ತೆರಿಗೆ ಪಾವತಿಗಿನ್ನು “ಆಯ್‌ಕರ್ ಸೇತು’ ಆ್ಯಪ್
Team Udayavani, Jul 11, 2017, 11:29 AM IST
ಹೊಸದಿಲ್ಲಿ: ಪ್ರತಿ ವರ್ಷ ಮೇನಿಂದ ಜುಲೈ ಅಂತ್ಯದವರೆಗೆ ತೆರಿಗೆ ಪಾವತಿಯ ಧಾವಂತ. ಇನ್ನು ಆ ತಲೆಬಿಸಿ ತಗ್ಗಿಸಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಟಿಡಿಎಸ್ ಅನ್ನು ಟ್ರ್ಯಾಕ್ ಮಾಡಲು, ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ಆಧಾರ್ ಕಾರ್ಡ್ ಲಿಂಕ್ ಮಾಡಲು ಹೊಸ ವ್ಯವಸ್ಥೆಯಲ್ಲಿ ಸಾಧ್ಯವಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸೋಮವಾರ ಅದನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಆ್ಯಂಡ್ರಾಯ್ಡ ಫೋನ್‌ಗಳಲ್ಲಿ ಸಿಗಲಿರುವ ಈ ಆ್ಯಪ್ ಹೆಸರು “ಆಯ್‌ಕರ್ ಸೇತು’.
ಸಿಬಿಡಿಟಿ ತೆರಿಗೆ ಪಾವತಿದಾರರಿಗೆ ರೂಪಿಸಿರುವ ಸರಳ ವ್ಯವಸ್ಥೆಗಳಲ್ಲಿ ಇದೂ ಒಂದಾಗಿದ್ದರೆ, ಮಂಡಳಿ ರೂಪಿಸಿರುವ ಮೊದಲ ಮೊಬೈಲ್ ಆ್ಯಪ್ ಇದಾಗಿದೆ. ಡೌನ್‌ಲೋಡ್ ಮಾಡಬೇಕಿದ್ದರೆ 7306525252ಕ್ಕೆ ಮಿಸ್ಡ್ ಕಾಲ್ ಕೊಡಿ.
ಆ್ಯಪಲ್ಲೇ ರಿಟರ್ನ್ಸ್ ಸಲ್ಲಿಕೆ: ಶೀಘ್ರದಲ್ಲಿಯೇ ಮೊಬೈಲ್ ಮೂಲಕವೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ವ್ಯವಸ್ಥೆಯನ್ನೂ ಆರಂಭಿಸಲಿದೆ. ಇದರ ಜತೆಗೆ ತೆರಿಗೆ ಪಾವತಿದಾರರಿಗೆ ತೆರಿಗೆಗೆ ಸಂಬಂಧಿಸಿದ ದಿನಾಂಕಗಳ ಅಪ್‌ಡೇಟ್ ಕೂಡ ಅದರಲ್ಲಿ ಲಭಿಸಲಿದೆ. ಎಸ್‌ಎಂಎಸ್ ಮೂಲಕ ಅಲರ್ಟ್ ಪಡೆದುಕೊಳ್ಳುತ್ತಿದ್ದವರು, ಆಪ್ ಮೂಲಕ ಅಪ್‌ಡೇಟ್ ಪಡೆದುಕೊಳ್ಳಬೇಕೆಂದು ಸಲಹೆ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.