ಸಿಮ್‌ಗೆ ಆಧಾರ್ ಲಿಂಕ್ ಮುಂದುವರಿಕೆ: ಸಚಿವ ಅರುಣ್ ಜೇಟ್ಲಿ ಹೇಳಿಕೆ
Team Udayavani, Oct 7, 2018, 6:16 AM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್‌ಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸರಕಾರ ಕೈಬಿಟ್ಟಿಲ್ಲ. ಅಷ್ಟೇ ಅಲ್ಲ, ಈ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆಯಿದೆ. ಸಂಸತ್ತು ಅನುಮೋದಿಸಿದ ಈ ಕಾಯ್ದೆ ಯನ್ನು ಮರುಜಾರಿಗೊಳಿಸ ಬಹುದಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆದರೆ ಇದಕ್ಕಾಗಿ ಹೊಸ ಕಾಯ್ದೆ ಜಾರಿಗೆ ತರಲಾಗುತ್ತದೆಯೇ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಕಳೆದ ತಿಂಗಳು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಆಧಾರ್‌ನ ಸಾಂವಿ ಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿತ್ತು. ಆದರೆ ಖಾಸಗಿ ಕಂಪೆನಿಗಳಾದ ಟೆಲಿಕಾಂ ಕಂಪೆನಿಗಳು ಮೊಬೈಲ್ ಫೋನ್ ಬಳಕೆದಾರರ ಗುರುತು ಪರಿಶೀಲನೆಗೆ ಆಧಾರ್ ದತ್ತಾಂಶ ಬಳಕೆ ಮಾಡುವುದನ್ನು ನಿರ್ಬಂಧಿಸಿತ್ತು. ಟೆಲಿಫೋನ್ ಕಂಪೆನಿಗಳು ಹಾಗೂ ಬ್ಯಾಂಕ್‌ಗಳಿಗೆ ಆಧಾರ್ ಬಳಕೆಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಸುಪ್ರೀಂ ತಡೆ ಹಿನ್ನೆಲೆಯಲ್ಲಿ ಸರಕಾರ ಪರ್ಯಾಯ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾ ಗಿತ್ತು. ಈ ಹಿನ್ನೆಲೆಯಲ್ಲಿ ಜೇಟ್ಲಿ ಹೇಳಿಕೆ ಮಹತ್ವದ್ದಾಗಿದ್ದು, ಸಿಮ್ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಪ್ರಕ್ರಿಯೆ ಶೀಘ್ರ ಮರುಜೀವ ಪಡೆಯುವ ಸಾಧ್ಯತೆಯಿದೆ.
ಪುನಃ ಜಾರಿ ಹೇಗೆ?: ಈ ಬಗ್ಗೆ ಪ್ರತಿಕ್ರಿಯಿಸಿದ ಜೇಟ್ಲಿ, ಸುಪ್ರೀಂ ತೀರ್ಪು ಮಹತ್ವದ್ದಾಗಿದೆ. ಆಧಾರ್ ಕೇವಲ ಪೌರತ್ವ ಕಾರ್ಡ್ ಅಲ್ಲ. ಇದರ ಆಧಾರದಲ್ಲಿ ವಿವಿಧ ಸಬ್ಸಿಡಿಗಳನ್ನು ಜನರಿಗೆ ನೀಡಲಾಗುತ್ತದೆ. ಆಧಾರ್‌ನ ಬಹುತೇಕ ಪ್ರಕ್ರಿಯೆಗಳನ್ನು ಕೋರ್ಟ್ ಅನುಮತಿಸಿದೆ. ಆದರೆ ಇತರರಿಗೆ ಆಧಾರ್ ಡೇಟಾ ಬಳಕೆಗೆ ಸಂಬಂಧಿಸಿ ಕಾನೂನು ಅಥವಾ ಒಪ್ಪಂದ ಗಳ ಮೂಲಕ ಅನುಮತಿ ನೀಡಬಹುದು ಎಂಬುದನ್ನು ಆಧಾರ್ ಕಾಯ್ದೆಯ 57ನೇ ಪರಿಚ್ಛೇದ ದಲ್ಲಿ ವಿವರಿಸಲಾಗಿದೆ. ಈ ಪೈಕಿ ಒಪ್ಪಂದ ಎಂಬುದನ್ನು ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಕಾನೂನು ರೂಪಿಸಿ, ಈ ವ್ಯವಸ್ಥೆ ಮರುಜಾರಿಗೊಳಿಸ ಬಹುದಾಗಿದೆ ಎಂದಿದ್ದಾರೆ.
ಸಿಮ್, ಬ್ಯಾಂಕ್ ಖಾತೆ ಮಹತ್ವದ್ದು: ಆಧಾರ್ ಲಿಂಕಿಂಗ್‌ನಲ್ಲಿ ಸಿಮ್ ಮತ್ತು ಬ್ಯಾಂಕ್ ಖಾತೆ ಮಹತ್ವದ್ದು. ಇದರಿಂದ ಎಷ್ಟೆಲ್ಲ ಅನುಕೂಲಗಳಿವೆ ಎಂಬುದನ್ನು ನಾವು ಮನವರಿಕೆ ಮಾಡಿಕೊಡಬಹುದು. ಆದಾಯ ತೆರಿಗೆಗೆ ಆಧಾರ್ ಬಳಕೆ ಮುಂದುವರಿಸಬಹುದಾಗಿದ್ದು, ಇದೇ ರೀತಿ ಅನುಕೂಲಗಳು ಸಿಮ್, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವಲ್ಲೂ ಲಭ್ಯವಿವೆ ಎಂದು ಜೇಟ್ಲಿ ಹೇಳಿದ್ದಾರೆ.
ಚಾಲ್ತಿ ಖಾತೆ ಕೊರತೆ ನಿವಾರಿಸಲು ಕ್ರಮ
ಚಾಲ್ತಿ ಖಾತೆ ಕೊರತೆ ಹೆಚ್ಚುತ್ತಿದ್ದು, ಇದನ್ನು ಕಡಿಮೆ ಮಾಡಲು ಈಗಾ ಗಲೇ ಕೆಲವು ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಇನ್ನೂ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ. ಅಲ್ಲದೆ, ಪ್ರಸ್ತುತ ವಿತ್ತ ವರ್ಷದಲ್ಲಿ ಸಾಲದ ಗುರಿಯನ್ನು 70 ಸಾವಿರ ಕೋಟಿ ರೂ.ಗೆ ನಿಗದಿಸ ಲಾಗಿದೆ ಮತ್ತು ಒಂದು ವರ್ಷದಲ್ಲಿ 100 ಕೋಟಿ ಡಾಲರ್ ಸಾಲ ಪಡೆಯಲು ತೈಲ ಕಂಪನಿಗಳಿಗೆ ಅನು ಮತಿ ನೀಡಲಾಗಿದೆ ಎಂದಿದ್ದಾರೆ.
ಕೇಂದ್ರ ಸರಕಾರ ಪೆಟ್ರೋಲ್ ದರ ಇಳಿಸಿದರೂ, ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಯ ಆಡಳಿತವಿರುವ ರಾಜ್ಯಗಳು ಇಳಿಕೆ ಮಾಡಿಲ್ಲ. ರಾಹುಲ್ ಹಾಗೂ ಅವರ ಸ್ನೇಹಿತರು ಟ್ವೀಟ್ ಹಾಗೂ ಟಿವಿಗೆ ಹೇಳಿಕೆ ನೀಡುವುದೇ ಜನಸಾಮಾನ್ಯರ ಸೇವೆ ಎಂದು ಭಾವಿಸಿದಂತಿದೆ.
ಅರುಣ್ ಜೇಟ್ಲಿ, ವಿತ್ತ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.