ಪೊಲೀಸರು, ಸೇನಾ ಸಿಬಂದಿ ನಡುವೆ ಕಾದಾಟ: ರಕ್ಷಣಾ ಇಲಾಖೆ ಗಂಭೀರ
Team Udayavani, Nov 7, 2018, 12:04 PM IST
ಹೊಸದಿಲ್ಲಿ : ಈ ವಾರದ ಆದಿಯಲ್ಲಿ ಅರುಣಾಚಲ ಪ್ರದೇಶದ ಬೋಮ್ದಿಲಾ ಎಂಬಲ್ಲಿ ಸ್ಥಳೀಯ ಪೊಲೀಸರೊಂದಿಗೆ ಹಲವು ಸೇನಾ ಸಿಬಂದಿಗಳು ಕಾದಾಡಿದ ಪ್ರಕರಣವನ್ನು ತಾನು ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ರಕ್ಷಣಾ ಸಚಿವಾಲಯ ಹೇಳಿದೆ.
ಕಳೆದ ಸೋಮವಾರ ತಮ್ಮ ತಂಡದ ಇಬ್ಬರು ಜವಾನರನ್ನು ದುರ್ನಡತೆಯ ಆರೋಪದ ಮೇಲೆ ಪಶ್ಚಿಮ ಕೆಮೆಂಗ್ ಜಿಲ್ಲೆಯ ಬೋಮ್ದಿಲಾ ಪೊಲೀಸ್ ಠಾಣೆಗೆ ಕರೆತಂದು ಅವರನ್ನು ಕೆಟ್ಟದಾಗಿ ನಡೆಸಿಕೊಂಡದ್ದನ್ನು ಪ್ರತಿಭಟಿಸಲು ಅರುಣಾಚಲ ಸ್ಕೌಟ್ಸ್ ದಳ ಮತ್ತು ಭಾರತೀಯ ಸೇನೆಯ ಇನ್ಫ್ಯಾಂಟ್ರಿ ರೆಜಿಮೆಂಟ್ನ ಕೆಲವು ಸೈನಿಕರು ಠಾಣೆಗೆ ಬಂದು ಪೊಲೀಸರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿದ.
ಸ್ಥಳೀಯರು ಹೇಳುವ ಪ್ರಕಾರ ಆರೋಪಿ ಸೈನಿಕರು ಕಳೆದ ನ.2ರಂದು ಇಲ್ಲಿಗೆ ಬುದ್ಧ ಮಹೋತ್ಸವಕ್ಕೆ ಬಂದಿದ್ದರು; ಮದ್ಯ ಸೇವನೆ ಮಾಡಿದ್ದ ಅವರು ಕೆಲವು ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಿ ಜನರಿಗೆ ತೊಂದರೆ ಉಂಟುಮಾಡಿದ್ದರು ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.