರನ್ನು ಅವರ ಹುದ್ದೆಯಿಂದ ವಜಾ ಮಾಡಿ, ತನಿಖೆಗೆ ಆದೇಶಿಸಬೇಕು ಎಂದೂ ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಸತ್‌ನಲ್ಲೂ ಧ್ವನಿಯೆತ್ತುವುದಾಗಿ ಅವರು ಹೇಳಿದ್ದಾರೆ.
ಅದಾನಿ ಅವರು ಭಾರತೀಯ ಹೂಡಿಕೆದಾರರಿಗೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಕಿಡಿಕಾರಿದ್ದಾರೆ. ಇನ್ನು, ಅದಾನಿ ಅವರು ಭಾರತಕ್ಕೆ ಅಗೌರವ ತಂದಿದ್ದು, ಅವರ ವಿರುದ್ಧ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಆಪ್ ಒತ್ತಾಯಿಸಿದೆ.
“ಮಿಸ್ಟರ್ ಎ’, “ಸ್ನೇಕ್’ ಕೋಡ್‌ನೇಮ್!
ಲಂಚ ಹಾಗೂ ಷೇರು ವಂಚನೆ ವೇಳೆ ಆರೋಪಿಗಳು ಪರಸ್ಪರ ಕೋಡ್‌ನೇಮ್(ರಹಸ್ಯ ಹೆಸರು)ಗಳ ಮೂಲಕ ಮಾತನಾಡುತ್ತಿದ್ದರು. ಸಂಭಾಷಣೆಗೆ “ವಿ, ಸ್ನೇಕ್, ನ್ಯೂಮೆರೋ ಯುನೋ ಮೈನಸ್ ಒನ್’ ಮತ್ತಿತರ ರಹಸ್ಯ ಹೆಸರನ್ನು ಬಳಸುತ್ತಿದ್ದರು. ಅದಾನಿ ಅವರನ್ನು “ಮಿಸ್ಟರ್ ಎ’, “ನ್ಯುಮೆರೋ ಯುನೋ’ ಮತ್ತು “ದಿ ಬಿಗ್ ಮ್ಯಾನ್’ ಎಂದು ಕರೆಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಲಂಚ ಪಡೆದಿದ್ದು ವಿಪಕ್ಷ ಸರಕಾರಗಳು: ಬಿಜೆಪಿ
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, “ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವುದೆಲ್ಲ ವಿಪಕ್ಷಗಳ ಆಡಳಿತವಿದ್ದ ರಾಜ್ಯಗಳು’ ಎಂದು ತಿರುಗೇಟು ನೀಡಿದೆ. “ಇವೆಲ್ಲವೂ ಆರೋಪಗಳಷ್ಟೆ. ಅವು ಸಾಬೀತಾಗುವವರೆಗೂ ಆರೋಪಿ ಅಪರಾಧಿಯಾಗಲು ಸಾಧ್ಯವಿಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಲಂಚ ಪಾವತಿಯಾಗಿರುವುದು ವಿಪಕ್ಷಗಳ ಸರಕಾರವಿದ್ದ ಒಡಿಶಾ, ತಮಿಳುನಾಡು, ಛತ್ತೀಸ್‌ಗಢ, ಆಂಧ್ರ ಪ್ರದೇಶಗಳ ವಿದ್ಯುತ್ ವಿತರಣ ಕಂಪೆನಿಗಳಿಗೆ (2021ರ ಜುಲೈನಿಂದ 2022ರ ಫೆಬ್ರವರಿವರೆಗೆ). ಇದರ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ಐಟಿ ಘಟಕ ಮುಖ್ಯಸ್ಥ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ. ಕಾಂಗ್ರೆಸ್, ರಾಹುಲ್ 2002ರಿಂದಲೂ ಮೋದಿಯವರ ವರ್ಚಸ್ಸಿಗೆ ಕಳಂಕ ತರಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅವರ ವಿಶ್ವಾಸಾರ್ಹತೆಗೆ ಯಾವುದೇ ಧಕ್ಕೆ ಆಗಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಹೇಳಿದ್ದಾರೆ.
ಅದಾನಿ ಗ್ರೂಪ್‌ಗೆ ಶಾಕ್: 2.19 ಲಕ್ಷ ಕೋಟಿ ರೂ. ನಷ್ಟ!
ಅಮೆರಿಕದ ಕೋರ್ಟ್‌ನಿಂದ ದೋಷಾರೋಪ ನಿಗದಿಯಾಗುತ್ತಲೇ ಇತ್ತ ಅದಾನಿ ಕಂಪೆನಿಯ ಷೇರುಗಳು ಭಾರೀ ನಷ್ಟ ಅನುಭವಿಸಿವೆ. ಮುಂಬಯಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಅದಾನಿ ಗ್ರೂಪ್‌ನ 10 ಕಂಪೆನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ಗುರುವಾರ ಏಕಾಏಕಿ 2.19 ಲಕ್ಷ ಕೋಟಿ ರೂ. ಕುಸಿತ ಕಂಡಿದೆ. 2023ರ ಜನವರಿಯಲ್ಲಿ ಹಿಂಡನ್‌ಬರ್ಗ್ ರಿಸರ್ಚ್ ವರದಿ ಹೊರಬಂದಾಗ ಅದಾನಿ ಗ್ರೂಪ್ ಎಷ್ಟು ನಷ್ಟ ಅನುಭವಿಸಿತ್ತೋ, ಅದರ ದುಪ್ಪಟ್ಟು ನಷ್ಟ ಗುರುವಾರ ಅನುಭವಿಸಿದೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.22.61, ಅದಾನಿ ಎನರ್ಜಿ ಶೇ.20, ಅದಾನಿ ಗ್ರೀನ್ ಎನರ್ಜಿ ಶೇ.18.80, ಅದಾನಿ ಪೋರ್ಟ್ಸ್ ಶೇ.13.50ರಷ್ಟು ಪತನಗೊಂಡಿವೆ.
ಅದಾನಿ ಕಂಪೆನಿಗೂ ತಮಿಳುನಾಡಿಗೂ ಸಂಬಂಧವಿಲ್ಲ: ಸಚಿವ
ಆರೋಪ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ವಿದ್ಯುತ್ ಸಚಿವ ವಿ.ಸೆಂಥಿಲ್ ಬಾಲಾಜಿ, ನಮ್ಮ ಸರಕಾರದ ವಿದ್ಯುತ್ ನಿಗಮಕ್ಕೂ ಅದಾನಿಯ ಕಂಪನಿಗೂ ಯಾವುದೇ ವಾಣಿಜ್ಯಿಕ ಸಂಬಂಧವಿಲ್ಲ. ರಾಜ್ಯವು ಕೇವಲ ಕೇಂದ್ರ ಸರಕಾರದ ಸಂಸ್ಥೆಯಿಂದ ಮಾತ್ರವೇ ವಿದ್ಯುತ್ ಖರೀದಿಸುತ್ತದೆ ಎಂದಿದ್ದಾರೆ.
”ಈ ಪ್ರಕರಣವು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಕಳಂಕ ತಂದಿದೆ. ವಿದೇಶಗಳಲ್ಲಿ ಕಂಪೆನಿ ಮಾಡಿರುವ ಹೂಡಿಕೆ ಸೇರಿದಂತೆ ಅದಾನಿ ಗ್ರೂಪ್‌ನ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆಯೂ ಜಂಟಿ ಸಂಸದೀಯ ಸಮಿತಿಯಿಂದ ಸಮಗ್ರ ತನಿಖೆ ಆಗಬೇಕು. ಈ ತನಿಖೆ ಅದಾನಿಯಿಂದಲೇ ಆರಂಭವಾಗಬೇಕು.”
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಅದಾನಿ ಗ್ರೂಪ್‌ಗೆ ಕೀನ್ಯಾ ಸರಕಾರ ನೀಡಿದ್ದ 2 ಯೋಜನೆಗಳು ರದ್ದು!
ನೈರೋಬಿ: ಅದಾನಿ ಕಂಪೆನಿಗೆ ಮತ್ತೂಂದು ಆಘಾತವೆಂಬಂತೆ, ಕಂಪೆನಿ ವಿರುದ್ಧ ಲಂಚ, ವಂಚನೆ ಆರೋಪ ಕೇಳಿಬಂದ ಬೆನ್ನಲ್ಲೇ ಕೀನ್ಯಾ ಸರಕಾರ ಅದಾನಿ ಗ್ರೂಪ್‌ಗೆ ನೀಡಿದ್ದ 2 ಪ್ರಮುಖ ಯೋಜನೆಗಳನ್ನು ರದ್ದು ಮಾಡಿದೆ. ಕೀನ್ಯಾದ ಪ್ರಧಾನ ಏರ್‌ಪೋರ್ಟ್ ವಿಸ್ತರಣೆಗೆ ಸಂಬಂಧಿಸಿದ ಪ್ರಾಜೆಕ್ಟ್ ಹಾಗೂ ವಿದ್ಯುತ್ ಪ್ರಸರಣ ಲೈನ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದ 700 ದಶಲಕ್ಷ ಡಾಲರ್ ಮೊತ್ತದ ಯೋಜನೆಗಳನ್ನು ಈ ಹಿಂದೆ ಅದಾನಿ ಗ್ರೂಪ್‌ಗೆ ವಹಿಸಲಾಗಿತ್ತು. ಈ ಕುರಿತು ಅದಾನಿ ಕಂಪೆನಿಯೊಂದಿಗೆ ಕೀನ್ಯಾದ ಇಂಧನ ಸಚಿವಾಲಯ ಒಪ್ಪಂದವನ್ನೂ ಮಾಡಿಕೊಂಡಿತ್ತು. ಆದರೆ ಈಗ ಕಂಪನಿ ವಿರುದ್ಧ ಆರೋಪ ಕೇಳಿಬಂದಿರುವ ಕಾರಣ ಈ ಯೋಜನೆಗಳನ್ನು ರದ್ದು ಮಾಡಿರುವುದಾಗಿ ಕೀನ್ಯಾ ಅಧ್ಯಕ್ಷ ರೂಟೋ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.