ಅಂದು ಸಚಿವ ಪಟ್ಟ ಕಿತ್ತುಕೊಂಡಿದ್ದೇಕೆ?
Team Udayavani, Sep 29, 2017, 6:00 AM IST
ನವದೆಹಲಿ: ದೇಶದ ಅರ್ಥ ವ್ಯವಸ್ಥೆ ಬಗ್ಗೆ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಬರೆದಿರುವ ಲೇಖನ ಕೇಂದ್ರ ಸರಕಾರದ ವಲಯದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ. ಇದಕ್ಕೆ ಪ್ರತಿ ಕ್ರಿಯಿಸಿ ಮಾತನಾಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ , ಪ್ರಧಾನಿ ನರೇಂದ್ರ ಮೋದಿ ದೇಶದ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ದೊಡ್ಡ ಕನಸನ್ನೇ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಯುಪಿಎ-2ರ ಅವಧಿಯಲ್ಲಿ ಉಂಟಾದ ಹಗರಣಗಳಿಂದಾಗಿ ವಿದೇಶ ಗಳಲ್ಲಿ ದೇಶಕ್ಕೆ ಅಪಖ್ಯಾತಿ ಬಂದಿತ್ತು ಎಂದು ತಿರುಗೇಟು ನೀಡಿದ್ದಾರೆ. ದಿಲ್ಲಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜೇಟ್ಲಿ ಅನಾಮಧೇಯ ಮೂಲಗಳಿಂದ ಬರುವ ಹಣದ ಮೂಲವನ್ನು ಹುಡುಕಿ ಮಾರುಕಟ್ಟೆಯಲ್ಲಿ ಅದರ ನಿಜವಾದ ಮಾಲಕನನ್ನು ಪತ್ತೆ ಮಾಡು ವುದೇ ನೋಟು ಅಮಾನ್ಯದ ಉದ್ದೇಶವಾಗಿತ್ತು. ಈ ಮೂಲಕ ಕಪ್ಪು ಹಣ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ. ನೋಟು ಗಳನ್ನು ಅಮಾನ್ಯ ಮಾಡುವ ನಿರ್ಧಾರ ಘೋಷಣೆ ಮಾಡಿದಾಗ ವಿಪಕ್ಷಗಳ ಕಡೆಯಿಂದ ಭಾರೀ ಟೀಕೆ ವ್ಯಕ್ತವಾಯಿತು. ಜನರು ದಂಗೆ ಏಳಲಿದ್ದಾರೆ. ಹಸಿವಿನಿಂದ ಕಂಗೆಟ್ಟು ಬೀದಿಗೆ ಇಳಿಯಲಿದ್ದಾರೆ ಎಂದು ಹೇಳಿದರು. ಆದರೆ ಒಟ್ಟಾರೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು ಎಂದಿದ್ದಾರೆ ಜೇಟಿÉ.
ಸಿನ್ಹಾ ವಿರುದ್ಧ ಕಿಡಿ: ಸರಕಾರದ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಯಶವಂತ್ ಸಿನ್ಹಾರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡ ಜೇಟ್ಲಿ, “ಸಿನ್ಹಾ ಸಚಿವರಾಗಿದ್ದ ವೇಳೆ ದೇಶದ ಅರ್ಥವ್ಯವಸ್ಥೆ ಉದಾರೀಕರಣ ನೀತಿ ಜಾರಿಗೆ ಬಂದ ಅನಂತರ ಅತ್ಯಂತ ಕಠಿನ ಪರಿಸ್ಥಿತಿಗೆ ಇಳಿದಿತ್ತು. ಹೀಗಾಗಿಯೇ ಅವರನ್ನು ಅಂದಿನ ಪ್ರಧಾನಿ ವಾಜಪೇಯಿ ಸಂಪುಟ ದಿಂದ ಕೈಬಿಟ್ಟಿದ್ದರು’ ಎಂದು ಲೇವಡಿ ಮಾಡಿದ್ದಾರೆ. ಚಿದಂಬರಂ ಅವರನ್ನು ಅತ್ಯಂತ ಅಹಂಕಾರಿ ಎಂದು ಜರೆದಿದ್ದ ಸಿನ್ಹಾ ಹಣಕಾಸು ಸಚಿವರಾಗಿ ತಮ್ಮ ದಾಖಲೆ ಮುರಿಯಲು ಮತ್ತೂಮ್ಮೆ ಹುಟ್ಟಿ ಬರಬೇಕು ಎಂದು ಹೇಳಿದ್ದರು. ಅದನ್ನು ಮಾಜಿ ಸಚಿವರು ನೆನಪಿಸಿಕೊಳ್ಳಲಿ ಎಂದಿದ್ದಾರೆ.
ಯುಪಿಎ ಅವಧಿಯಲ್ಲಿ ಜಿಎಸ್‌ಟಿ ಸಹಿತ ಪ್ರಮುಖ ಆರ್ಥಿಕ ನಿರ್ಣಯಗಳ ಬಗ್ಗೆ ಆದ್ಯತೆ ಯಲ್ಲಿ ನಿರ್ಣಯ ಕೈಗೊಳ್ಳದೆ ನೀತಿ ಗ್ರಹಣ (ಪಾಲಿಸಿ ಪ್ಯಾರಾಲಿಸಿಸ್)ವನ್ನು ಅಪ್ಪಿಕೊಂಡವರು ಈಗ ಸರಕು ಮತ್ತು ಸೇವೆಗಳ ತೆರಿಗೆ ನಿಯಮ ಜಾರಿಗೆ ಬಂದಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಜೇಟ್ಲಿ ಟೀಕಿಸಿದ್ದಾರೆ. ಯುಪಿಎ-2ರ ಅವಧಿಯಲ್ಲಿ ವಿವಿಧ ಸಚಿ ವಾಲಯಗಳಿಗೆ ಯೋಜನೆಗಳಿಗೆ ಸಂಬಂಧಿಸಿದಂತೆ ವಿವೇಚನಾಧಿಕಾರವಿತ್ತು. ಅದರಿಂದಾಗಿಯೇ ದಿಲ್ಲಿಯ ಅಧಿಕಾರದ ಪ್ರಮುಖ ಪಡಸಾಲೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಆ ನಿರ್ಧಾರದಿಂದಾಗಿಯೇ ಹಲವು ಹಗರಣಗಳು ಬಹಿರಂಗವಾದವು ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ.
ಅದರಿಂದಾಗಿ ಅಗತ್ಯ ಆದ್ಯತೆ ನೀಡಬೇಕಾದ ಸಣ್ಣ ವಲಯಗಳು ತೊಂದರೆ ಅನುಭವಿಸಿದವು ಎಂದರು. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವಾಲಯಗಳಿಗೆ ಇರುವ ವಿವೇಚಾನಾಧಿಕಾರದಿಂದಲೇ ದೂರ ಸರಿಯ ಲಾಗಿದೆ ಎಂದರು.
ಜಿಎಸ್‌ಟಿಗೆ ದೊಡ್ಡ ಟೀಕೆ: ಅವಸರವಾಗಿ ಜಿಎಸ್‌ಟಿ ಯನ್ನು ಯಾಕೆ ಅನುಷ್ಠಾನ ಮಾಡಲಾಯಿತು ಎಂದು ಇತ್ತೀಚಿನ ದಿನಗಳಲ್ಲಿ ತಮ್ಮ ವಿರುದ್ಧ ಕೇಳಿ ಬರುತ್ತಿರುವ ಅತಿ ದೊಡ್ಡ ಟೀಕೆ ಎಂದರು ಜೇಟ್ಲಿ. ನೀತಿ ಗ್ರಹಣಕ್ಕೆ ಕಾರಣರಾದವರಿಂದಲೇ ಈ ಮಾತುಗಳು ಕೇಳುತ್ತಿವೆ ಎಂದು ಕಾಂಗ್ರೆಸ್ ನಾಯಕ ಚಿದಂಬರಂ, ರಾಹುಲ್ ಗಾಂಧಿ ಮತ್ತಿತರರನ್ನು ಚುಚ್ಚಿದ್ದಾರೆ.
ಶೇ.15ರಷ್ಟು ಹೆಚ್ಚಿಗೆ: ನೋಟುಗಳ ಅಮಾನ್ಯದಿಂದಾಗಿ ನೇರ ತೆರಿಗೆ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಊಹಿಸಲಾಗಿತ್ತು. ಹಣಕಾಸು ಕ್ಷೇತ್ರಕ್ಕೆ ಹಿನ್ನಡೆ ಎಂಬ ಆರೋಪ ತೆರಿಗೆ ಸಂಗ್ರಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಅದರ ಪ್ರಮಾಣ ಶೇ.15.4ಕ್ಕೆ ಏರಿಕೆಯಾಗಿದೆ ಎಂದರು.
ಎಫ್ಐಪಿಬಿ ರದ್ದು ಮಾಡಿರುವುದಕ್ಕೆ ಕೇಂದ್ರ ಹಣಕಾಸು ಖಾತೆ ಮಾಜಿ ಸಚಿವ ಚಿದಂಬರಂ ಆಕ್ಷೇಪಿಸಿ ದ್ದನ್ನು ಪ್ರಸ್ತಾವಿಸಿದ ಜೇಟ್ಲಿ, ಏರ್‌ಸೆಲ್-ಮ್ಯಾಕ್ಸಿಸ್ ಡೀಲ್‌ನಲ್ಲಿ ಹೂಡಿಕೆಗೆ ಮಂಡಳಿ ಮೇಲೆ ಒತ್ತಡ ಹೇರಿದ್ದು ಯಾರು ಎಂದು ಕಾಲೆಳೆದರು.
ರಾಜೀವ್ ಕಾಲದ್ದು: ಬೇನಾಮಿ ಆಸ್ತಿ ವಿರುದ್ಧ ಕಾಯ್ದೆ ದಿ| ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಇರುವಾಗಲೇ ಅನುಮತಿ ನೀಡಲಾಗಿತ್ತು. ಆದರೆ ಅದು ಕಾಗದದಲ್ಲಿಯೇ ಉಳಿಯಿತು. ಆದರೆ ಹಾಲಿ ಕೇಂದ್ರ ಸರಕಾರ ಅದನ್ನು ಜಾರಿ ಮಾಡಿತು ಎಂದರು ವಿತ್ತ ಸಚಿವ ಜೇಟ್ಲಿ. ಹಾಲಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಈ ಅವಧಿಯಲ್ಲಿ ಬಡವರನ್ನು ಕೇಂದ್ರೀಕರಿಸಿ ಯೋಜನೆಗಳ ಲಾಭವನ್ನು ಅವರಿಗೇ ನೇರವಾಗಿ ತಲುಪುವಂತೆ ಮಾಡಲಾಗಿದೆ. ಏರ್‌ಸೆಲ್-ಮ್ಯಾಕ್ಸಿಸ್ ಡೀಲ್‌ನಲ್ಲಿ ಹೂಡಿಕೆಗೆ ಮಂಡಳಿ ಮೇಲೆ ಒತ್ತಡ ಹೇರಿದ್ದು ಯಾರು ಎಂದು ಕಾಲೆಳೆದರು.
ರಾಜೀವ್ ಕಾಲದ್ದು: ಬೇನಾಮಿ ಆಸ್ತಿ ವಿರುದ್ಧ ಕಾಯ್ದೆ ದಿ| ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಇರುವಾಗಲೇ ಅನುಮತಿ ನೀಡಲಾಗಿತ್ತು. ಆದರೆ ಅದು ಕಾಗದದಲ್ಲಿಯೇ ಉಳಿಯಿತು. ಆದರೆ ಹಾಲಿ ಕೇಂದ್ರ ಸರಕಾರ ಅದನ್ನು ಜಾರಿ ಮಾಡಿತು ಎಂದರು ವಿತ್ತ ಸಚಿವ ಜೇಟ್ಲಿ. ಹಾಲಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಈ ಅವಧಿಯಲ್ಲಿ ಬಡವರನ್ನು ಕೇಂದ್ರೀಕರಿಸಿ ಯೋಜನೆಗಳ ಲಾಭವನ್ನು ಅವರಿಗೇ ನೇರವಾಗಿ ತಲುಪುವಂತೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.