RBI ವಿರುದ್ಧ ಸಚಿವ ಜೇಟ್ಲಿ ವಾಗ್ಧಾಳಿ
Team Udayavani, Oct 31, 2018, 4:00 AM IST
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಹಣಕಾಸು ಸಚಿವಾಲಯದ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಆಗಾಗ್ಗೆ ಹೊರಬರುತ್ತಲೇ ಇರುತ್ತವೆ. ಈಗ ಮತ್ತೂಮ್ಮೆ ಈ ಅಂತಃಕಲಹ ಬಹಿರಂಗಗೊಂಡಿದೆ. ಈ ಹಿಂದೆ ಸಾಲ ನೀಡಿಕೆ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಆರ್‌ಬಿಐ ವಿಫಲವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಾತನಾಡಿದ್ದ RBI ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ, ಕೇಂದ್ರ ಸರಕಾರ RBI ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುತ್ತಿದೆ ಎಂಬ ಆರೋಪಿಸಿದ್ದರು. ಇದು ದೇಶವನ್ನು ವಿಪತ್ತಿಗೆ ದೂಡಲಿದೆ ಎಂದು ಎಚ್ಚರಿಸಿದ್ದರು.
ಜೇಟ್ಲಿ ಹೇಳಿದ್ದೇನು?
2008ರಿಂದ 2014ರ ಅವಧಿಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗ ಆರ್ಥಿಕ ಬೆಳವಣಿಗೆಯನ್ನು ಕೃತಕವಾಗಿ ಉತ್ತೇಜಿಸಲು ಬ್ಯಾಂಕ್‌ಗಳಿಗೆ ಯಥೇಚ್ಛವಾಗಿ ಸಾಲ ನೀಡುವಂತೆ ಸೂಚಿಸಲಾಗಿತ್ತು. ಸಾಲ ನೀಡಿಕೆ ಪ್ರಮಾಣ ನಿಯಂತ್ರಿಸುವಲ್ಲಿ ಆರ್‌ಬಿಐ ವಿಫಲವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ವಿರಳ್ ಆಚಾರ್ಯ ಹೇಳಿದ್ದೇನು?
ಆರ್‌ಬಿಐ ಸ್ವಾತಂತ್ರ್ಯವನ್ನು ಗೌರವಿಸದ ಸರಕಾರವು ಹಣಕಾಸು ಮಾರುಕಟ್ಟೆಯ ಸಮಸ್ಯೆಯನ್ನು ಎದುರಿಸುತ್ತದೆ. ಅಷ್ಟೇ ಅಲ್ಲ, ಅದು ಆರ್ಥಿಕ ಸಂಕಷ್ಟಕ್ಕೂ ಕಾರಣವಾಗಬಹುದು ಎಂದು ಆಚಾರ್ಯ ಹೇಳಿದ್ದರು.
ಸಭೆಗೂ ಮುನ್ನ ಭಿನ್ನಾಭಿಪ್ರಾಯ
ಜೇಟ್ಲಿ ಹಾಗೂ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಮಂಗಳವಾರ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭೇಟಿಯಾಗಿದ್ದಾರೆ. ಹಣಕಾಸಿನ ದ್ರವ್ಯತೆ ಹಾಗೂ ಇತರ ವಿಷಯಗಳ ಕುರಿತು ಜೇಟ್ಲಿ ಮತ್ತು ಪಟೇಲ್ ಮಾತುಕತೆ ನಡೆಸಿದ್ದಾರೆ.
ಏನಿದು ವಿವಾದ?
ಆರ್‌ಬಿಐ ಹಾಗೂ ಸರಕಾರದ ಮಧ್ಯೆ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳಿದ್ದವು. ಸರಕಾರಕ್ಕೆ ಅನುಕೂಲಕರವಾದ ವಿತ್ತ ನೀತಿಯನ್ನು ಕೈಗೊಳ್ಳಬೇಕೆಂದು ಆರ್‌ಬಿಐ ಮೇಲೆ ಸರಕಾರಗಳು ಒತ್ತಡ ಹೇರುತ್ತಲೇ ಇದ್ದವು. ರೆಪೋ ದರ ಇಳಿಕೆಯಿಂದಲೇ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲಾಗದು ಎಂಬುದಾಗಿ ಬಹುತೇಕ ಆರ್‌ಬಿಐ ಗವರ್ನರ್‌ಗಳು ಸರಕಾರದ ವಿರುದ್ಧ ಚಾಟಿ ಬೀಸುತ್ತಲೇ ಇದ್ದರು. ಆದರೆ ಈ ಬಾರಿಯ ವಿವಾದ ಸಂಪೂರ್ಣ ವಿಭಿನ್ನ ನೆಲೆಯಲ್ಲಿದೆ. ಇತ್ತೀಚೆಗೆ ಹಣಕಾಸು ಮುಗ್ಗಟ್ಟಿಗೀಡಾದ ಐಎಲ್‌ಆ್ಯಂಡ್‌ಎಫ್ಎಸ್ ಹಣಕಾಸು ಸಂಸ್ಥೆಯ ಪರಿಣಾಮ ಇಡೀ ದೇಶದ ಆರ್ಥಿಕ ವಲಯಕ್ಕೆ ಹರಡುವ ಭೀತಿ ಎದುರಾಗಿದ್ದು, ಇದನ್ನು ನಿಯಂತ್ರಿಸುವಂತೆ ಸರಕಾರ ಆರ್‌ಬಿಐ ಮೇಲೆ ಒತ್ತಡ ಹೇರಿದೆ. ಆದರೆ ಯಾವುದೇ ದ್ರವ್ಯತೆ ಸಮಸ್ಯೆ ಇಲ್ಲ ಎಂದು ಆರ್‌ಬಿಐ ಭರವಸೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
MUST WATCH
ಹೊಸ ಸೇರ್ಪಡೆ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.