250 ಮಂದಿ ವ್ಯಕ್ತಿಗಳಿಗೆ ಕಚ್ಚಿದ ಕೋತಿಗೆ “ಬಂಧನ’ ಶಿಕ್ಷೆ
Team Udayavani, Jun 17, 2020, 8:36 AM IST
ಸಾಂದರ್ಭಿಕ ಚಿತ್ರ
ಕಾನ್ಪುರ: ಮದ್ಯ ಸೇವಿಸಿದ ಮಾನವರು ಅದು ಸಿಗದೆ ಇದ್ದರೆ ವಿಚಿತ್ರವಾಗಿ ವರ್ತಿಸುತ್ತಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದ್ಯ ಸಿಗದೆ ಸಿಟ್ಟಿನಿಂದ ಇದ್ದ ಕೋತಿ 250 ಮಂದಿಗೆ ಕಚ್ಚಿದೆ. ಜತೆಗೆ ಒಬ್ಬನ ಜೀವವನ್ನೂ ಆಪೋಷನ ಪಡೆದಿದೆ. ಇದರಿಂದಾಗಿ ಅದನ್ನು ಜೀವನ ಪರ್ಯಂತ ಮೃಗಾಲಯದಲ್ಲಿಯೇ ಬಂದಿಯಂತೆ ಇರಿಸಲು ನಿರ್ಧರಿಸಲಾಗಿದೆ. ಮಿರ್ಜಾಪುರ ಜಿಲ್ಲೆಯ ಮ್ಯಾಜಿಕ್ ಮಾಡುವ ವ್ಯಕ್ತಿ ಬಳಿ ಈ ಕೋತಿ ಇತ್ತು. ಆತ ಪ್ರೀತಿಯಿಂದ ಅದಕ್ಕೆ ಮದ್ಯ ನೀಡುತ್ತಿದ್ದ. ಆ ವ್ಯಕ್ತಿ ಅಸುನೀಗಿದ ಬಳಿಕ ಸಿಗುತ್ತಿದ್ದ ಮದ್ಯ ನಿಂತು ಹೋಯಿತು. ಇದರಿಂದಾಗಿ ಅದು ರೋಷಗೊಂಡು, ಕಿತಾಪತಿ ಮಾಡಲು ಶುರು ಮಾಡಿತ್ತು. ಕೊನೆಗೊಂದು ದಿನ ಸ್ಥಳೀಯ ಅಧಿ ಕಾರಿಗಳ ಕೈಗೆ ತಂಟೆ ಮಾಡುತ್ತಿದ್ದ ವೇಳೆ ಸಿಕ್ಕಿ ಬಿತ್ತು. ಅದನ್ನು ಕಾನ್ಪುರ ಮೃಗಾಲಯಕ್ಕೆ ತರಲಾಗಿದೆ. ಇಷ್ಟೆಲ್ಲಾ ಘಟನೆಗಳು ನಡೆದದ್ದು ಮೂರು ವರ್ಷಗಳ ಹಿಂದೆ. ಈಗಲೂ ಅದರ ವರ್ತನೆಯಲ್ಲಿ ಬದ ಲಾವಣೆ ಬರದೇ ಇದ್ದ ಕಾರಣ, ಅದನ್ನು ಜೀವನ ಪರ್ಯಂತ ಪ್ರತ್ಯೇಕ ವಾಗಿ ಇರಿಸಲು ನಿರ್ಧರಿಸಲಾಗಿದೆ ಎಂದು ಮೃಗಾಯದ ನಿರ್ದೇಶಕ ಮೊಹಮ್ಮದ್ ನಾಸಿರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
MUST WATCH
ಹೊಸ ಸೇರ್ಪಡೆ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.